ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ಸ್‌ಗೆ ಸುಲಭ ಜಯ

ಕಾರ್ತಿಕ್, ರೋಹಿತ್ ಅಬ್ಬರಕ್ಕೆ ಡೆವಿಲ್ಸ್ ತಬ್ಬಿಬ್ಬು
Last Updated 9 ಏಪ್ರಿಲ್ 2013, 19:41 IST
ಅಕ್ಷರ ಗಾತ್ರ

ಮುಂಬೈ: ದಿನೇಶ್ ಕಾರ್ತಿಕ್ ಹಾಗೂ ರೋಹಿತ್ ಶರ್ಮಾ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡದವರು ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ 44 ರನ್‌ಗಳ ಗೆಲುವು ಪಡೆದರು.

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಿಕಿ ಪಾಂಟಿಂಗ್ ಸಾರಥ್ಯದ ಇಂಡಿಯನ್ಸ್ ಮೊದಲು ಬಾಟ್ ಮಾಡಿ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತು.

ಮಾಹೇಲ ಜಯವರ್ಧನೆ ನೇತೃತ್ವದ ಡೆವಿಲ್ಸ್ ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಮಾತ್ರ ಪೇರಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಡೇರ್‌ಡೆವಿಲ್ಸ್ ಉನ್ಮುಕ್ತ್ ಚಾಂದ್ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡಿತು. ಜಯವರ್ಧನೆ ಕೂಡಾ (3) ಬೇಗನೇ ಔಟಾದರು.

ಡೇವಿಡ್ ವಾರ್ನರ್ (61, 37 ಎ, 5 ಬೌಂ, 4 ಸಿಕ್ಸರ್) ಮತ್ತು ಮನ್‌ಪ್ರೀತ್ ಜುನೇಜಾ (49) ಮೂರನೇ ವಿಕೆಟ್‌ಗೆ 48 ಎಸೆತಗಳಲ್ಲಿ 82 ರನ್‌ಗಳ ಜೊತೆಯಾಟ ಮರುಹೋರಾಟದ ಸೂಚನೆ ನೀಡಿದರು. ಆದರೆ ವಾರ್ನರ್ ಔಟಾಗುವುದರೊಂದಿಗೆ ಜಯವರ್ಧನೆ ಬಳಗ ಸೋಲಿನ ಹಾದಿ ಹಿಡಿಯಿತು. ಮಿಷಲ್ ಜಾನ್ಸನ್, ಪ್ರಗ್ಯಾನ್ ಓಜಾ ಮತ್ತು ಕೀರನ್ ಪೊಲಾರ್ಡ್ ತಲಾ ಎರಡು ವಿಕೆಟ್ ಪಡೆದರು.

ಕಾರ್ತಿಕ್, ರೋಹಿತ್ ಆಸರೆ: ಇದಕ್ಕೂ ಮುನ್ನ ಮುಂಬೈ ತಂಡ ಆರಂಭಿಕ ಆಘಾತದ ಹೊರತಾಗಿಯೂ ಭಾರಿ ಮೊತ್ತ ಪೇರಿಸಿತು. ಕ್ರಿಕೆಟ್ ಜಗತ್ತಿನ ದಿಗ್ಗಜರೆನಿಸಿಕೊಂಡರುವ ಪಾಂಟಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ಬೇಗನೇ ಕಳೆದುಕೊಂಡ ಇಂಡಿಯನ್ಸ್ ಆರಂಭದಲ್ಲಿ ಕೊಂಚ ಪರದಾಡಿತು. ಮೂರನೇ ವಿಕೆಟ್ ಜೊತೆಯಾಟದಲ್ಲಿ ಕಾರ್ತಿಕ್ ಹಾಗೂ ರೋಹಿತ್ ಕಲೆ ಹಾಕಿದ 132 ರನ್‌ಗಳು ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು.

48 ಎಸೆತಗಳನ್ನು ಎದುರಿಸಿದ ಬಲಗೈ ಬ್ಯಾಟ್ಸ್‌ಮನ್ ಕಾರ್ತಿಕ್ 86 ರನ್‌ಗಳನ್ನು ಗಳಿಸಿದರು. ಇದರಲ್ಲಿ 14 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿವೆ. ಕಾರ್ತಿಕ್‌ಗೆ ತಕ್ಕ ಸಾಥ್ ನೀಡಿದ ರೋಹಿತ್ 50 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್ ಒಳಗೊಂಡಂತೆ ಔಟಾಗದೆ 74 ರನ್ ಗಳಿಸಿದರು.

ಕಾರ್ತಿಕ್ ಹಾಗೂ ರೋಹಿತ್ ಕೊನೆಯಲ್ಲಿ ಲೀಲಾಜಾಲವಾಗಿ ಚೆಂಡನ್ನು ಅಟ್ಟಿದರು. ಮೊದಲ ಹತ್ತು ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 80 ರನ್ ಗಳಿಸಿದ್ದ ಇಂಡಿಯನ್ಸ್ ಕೊನೆಯ ಹತ್ತು ಓವರ್‌ಗಳಲ್ಲಿ 129 ರನ್‌ಗಳನ್ನು ಪೇರಿಸಿತು. ಕಾರ್ತಿಕ್ ಮತ್ತು ರೋಹಿತ್  ಜೋಡಿಯ ಅಬ್ಬರದ ಬ್ಯಾಟಿಂಗ್ ಇದಕ್ಕೆ ಕಾರಣ.

                                                         ಸ್ಕೋರ್ ವಿವರ

ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 209
ರಿಕಿ ಪಾಂಟಿಂಗ್ ಸಿ  ಜಯವರ್ಧನೆ ಬಿ ಇರ್ಫಾನ್ ಪಠಾಣ್  00
ಸಚಿನ್ ತೆಂಡೂಲ್ಕರ್ ರನ್‌ಔಟ್ (ಮಾಹೇಲ ಜಯವರ್ಧನೆ)  01
ದಿನೇಶ್ ಕಾರ್ತಿಕ್ ಸಿ  ಮೆಂಡಿಸ್ ಬಿ ಮಾರ್ನ್ ಮಾರ್ಕೆಲ್  86
ರೋಹಿತ್ ಶರ್ಮಾ ಔಟಾಗದೆ  74
ಕೀರನ್ ಪೊಲಾರ್ಡ್ ಸಿ ನದೀಮ್ ಬಿ ಆಶಿಶ್ ನೆಹ್ರಾ  13
ಅಂಬಟಿ ರಾಯುಡು ಸಿ ಮತ್ತು ಬಿ ಆಶಿಶ್ ನೆಹ್ರಾ  24
ಹರಭಜನ್ ಸಿಂಗ್ ಔಟಾಗದೆ  01
ಇತರೆ: (ಲೆಗ್ ಬೈ-6, ವೈಡ್-3, ನೋಬಾಲ್-1) 10
ವಿಕೆಟ್ ಪತನ: 1-0 (ಪಾಂಟಿಂಗ್; 0.6), 2-1 (ತೆಂಡೂಲ್ಕರ್; 1.3), 3-133 (ಕಾರ್ತಿಕ್; 14.4), 4-163 (ಪೊಲಾರ್ಡ್; 17.3), 5-189 (ರಾಯುಡು; 19.1).
ಬೌಲಿಂಗ್: ಇರ್ಫಾನ್ ಪಠಾಣ್ 4-1-37-1, ಆಶೀಶ್ ನೆಹ್ರಾ 4-0-49-2, ಮಾರ್ನೆ ಮಾರ್ಕೆಲ್ 4-0-43-1, ಉಮೇಶ್ ಯಾದವ್ 3-0-28-0, ಶಹಬಾಜ್ ನದೀಮ್ 3-0-26-0, ಜೀವನ್ ಮೆಂಡಿಸ್ 2-0-20-2

ಡೆಲ್ಲಿ ಡೇರ್‌ಡೆವಿಲ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 165
ಉನ್ಮುಕ್ತ್ ಚಾಂದ್ ಸಿ ಪಾಂಟಿಂಗ್ ಬಿ ಹರಭಜನ್ ಸಿಂಗ್  00
ಡೇವಿಡ್ ವಾರ್ನರ್ ಸಿ ರಾಯುಡು ಬಿ ಮಿಷೆಲ್ ಜಾನ್ಸನ್  61
ಮಾಹೇಲ ಜಯವರ್ಧನೆ ಸಿ ಕಾರ್ತಿಕ್ ಬಿ ಮಿಷೆಲ್ ಜಾನ್ಸನ್  03
ಮನ್‌ಪ್ರೀತ್ ಜುನೇಜಾ ರನೌಟ್  49
ಜೀವನ್ ಮೆಂಡಿಸ್ ಸಿ ಮತ್ತು ಬಿ ಕೀರನ್ ಪೊಲಾರ್ಡ್  00
ಇರ್ಫಾನ್ ಪಠಾಣ್ ಸಿ ಜಾನ್ಸನ್ ಬಿ ಪ್ರಗ್ಯಾನ್ ಓಜಾ  10
ಕೇದಾರ್ ಜಾದವ್ ಸಿ ಮತ್ತು ಬಿ ಲಸಿತ್ ಮಾಲಿಂಗ  01
ಶಹಜಾಬ್ ನದೀಮ್ ಸಿ ಧವನ್ ಬಿ ಪ್ರಗ್ಯಾನ್ ಓಜಾ  02
ಮಾರ್ನ್ ಮಾರ್ಕೆಲ್ ಔಟಾಗದೆ  23
ಆಶೀಶ್ ನೆಹ್ರಾ ಸಿ ಓಜಾ ಬಿ ಕೀರನ್ ಪೊಲಾರ್ಡ್  01
ಉಮೇಶ್ ಯಾದವ್ ಔಟಾಗದೆ  05
ಇತರೆ: (ಬೈ-1, ಲೆಗ್‌ಬೈ-1, ವೈಡ್-8) 10
ವಿಕೆಟ್ ಪತನ: 1-0 (ಚಾಂದ್; 0.1), 2-13 (ಜಯವರ್ಧನೆ; 2.4), 3-95 (ವಾರ್ನರ್; 10.4), 4-97 (ಮೆಂಡಿಸ್; 11.1), 5-118 (ಪಠಾಣ್; 14.1), 6-127 (ಜಾಧವ್; 15.2), 7-134 (ನದೀಮ್; 16.3), 8-140 (ಜುನೇಜಾ; 17.4), 9-154 (ನೆಹ್ರಾ; 19.1)
ಬೌಲಿಂಗ್: ಹರಭಜನ್ ಸಿಂಗ್ 4-0-25-1, ಲಸಿತ್ ಮಾಲಿಂಗ 4-0-20-1, ಮಿಷೆಲ್ ಜಾನ್ಸನ್ 4-0-49-2, ಪ್ರಗ್ಯಾನ್ ಓಜಾ 4-0-34-2, ಕೀರನ್ ಪೊಲಾರ್ಡ್ 4-0-35-2

ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 44 ರನ್ ಗೆಲುವು
ಪಂದ್ಯಶ್ರೇಷ್ಠ: ದಿನೇಶ್ ಕಾರ್ತಿಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT