ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಕನಸು ಅರಳುವ ಸಮಯ..!

Last Updated 28 ಜೂನ್ 2011, 19:30 IST
ಅಕ್ಷರ ಗಾತ್ರ

ಕಾಲೇಜಿನ ಮೊದಲ ದಿನ ಎಂದರೆ ಎಲ್ಲದೂ ಹೊಸತೇ. ಕ್ಯಾಂಪಸ್, ಅಧ್ಯಾಪಕರು, ಗೆಳೆಯರು ಎಲ್ಲರೂ ಹೊಸಬರೇ. ಹಾಗಾಗಿ ಒಂದಷ್ಟು ಉದ್ವೇಗ, ಒಂದಷ್ಟು ಕುತೂಹಲ, ಒಂದಷ್ಟು ತಳಮಳ ಸಾಮಾನ್ಯ. ಅಂತೆಯೇ ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮೊದಲ ದಿನವಂತೂ ಇವೆಲ್ಲವೂ ಮಿಳಿತಗೊಂಡಿತ್ತು. 

ಕಾಲೇಜು ಪ್ರವೇಶಿಸಿದ ಆ ಉತ್ಸಾಹದಲ್ಲಿ ಅವರು ತಮ್ಮ ಭವಿಷ್ಯದ ಕನಸುಗಳ ಬಗ್ಗೆ, ಕಾಲೇಜಿನ ಮೊದಲ ದಿನದ ಅನುಭವಗಳ ಬಗ್ಗೆ ಸಾಕಷ್ಟು ಮಾತುಗಳನ್ನು ಹಂಚಿಕೊಂಡರು. ಪತ್ರಕರ್ತೆ, ವೈದ್ಯೆ, ಎಂಜಿನಿಯರ್‌ನಿಂದ ಹಿಡಿದು ಚಾರ್ಟರ್ಡ್     ಅಕೌಂಟೆಂಟ್ ಆಗುವ ಕುರಿತು ಅವರು ಕನಸುಗಳನ್ನು ಅವರು ಹೆಣೆಯುತ್ತಿದ್ದಾರೆ.

ಪ್ರಥಮ ಪಿಯುಸಿ ಕಲಾ ವಿಭಾಗದ ವೀಣಾಗಂತೂ ಇಲ್ಲಿನ ಅಧ್ಯಾಪಕರ ಮೇಲೆ ಎಲ್ಲಿಲ್ಲದ ಮಮತೆ. `ಅವರು ಚೆನ್ನಾಗಿ ಕಲಿಸುತ್ತಾರೆ. ಮಾತ್ರವಲ್ಲ, ಸೀನಿಯರ್ ವಿದ್ಯಾರ್ಥಿಗಳೂ ಒಳ್ಳೆಯವರೇ~ ಇದು ವೀಣಾಳ ಅಭಿಪ್ರಾಯ.

ವೀಣಾಳ ಹೆಚ್ಚಿನ ಸಂಬಂಧಿಗಳು ಇದೇ ಕಾಲೇಜಿನ ಹಳೆ ವಿದ್ಯಾರ್ಥಿಗಳಾಗಿದ್ದಾರೆ. ಅದರಲ್ಲೂ ತಂದೆಯ ಸಂಬಂಧಿಯೊಬ್ಬರಂತೂ ಕಾಲೇಜಿನ ಪ್ರಾಂಶುಪಾಲರೂ ಆಗಿದ್ದರಂತೆ.

ಕಾಮರ್ಸ್ ವಿದ್ಯಾರ್ಥಿಗಳಂತೂ ಕಾಲೇಜಿನ ಜತೆ ಈಗಾಗಲೇ ಹೊಂದಿಕೊಂಡಾಗಿದೆ. `ಕಾಲೇಜಿನ ಒಳಗೆ ಕಾಲಿಟ್ಟಾಗಲಂತೂ ನಾನು ನರ್ವಸ್ ಆಗಿದ್ದೆ.

ಎಷ್ಟು ನರ್ವಸ್ ಆಗಿದ್ದೆನೆಂದರೆ ಯಾವುದೋ ಅಪರಿಚಿತರ ಮಧ್ಯೆ ನುಗ್ಗಿದಂತೆ ಅನಿಸಿತು. ವಿದ್ಯಾರ್ಥಿಗಳ ಹೆಸರು ಕೇಳಲು ಕೂಡ ನನಗೆ ಸ್ವಲ್ಪ ಮುಜುಗರವಾಗಿತ್ತು. ಆದರೆ ನಿಧಾನವಾಗಿ ನಾನು ಸ್ನೇಹಿತರ ಗುಂಪನ್ನು ಕಟ್ಟಿಕೊಂಡೆ.~ ಇದು ಚಾರ್ಟರ್ಡ್ ಅಕೌಂಟೆಂಟ್ ಆಗಲು ಬಯಸುವ ಅಲೀನಾಳ ಅಭಿಪ್ರಾಯ.

ಕಾಮರ್ಸ್‌ನ ಇನ್ನೋರ್ವ ವಿದ್ಯಾರ್ಥಿನಿ ಶರೋನ್ ಸ್ಟೀಫನ್‌ಸನ್‌ಗಂತೂ ಕಾಲೇಜಿನ ಮೊದಲ ದಿನ ಕುತೂಹಲದ ದಿನವಾಗಿತ್ತಂತೆ. `ನನ್ನದು ಯಾವ ತರಗತಿ ಎಂದು ಗೊತ್ತಿರಲಿಲ್ಲ.

ಹಾಗಾಗಿ ಒಂದು ತರಗತಿಯಿಂದ ಇನ್ನೊಂದು ತರಗತಿಗೆ ಬದಲಾಗುತ್ತಾ ಇದ್ದೆ~ ಎಂದು ನಗುತ್ತಾ ಹೇಳಿದಳು. `ಸೀನಿಯರ್‌ಗಳು ತುಂಬಾ ಒಳ್ಳೆಯವರಾಗಿದ್ದರು.

ಅವರು ನನಗೆ ಕಾಲೇಜಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು~ ಎಂದು ಆಕೆ ವಿವರಿಸಿದಳು. ಈಗಂತೂ ಆಕೆ ನೃತ್ಯದ ಆಡಿಷನ್‌ನಲ್ಲಿ ಭಾಗವಹಿಸುತ್ತಿದ್ದು ಕಾಲೇಜಿನ ನೃತ್ಯ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಬ್ಯಾಡ್ಮಿಂಟನ್ ಮತ್ತು ಥ್ರೋಬಾಲ್ ಆಡುವುದೂ ತನಗಿಷ್ಟ ಎನ್ನುತ್ತಾಳೆ ಆಕೆ.

ವಿಜ್ಞಾನ ವಿಭಾಗದ ಪಿಸಿಎಂಬಿ ವಿದ್ಯಾರ್ಥಿಯಾಗಿರುವ ನೇಹಾ ಕಾಲೇಜಿನ ಆತ್ಮೀಯ ವಾತಾವರಣವನ್ನು ಇಷ್ಟಪಡುತ್ತಾಳೆ. `ನಾನಂತೂ ಬಹಳಷ್ಟು ಗೆಳೆಯರನ್ನು ಸಂಪಾದಿಸಿಕೊಂಡೆ. ಬಯಾಲಜಿ ಸ್ವಲ್ಪ ಕಷ್ಟ ಅಂತ ನನಗನ್ನಿಸುತ್ತಿದೆ.

ಹಾಗಾಗಿ ನಾನು ಸ್ವಲ್ಪ ಹಾರ್ಡ್‌ವರ್ಕ್ ಮಾಡಲೇ ಬೇಕು. ಆದರೆ ಡಾನ್ಸ್ ಮಾಡುವುದು ಬಾಸ್ಕೆಟ್‌ಬಾಲ್, ಫುಟ್‌ಬಾಲ್ ಮತ್ತು ಬ್ಯಾಡ್ಮಿಂಟನ್ ನನಗಿಷ್ಟ~ ಎನ್ನುತ್ತಾಳೆ ಆಕೆ.
ಜ್ಯೋತಿ ನಿವಾಸ್‌ಗೆ ಸೇರುವುದಕ್ಕಿಂತ ಮೊದಲೇ ತಮನ್ನಾ ಮತ್ತು ನೇಹಾ ಒಂದೇ ಶಾಲೆಯಲ್ಲಿ ಓದುತ್ತಿದ್ದರು.

ಈಗಲೂ ಜೊತೆಯಾಗಿರುವುದಕ್ಕೆ ಅವರು ಖುಷಿಯಾಗಿದ್ದಾರೆ ಜೊತೆಗೆ ಹೊಸ ಹೊಸ ಸ್ನೇಹಿತರನ್ನು ಸಂಪಾದಿಸುವಲ್ಲಿ ನಿರತರಾಗಿದ್ದಾರೆ. `ನಾನಂತೂ ತಮನ್ನಾಳ ಸೆಕ್ಷನ್‌ನಲ್ಲಿ ಕುಳಿತಿದ್ದೆ~ ಎಂದು ಹೇಳುವಾಗ ನೇಹಾ ಮುಖದಲ್ಲಿ ನಗುವಿನ ಅಲೆ. ಉಳಿದವರಂತೆಯೇ ಆಕೆಗೂ ಡಾನ್ಸ್ ತುಂಬಾ ಇಷ್ಟ.

`ನನಗೆ ಕ್ರೈಸ್ಟ್ ಕಾಲೇಜಿನಲ್ಲಿ ಸೀಟು ದೊರಕಿತ್ತು. ಆದರೆ ಜ್ಯೋತಿ ನಿವಾಸ್‌ಗೆ ಸೇರಬೇಕೆಂದು ನನ್ನ ಹೆತ್ತವರು ಒತ್ತಾಯಿಸಿದರು. ನಾನು ಕೊ ಎಜುಕೇಶನ್ ಶಾಲೆಯಲ್ಲಿ ಕಲಿತ ಕಾರಣ ಆರಂಭದಲ್ಲಿ ಹುಡುಗಿಯರ ಕಾಲೇಜಿಗೆ ಬಂದಾಗ ಏನೋ ಸ್ಟ್ರೇಂಜ್ ಎನ್ನಿಸಿತ್ತು.

ಆದರೆ ಈಗ ನಿಜವಾಗಿಯೂ ಎಂಜಾಯ್ ಮಾಡುತ್ತಿದ್ದೇನೆ~ ತಮನ್ನಾ ಹೇಳುತ್ತಾಳೆ.  ತಮನ್ನಾಳಂತೂ ಎಲ್ಲದರಲ್ಲಲ್ಲೂ ಎತ್ತಿದ ಕೈ. ಹಾಗಾಗಿ ಕೊಯರ್, ಬಾಸ್ಕೆಟ್‌ಬಾಲ್, ನಾಟಕ ಮತ್ತು ನೃತ್ಯದಲ್ಲೂ ಭಾಗವಹಿಸಲು ಮುಂದಾಗಿದ್ದಾಳೆ.

ಕಾಮರ್ಸ್ ವಿದ್ಯಾರ್ಥಿಯಾದ ನತಾಶಾಳಂತೂ ತರಗತಿಯ ಪ್ರತಿನಿಧಿಯಾಗಲು ಬಯಸುತ್ತಾಳೆ. `ಈ ವರ್ಷ ನನಗೆ ತರಗತಿ ಮತ್ತು ಕ್ರೀಡಾ ಪ್ರತಿನಿಧಿಯಾಗಲು ಇಷ್ಟವಿದೆ. ಮುಂದಿನ ವರ್ಷ ಕಾಲೇಜಿನ ಕ್ರೀಡಾ ಪ್ರತಿನಿಧಿಯಾಗಲು ಬಯಸುತ್ತೇನೆ~ ಎನ್ನುತ್ತಾಳೆ.

ಇದುವರೆಗೂ ನಾನೂ ಒಳ್ಳೆಯ ಸಮಯವನ್ನು ಕಳೆದಿದ್ದೇನೆ. ಸೀನಿಯರ್‌ಗಳು ಕೂಡ ಚೆನ್ನಾಗಿದ್ದಾರೆ ಎಂದು ಹೇಳಲು ಆಕೆ ಮರೆಯಲಿಲ್ಲ. ಕಾಲೇಜಿನ ಬಗ್ಗೆ ತಿಳಿದುಕೊಳ್ಳಲು ಮತ್ತು ಕ್ಯಾಂಪಸ್‌ನೊಳಗೆ ಹಾಗೂ ಸಮೀಪದಲ್ಲಿನ ಫಲಾಹಾರಗಳು ಸಿಗುವ ಸ್ಥಳಗಳನ್ನು ಹುಡುಕುವುದರಲ್ಲಿ   ಫ್ರೆಶರ್‌ಗಳು ನಿರತರಾಗಿದ್ದಾರೆ.

ಇನ್ನು ಸ್ಟೈಲ್ ಬಗ್ಗೆ ಹೇಳುವುದಾದಲ್ಲಿ ಕಾಲೇಜಿನ ಡ್ರೆಸ್‌ಕೋಡ್ ಅನ್ನು ಗಮನದಲ್ಲಿಟ್ಟುಕೊಂಡು ತಮ್ಮದೇ ಸ್ಟೈಲ್ ಸ್ಟೇಟ್‌ಮೆಂಟ್‌ಗಳನ್ನು ಹುಡುಕುವುದರಲ್ಲಿ ಅವರೀಗ ತಲ್ಲೆನರಾಗಿದ್ದಾರೆ. ಎಲ್ಲರಿಗೂ ಆಲ್ ದಿ ಬೆಸ್ಟ್ ಹೇಳೋಣ...


ಕಾಲೇಜು ಪ್ರವೇಶಿಸಿದ ತರುಣ ತರುಣಿಯರ ಕಣ್ಮುಂದೆ ಸಾವಿರ ಕನಸು. ಒಲವಿನ ಬಣ್ಣಗಳ ಕಾಮನಬಿಲ್ಲು.  ಹೊತ್ತಿಗೆ ತೆರೆದು ಅಧ್ಯಯನಕ್ಕೆ ಕುಳಿತರೆ ಡಾಕ್ಟರ್, ಎಂಜಿನೀಯರ್,

ಪತ್ರಕರ್ತ/ರ್ತೆ, ಶಿಕ್ಷಕ/ಕಿ, ಚಾರ್ಟರ್ಡ್ ಅಕೌಂಟೆಂಟ್ ಆಗುವ ಮತ್ತದೇ ಭವಿಷ್ಯದ ಕನಸು. ಅವರೀಗ ಕ್ಯಾಂಪಸ್‌ನಲ್ಲಿ ಕನಸುಗಳನ್ನು ಹೆಣೆಯುತ್ತಿದ್ದಾರೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT