ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಶಾ ಡಿಯೋಲ್ ನಿಶ್ಚಿತಾರ್ಥ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಧರ್ಮೇಂದ್ರ ಹಾಗೂ ಹೇಮಾಮಾಲಿನಿ ಅವರ ಮೊದಲ ಪುತ್ರಿ ಇಶಾ ಡಿಯೋಲ್ ಅವರ ವಿವಾಹ ನಿಶ್ಚಿತಾರ್ಥ ವ್ಯಾಪಾರಿ ಭರತ್ ತಖತನಿ ಅವರ ಜೊತೆ ಭಾನುವಾರ ನಡೆದಿದ್ದು, ತಮ್ಮ ಅಳಿಯ `ಆಕರ್ಷಕ ವ್ಯಕ್ತಿ~ ಎಂದು ಹೇಮಾಮಾಲಿನಿ ವರ್ಣಿಸಿದ್ದಾರೆ.

`ವಿವಾಹದ ದಿನಾಂಕ ನಿರ್ಧರಿಸಿದ ಮೇಲೆ ನಾವು ಆ ಬಗ್ಗೆ ಅಧಿಕೃತ ಪ್ರಕಟಣೆ ನೀಡುತ್ತೇವೆ~ ಎಂದು ಹೇಮಾಮಾಲಿನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂಬೈನ ಜುಹುವಿನಲ್ಲಿರುವ ಮಾಜಿ `ಕನಸಿನ ಕನ್ಯೆ~ಯ ಬಂಗಲೆಯಲ್ಲಿ ಖಾಸಗಿಯಾಗಿ ನಡೆದ ಸಮಾರಂಭದಲ್ಲಿ, ಕುಟುಂಬ ಸದಸ್ಯರು,  ನಟಿ ಜಯಾ ಬಚ್ಚನ್ ಸೇರಿದಂತೆ ಆಪ್ತೇಷ್ಟರು ಭಾಗವಹಿಸಿದ್ದರು.
`ಭರತ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವುದರಿಂದ ನನಗೆ ತುಂಬಾ ಸಂತೋಷವಾಗಿದೆ~ ಎಂದು ಇಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT