ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಕ್ಷಣಕ್ಕಾಗಿ ಕಾಯುತ್ತಿದ್ದೆ: ತಾರಪೂರ್

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಇದು ನನ್ನ ಪಾಲಿಗೆ ವಿಶೇಷ ಸುದ್ದಿ. ಈ ಕ್ಷಣಕ್ಕಾಗಿ ನಾನು ಕಾಯುತ್ತಿದ್ದೆ. ಇಷ್ಟು ದಿನಗಳ ನನ್ನ ಕನಸು ನನಸಾಗಿದೆ~

- `ಪ್ರಜಾವಾಣಿ~ಗೆ ಮಂಗಳವಾರ ಈ ರೀತಿ ಪ್ರತಿಕ್ರಿಯೆ ನೀಡಿದ್ದು ಕನ್ನಡದ ಅಂಪೈರ್ ಶಾವೀರ್ ತಾರಪೂರ್. ಕಾರಣ ಶಾವೀರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಆಯ್ಕೆ ಆಗಿದ್ದಾರೆ. ಈ ಸಾಧನೆ ಮಾಡುತ್ತಿರುವ ಕರ್ನಾಟಕದ 11ನೇ ಅಂಪೈರ್ ಕೂಡ.

ಏಕದಿನ ಕ್ರಿಕೆಟ್‌ನಲ್ಲಿ ಯಶಸ್ವಿ ಅಂಪೈರ್ ಎನಿಸಿರುವ ತಾರಪೂರ್ ಉಪಖಂಡದಲ್ಲಿ ನಡೆದ ವಿಶ್ವಕಪ್ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲೂ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಈಗ ಟೆಸ್ಟ್‌ನಲ್ಲಿ ಅವಕಾಶ ಒಲಿದು ಬಂದಿದೆ. ದುಬೈ ಹಾಗೂ ಶಾರ್ಜಾದಲ್ಲಿ ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಿನ ಸರಣಿಯಲ್ಲಿ ಶಾವೀರ್ ಅಂಪೈರ್ ಆಗಿರುತ್ತಾರೆ.

`ಟೆಸ್ಟ್‌ನಲ್ಲಿ ಅಂಪೈರ್ ಆಗಬೇಕು ಎಂಬುದು ನನ್ನ ಬಹುದಿನಗಳ ಆಸೆಯಾಗಿತ್ತು. ಆ ಆಸೆ ಈಗ ಕೈಗೂಡಿದೆ. ನಾನು ಈ ಹಿಂದೆ ಮೂರು ಟೆಸ್ಟ್ ಪಂದ್ಯಗಳಲ್ಲಿ ಟಿವಿ ಅಂಪೈರ್ ಆಗ್ದ್ದಿದ್ದೆ~ ಎಂದು ಅವರು ನುಡಿದರು.

ಟೆಸ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದ ಕರ್ನಾಟಕದ ಕೊನೆಯ ಅಂಪೈರ್ ಎಂದರೆ ಎ.ವಿ.ಜಯಪ್ರಕಾಶ್.
`ಇಲ್ಲೂ ಯಶಸ್ವಿಯಾಗುತ್ತೇನೆ ಎಂಬ ವಿಶ್ವಾಸ ನನ್ನದು. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವಿದೆ. ಏಕದಿನ ಕ್ರಿಕೆಟ್‌ನ ಅನುಭವ ನೆರವಿಗೆ ಬರಲಿದೆ. ಆ ಕ್ಷಣವನ್ನು ಎದುರು ನೋಡುತ್ತಿದ್ದೇನೆ~ ಎಂದು ಶಾವೀರ್ ತಿಳಿಸಿದರು.

ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಅಜೇಯ 200 ರನ್ ಗಳಿಸಿದಾಗ ಅಂಪೈರ್ ಆಗಿದ್ದವರು ತಾರಪೂರ್ ಎಂಬುದು ವಿಶೇಷ.  53 ವರ್ಷ ವಯಸ್ಸಿನ ಶಾವೀರ್ ಆರು ಪ್ರಥಮ ದರ್ಜೆ ಪಂದ್ಯಗಳಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ್ದರು.  

`ಅಂಪೈರ್ ಆಗಲು ನನ್ನ ತಂದೆ ಕೆಕಿ ಬಿ ತಾರಪೂರ್‌ಅವರೇ ನನಗೆ ಸ್ಫೂರ್ತಿ. ಅವರು ಕ್ರಿಕೆಟ್ ಕೋಚ್ ಆಗಿದ್ದರು. ಆದರೆ ನಾನು ಅಂಪೈರ್ ಆಗಲು ಬಯಸಿದೆ~ ಎಂದು ಅವರು ತಿಳಿಸಿದರು. ದ್ರಾವಿಡ್ ಅವರ ಬಾಲ್ಯದ ಕೋಚ್ ಕೆಕಿ ಬಿ ತಾರಪೂರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT