ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಶಾಲೆ ಕೊಠಡಿಗಳಿಗೆ ಬಾಗಿಲುಗಳೇ ಇಲ್ಲ

Last Updated 15 ಮೇ 2012, 6:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಇದು ನಗರದ ಹೃದಯಭಾಗದಲ್ಲಿರುವ ಶಾಲೆ. ಈ ಶಾಲಾ ಕಟ್ಟಡದ ಸಮೀಪವೇ ಶಿಕ್ಷಣ ಇಲಾಖೆ ಅಧಿಕಾರಿ ಕಚೇರಿಗಳು, ಗುರುಭವನ, ಪೊಲೀಸ್ ಠಾಣೆ ಎಲ್ಲವೂ ಇದೆ. ಆದರೆ, ರಾತ್ರಿಯಾಗುತ್ತಿದ್ದಂತೆ ಇದು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ.

ನಗರದ ಹಳೇ ಮಾಧ್ಯಮಿಕ ಪ್ರೌಢಶಾಲೆಯ ಕಟ್ಟಡದ ಸ್ಥಿತಿ ಇದು. ಪ್ರೌಢಶಾಲೆ ಆವರಣವನ್ನು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನೀಡಲಾಗುತ್ತಿದೆ. ಇದಕ್ಕಾಗಿ ವೇದಿಕೆಯನ್ನು ಪುನರ್ ನಿರ್ಮಿಸಿ, ಹೊರಗಿನ ಕಟ್ಟಡಕ್ಕೆ ಮಾತ್ರ ಸುಣ್ಣ ಬಣ್ಣ ಬಳಿಯಲಾಗಿದೆ. ಆದರೆ, ಇದು ಹೊರಗೆ ಹೊಳಪು, ಒಳಗೆ ಕೊಳಕು ಎನ್ನುವಂತಾಗಿದೆ.

ಒಳಗಿನ ಕಟ್ಟಡದ ಕೊಠಡಿಗಳಿಗೆ ಬಾಗಿಲುಗಳೇ ಇಲ್ಲ. ಇದು ಪುಂಡಪೋಕರಿಗಳಿಗೆ ಅನೈತಿಕ ಚಟುವಟಿಕೆಗಳನ್ನು ನಡೆಸಲು ಶಿಕ್ಷಣ ಇಲಾಖೆ ಅನುಕೂಲ ಮಾಡಿಕೊಟ್ಟಂತಾಗಿದೆ. ಈ ಕೊಠಡಿಗಳಲ್ಲಿ ಮೂತ್ರ ವಿಸರ್ಜನೆ ಸಹ ಮಾಡಲಾಗುತ್ತಿದೆ. ಮದ್ಯವ್ಯಸನಿಗಳು ಸಹ ಇಲ್ಲಿ ಆಗಮಿಸಿ ಮದ್ಯಪಾನ ಮಾಡುತ್ತಿರುವುದರಿಂದ ಅಲ್ಲಲ್ಲಿ ಬಾಟಲ್‌ಗಳು ಸಹ ಬಿದ್ದಿವೆ.

ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವ ಈ ಕೊಠಡಿಗಳ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವುದು ಸಾರ್ವಜನಿಕರ ದೂರು.

ಸದಾ ಜನರಿಂದ ತುಂಬಿರುವ ಪ್ರದೇಶದಲ್ಲಿರುವ ಈ ಕಟ್ಟಡದ ಬಗ್ಗೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿರು ವುದು ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗಿದೆ. ಈ ಕೊಠಡಿಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಇಲ್ಲಿನ ವಾತಾವರಣವನ್ನು ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT