ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಬಾಟಮ್‌ಲೆಸ್ ಕೇಟ್ ಚಿತ್ರದ ಸರದಿ...

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ರಾಜಕುಮಾರ ಹ್ಯಾರಿ ಅವರ ಅರೆ ನಗ್ನ ಚಿತ್ರ ಹಾಗೂ ರಾಜಕುಮಾರ ವಿಲಿಯಮ್ಸ ಪತ್ನಿ ಕೇಟ್ ಮಿಡ್ಲ್‌ಟನ್ ಅವರ `ಟಾಪ್‌ಲೆಸ್~ ಛಾಯಾಚಿತ್ರ ಪತ್ರಿಕೆಗಳಲ್ಲಿ ಪ್ರಕಟಗೊಂಡು ತೀವ್ರ ಮುಜುಗರ ಅನುಭವಿಸಿದ್ದ ಬ್ರಿಟನ್ನಿನ ರಾಜ ಮನೆತನ ಈಗ ಅಂತಹದ್ದೇ ಪ್ರಕರಣದಲ್ಲಿ ಮತ್ತೊಮ್ಮೆ ಮುಜುಗರಕ್ಕೀಡಾಗಿದೆ.
ಬ್ರಿಟನ್ನಿನ ಭವಿಷ್ಯದ ರಾಣಿ ಕೇಟ್ ಮಿಡ್ಲ್‌ಟನ್ ಅವರ `ಬಾಟಮ್‌ಲೆಸ್~ ಛಾಯಾಚಿತ್ರವನ್ನು ಡೆನ್ಮಾರ್ಕ್‌ನ ನಿಯತಕಾಲಿಕವೊಂದು ಪ್ರಕಟಿಸಿದೆ.

ಪತಿ ವಿಲಿಯಮ್ಸ ಅವರೊಂದಿಗೆ ರಜಾ ಕಳೆಯುತ್ತಿದ್ದ ಕೇಟ್ ಅವರು ಬಿಕಿನಿ  ಬದಲಾಯಿಸುತ್ತಿದ್ದ ದೃಶ್ಯವನ್ನು  ಡೆನ್ಮಾರ್ಕ್‌ನ  ನಿಯತಕಾಲಿಕ  `ಸೆ ಒಗ್ ಹೊರ್~ (ನೋಡಿ ಮತ್ತು ಕೇಳಿ) ಪ್ರಕಟಿಸಿದೆ. ಇತರ ಯಾವುದೇ ಪತ್ರಿಕೆಗಳು  ಇದುವರೆಗೆ ಪ್ರಕಟಿಸದೇ ಇರುವ ರೀತಿಯಲ್ಲಿ ಈ ನಿಯತಕಾಲಿಕೆಯು 16 ವಿಶೇಷ ಪುಟಗಳಲ್ಲಿ ಕೇಟ್ ಅವರ ಅರೆನಗ್ನ ಚಿತ್ರಗಳನ್ನು ಮುದ್ರಿಸಿದೆ. ಇವುಗಳಲ್ಲಿ ಎದುರು ಬದುರಾಗಿ ಸೆರೆ ಹಿಡಿಯಲಾಗಿರುವ ಬಿಕಿನಿ ಬದಲಾಯಿಸುವ ಮೂರು ಚಿತ್ರಗಳಿವೆ ಎಂದು `ದಿ ಡೈಲಿ ಮೇಲ್~ ವರದಿ ಮಾಡಿದೆ.

ಕೇಟ್ ಅವರ `ಬಾಟಮ್‌ಲೆಸ್~ ಚಿತ್ರವನ್ನು ನಿಯತಕಾಲಿಕೆಯು ತನ್ನ ಮುಖಪುಟದಲ್ಲಿಯೇ ಪ್ರಕಟಿಸಿದೆ.
ರಾಜ ದಂಪತಿ ದಕ್ಷಿಣ ಫ್ರಾನ್ಸ್‌ನಲ್ಲಿ ರಜಾ ದಿನ ಕಳೆಯುತ್ತಿದ್ದ ಸಂದರ್ಭದಲ್ಲಿಯೇ ಈ ಛಾಯಾಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT