ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು: ಸೌರಭ್ ನೂತನ ರಾಷ್ಟ್ರೀಯ ದಾಖಲೆ

Last Updated 6 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಭೋಪಾಲ್: ಅತ್ಯುತ್ತಮ ಪ್ರದರ್ಶನ ಮುಂದುವರಿಸಿರುವ ಕರ್ನಾಟಕದ ಸೌರಭ್ ಸಾಂಗ್ವೇಕರ್ ಇಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ. ಸ್ಪರ್ಧೆಯ ಎರಡನೇ ದಿನ ಕೂಡ ಕರ್ನಾಟಕದ ಸ್ಪರ್ಧಿಗಳು ಪಾರಮ್ಯ ಮೆರೆದರು.

ಪ್ರಕಾಶ್ ತರಣ್ ಪುಷ್ಕರ್ ಈಜುಗೊಳದಲ್ಲಿ ನಡೆಯುತ್ತಿರುವ ಬಾಲಕರ ವಿಭಾಗದ ಗುಂಪು-1ರ 1500 ಮೀ.ಫ್ರೀಸ್ಟೈಲ್‌ನಲ್ಲಿ ಶನಿವಾರ ಸೌರಭ್ (16: 08.80) ಚಿನ್ನದ ಪದಕ ಗೆದ್ದರು. ಅಷ್ಟು ಮಾತ್ರವಲ್ಲದೇ, ಎರಡು ವರ್ಷಗಳ ಹಿಂದೆ ಕರ್ನಾಟಕದವರೇ ಆದ ಎ.ಪಿ.ಗಗನ್ (16: 17.22) ಅವರು ಸ್ಥಾಪಿಸಿದ್ದ ದಾಖಲೆ ಮುರಿದರು.

ಚಾಂಪಿಯನ್‌ಷಿಪ್‌ನ ಪದಕ ಪಟ್ಟಿಯಲ್ಲಿ ಕರ್ನಾಟಕ ತಂಡ ಒಟ್ಟ 29 ಪದಕ (11 ಚಿನ್ನ, 8 ಬೆಳ್ಳಿ, 10 ಕಂಚು) ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ ಒಟ್ಟು 20 ಪದಕ (ಚಿನ್ನ 9, ಬೆಳ್ಳಿ 6, ಕಂಚು 5) ಎರಡನೇ ಸ್ಥಾನದಲ್ಲಿದೆ.

ಫಲಿತಾಂಶಗಳು ಇಂತಿವೆ: ಬಾಲಕರ ವಿಭಾಗ: ಗುಂಪು-1: 1500 ಮೀ. ಫ್ರೀಸ್ಟೈಲ್: ಸೌರಭ್ ಸಾಂಗ್ವೇಕರ್ (ಕರ್ನಾಟಕ; 16: 08.80, ರಾಷ್ಟ್ರೀಯ ದಾಖಲೆ)-1, ಸನು ದೆಬಾಂತ್ (ಪಶ್ಚಿಮ ಬಂಗಾಳ; 16: 30.08)-2, ಸಚಿನ್ ಕುಮಾರ್ (ಉತ್ತರಪ್ರದೇಶ; 17:13.81)-3; 50 ಬ್ರೆಸ್ಟ್‌ಸ್ಟ್ರೋಕ್: ಆಕಾಶ್ ರೋಹಿತ್ (ಕರ್ನಾಟಕ; 32.25)-1, ಅಮನ್ ಘಾಯಿ (ಪಂಜಾಬ್; 32.39)-2, ಅಸ್ಮಿತ್ ಗೊಯಲ್ (ಮಧ್ಯಪ್ರದೇಶ; 32.75)-3; 200ಮೀ. ಬಟರ್‌ಫ್ಲೈ: ಮಿತೇಶ್ ಮನೋಜ್ (ಕರ್ನಾಟಕ; 2:10.41)-1, ರಾಹುಲ್ ಚೋಕ್ಷಿ (ಗುಜರಾತ್; 2:12.55)-2, ಸನು ದತ್ತಾ(ಪಶ್ಚಿಮ ಬಂಗಾಳ; 2:13.98)-3; 800 ಮೀ. ಫ್ರೀಸ್ಟೈಲ್: ವೇದಾಂತ್ ರಾವ್ (ಮಹಾರಾಷ್ಟ್ರ; 9:17.12)-1. ಮೊಹಮ್ಮದ್ ಯೂಸುಫ್ ಸಲೀಮ್ (ಕರ್ನಾಟಕ; 9:18.01)-2, ಸುಧಾಂಶು ಶರ್ಮ (ಮಹಾರಾಷ್ಟ್ರ; 9:25.12)-3; 200 ಮೀ.ಬಟರ್ ಫ್ಲೈ: ಸುಪ್ರಿಯ ಮೊಂಡಲ್ (ಪಶ್ಚಿಮ ಬಂಗಾಳ; 2:18.46)-1, ಎಸ್.ಕೆ.ಆದರ್ಶ ನಾರಾಯಣ (ತಮಿಳುನಾಡು; 2:20.44)-2, ನಿಖಿಲ್ ರಾಜರಾಮ್ (ಕರ್ನಾಟಕ; 2:23. 76)-3.

ಬಾಲಕಿಯರು: ಗುಂಪು-1: 50ಮೀ. ಫ್ರೀಸ್ಟೈಲ್: ಟಿ.ಸ್ನೇಹಾ (ಕರ್ನಾಟಕ; 28.77)-1, ಪ್ರಿಯಾಂಕ ಪ್ರಿಯದರ್ಶಿನಿ (ದೆಹಲಿ; 28.64)-2, ಆರ್.ಸುಶ್ಮಿತಾ (ತಮಿಳುನಾಡು; 28.70)-3; 400 ಮೀ. ಫ್ರೀಸ್ಟೈಲ್: ಕಾಂಚಿ ದೇಸಾಯಿ (ಮಹಾರಾಷ್ಟ್ರ; 4:39.29)-1, ಅನುಷಾ ಮೆಹ್ತಾ (ತಮಿಳುನಾಡು; 4:41.62)-2, ಪ್ರತಿಮಾ (ಕರ್ನಾಟಕ; 4:44.20)-3; 50 ಮೀ.    ಬ್ರೆಸ್ಟ್‌ಸ್ಟ್ರೋಕ್: ಪ್ರಿಯಾಂಕ ಪ್ರಿಯದರ್ಶಿನಿ (ದೆಹಲಿ; 35.79-ರಾಷ್ಟ್ರೀಯ ದಾಖಲೆ)-1, ದಿವ್ಯಾ ಗುರುಸ್ವಾಮಿ (ಕರ್ನಾಟಕ; 36.17)-2, ಗೌರಿ ದೇಸಾಯಿ (ಮಹಾರಾಷ್ಟ್ರ; 36.29)-3; 200 ಮೀ. ಬಟರ್‌ಫ್ಲೈ: ಅರ್ಹತಾ ಮಾಘವಿ (ಕರ್ನಾಟಕ; 2:28.46)-1, ವಂದಿತಾ ಧರಿವಾಲ್ (ಗುಜರಾತ್; 2:31.29)-2, ಎಸ್.ದರ್ಶಿನಿ (ತಮಿಳುನಾಡು; 2:34.33)-3; 400 ಮೀ.ಫ್ರೀಸ್ಟೈಲ್: ಮೋನಿಕಾ ಗಾಂಧಿ (ಮಹಾರಾಷ್ಟ್ರ; 4:42.16)-1, ಆಶ್ರೀತಾ ಎನ್.ಭಾರದ್ವಾಜ್; 4:43.28)-2, ಮಾಳವಿಕಾ (ಕರ್ನಾಟಕ; 4:48.81)-3; 50 ಮೀ.ಬ್ರೆಸ್ಟ್‌ಸ್ಟ್ರೋಕ್: ಎ.ವಿ.ಜಯವೀಣಾ (ತಮಿಳುನಾಡು; 36.11)-1, ಚಾರು ಹಂಸಿನಿ (ಕರ್ನಾಟಕ; 37.03)-2, ಮೋನಿಕಾ ಗಾಂಧಿ (ಮಹಾರಾಷ್ಟ್ರ; 37.35)-3; 200 ಮೀ. ಬಟರ್‌ಫ್ಲೈ: ಆಕಾಂಕ್ಷ ವೋರಾ (ಮಹಾರಾಷ್ಟ್ರ; 2:30.09)-1, ಶೆರ್ಲಿನ್ ಮೇಘನಾ (ತಮಿಳುನಾಡು; 2:30.44)-2, ಸಿಮನ್ ದೀಪಕ್ (ಕರ್ನಾಟಕ; 2:36.51)-3.

ವಾಟರ್ ಪೋಲೊ: ಬಾಲಕರು: ಕರ್ನಾಟಕ (9)-ಮಣಿಪುರ (3). ಬಾಲಕಿಯರು: ಮಹಾರಾಷ್ಟ್ರ (10)-ಕರ್ನಾಟಕ (4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT