ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ವಾಹನ ಚಾಲನ ತರಬೇತಿ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ 2011-12ನೇ ಸಾಲಿನ ಉಚಿತ ಭಾರಿ ವಾಹನ ಚಾಲನಾ ತರಬೇತಿಗೆ ಜನವರಿ 7 ರಂದು ಬೆಳಿಗ್ಗೆ 11ಕ್ಕೆ ನೇರ ಸಂದರ್ಶನ ಏರ್ಪಡಿಸಿದೆ.

ಹಿಂದುಳಿದ ವರ್ಗಗಳ ಪ್ರವರ್ಗ 1, 2ಎ, 3ಎ ಮತ್ತು 3ಬಿ ಗೆ ಸೇರಿದ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಲಘು ವಾಹನ ಚಾಲನಾ ಪರವಾನಗಿ ಪಡೆದು ಒಂದು ವರ್ಷ ತುಂಬಿರುವ, ಎಸ್ಸೆಸ್ಸೆಲ್ಸಿ ಪಾಸಾಗಿರುವ, 18 ರಿಂದ 35 ವರ್ಷಗಳ  ಒಳಗಿನ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಅಭ್ಯರ್ಥಿಗಳಿಗೆ ರೂ. 40 ಸಾವಿರ ಹಾಗೂ ನಗರ ಪ್ರದೇಶದ ಅಭ್ಯರ್ಥಿಗಳಿಗೆ ರೂ. 55 ಸಾವಿರ ಮಿತಿಯೊಳಗಿರಬೇಕು. ಸಾರಿಗೆ ಪ್ರಾಧಿಕಾರದಿಂದ ಪರವಾನಗಿ ಪತ್ರ ಪಡೆಯಲು ತಗಲುವ ಶುಲ್ಕವನ್ನು ಅಭ್ಯರ್ಥಿಗಳು ಪಾವತಿಸ ಬೇಕು. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ತಾವೇ ವಸತಿ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು. ತರಬೇತಿ ಪೂರ್ಣಗೊಂಡ ನಂತರ ನಿಗಮದಿಂದ 1 ಸಾವಿರ ರೂಪಾಯಿ ತರಬೇತಿ ಭತ್ಯೆಯನ್ನು ಭರಿಸಲಾಗುವುದು.
 
ಆಸಕ್ತ ಅಭ್ಯರ್ಥಿಗಳು ಜಾತಿ, ಆದಾಯ ಪ್ರಮಾಣ ಪತ್ರ, ಎಸ್ಸೆಸ್ಸೆಲ್ಸಿ ಅಂಕ ಪಟ್ಟಿ ಹಾಗೂ ವರ್ಗಾವಣೆ ಪತ್ರ, ಲಘು ವಾಹನ ಚಾಲನಾ ಪರವಾನಗಿ ಪತ್ರಗಳೊಂದಿಗೆ ಜನವರಿ 7 ರಂದು ಬೆಳಿಗ್ಗೆ 11ಕ್ಕೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಗಮ, ವಿಭಾಗೀಯ ವ್ಯವಸ್ಥಾಪಕರ ಕಚೇರಿ, ಬೆಂಗಳೂರು ವಿಭಾಗ, ದೇವರಾಜ ಅರಸು ಭವನ, 4 ನೇ ಮಹಡಿ, ನಂ.16 ಡಿ, ಮಿಲ್ಲರ್ಸ್‌ ಟ್ಯಾಂಕ್ ಬಂಡ್ ಏರಿಯಾ, ವಸಂತ ನಗರ ಇಲ್ಲಿ ಹಾಜರಾಗಬಹುದು. ದೂರವಾಣಿ ಸಂಖ್ಯೆ 2237 4832 ಮತ್ತು 2237 4834 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT