ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಧಿಕಾರಿಗಳಾಗಿ ಗಂಗಾಧರಶ್ರೀ ನೇಮಕ

ಗುರು ಸಿದ್ಧರಾಮೇಶ್ವರ ಮಠ
Last Updated 3 ಜನವರಿ 2014, 9:17 IST
ಅಕ್ಷರ ಗಾತ್ರ

ಸಂಡೂರು:ತಾಲ್ಲೂಕಿನ ಯಶವಂತ ನಗರ ಗ್ರಾಮದಲ್ಲಿನ  ಗುರು ಸಿದ್ಧ ರಾಮೇಶ್ವರ ಸಂಸ್ಥಾನ ವಿರಕ್ತಮಠದ ನಿಯೋಜಿತ ಉತ್ತರಾಧಿಕಾರಿಗಳಾಗಿ ಗಂಗಾಧರಶ್ರೀ ಅವರನ್ನು ಇತ್ತೀಚೆಗೆ ನೇಮಕ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ವೀರಶೈವ ಸಮಾಜದ ಮುಖಂಡ ಚಿತ್ರಿಕಿ ತಿಪ್ಪಣ್ಣ, ಗ್ರಾಮದಲ್ಲಿನ ಉತ್ತಮ ಇತಿಹಾಸ ಮತ್ತು ಐತಿಹ್ಯವುಳ್ಳ ಶ್ರೀಗುರು ಸಿದ್ಧರಾಮೇಶ್ವರ ಮಠಕ್ಕೆ ಉತ್ತರಾಧಿಕಾರಿಗಳು ದೊರೆತಿದ್ದು, ಇನ್ನು ಮುಂದೆ ಸ್ವಾಮೀಜಿಯವರ ಮಾರ್ಗ ದರ್ಶನದಲ್ಲಿ ಶ್ರೀಮಠ ಹಾಗೂ ಸಮಾಜದ ಅಭಿವೃದ್ಧಿಗೆ ಎಲ್ಲರೂ ಪ್ರಯತ್ನಿಸಬೇಕು ಎಂದು ತಿಳಿಸಿದರು.

ಶ್ರೀಮಠಕ್ಕೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ವಿಠಲಾಪುರ ಗ್ರಾಮದವರಾದ ಶ್ರೀಗಂಗಾಧರ ದೇವರನ್ನು ನಿಯೋಜಿತ ಉತ್ತರಾಧಿಕಾರಿಯನ್ನಾಗಿ ನೇಮಿಸ ಲಾಯಿತು. ನಿಯೋಜಿತ ಶ್ರೀಗಳಿಗೆ ಆಂಧ್ರಪ್ರದೇಶದ ಉರವಕೊಂಡ ಸಂಸ್ಥಾನ ಮಠದ  ಕರಿಬಸವರಾಜೇಂದ್ರ ಸ್ವಾಮೀಜಿ ಲಿಂಗಾಯತ ಧರ್ಮದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಚಿತ್ರಿಕಿ ಮೃತ್ಯುಂಜಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರಿಕಿ ಚಂದ್ರಮೌಳಿ ನಿಯೋಜಿತ ಶ್ರೀಗಳ ಪರಿಚಯ ಮಾಡಿಕೊಟ್ಟರು. ಉಪನ್ಯಾಸಕ ಎ.ಮಲ್ಲಕಾರ್ಜುನ ಮಹಾಮನೆ ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ಕರ್ನಾಟಕದ ಮಠಗಳು ಎಂಬ ವಿಷಯ ಕುರಿತಾಗಿ ಉಪನ್ಯಾಸ ನೀಡಿದರು.

ಕಾರ್ಯಕ್ರಮ ದಲ್ಲಿ ಶ್ರೀಮಠದ ನಿಯೋಜಿತ ಉತ್ತರಾಧಿಕಾರಿ ಶ್ರೀಗಂಗಾಧರ ದೇವರು, ಸಾನಿಧ್ಯವನ್ನು ವಹಿಸಿದ್ದ ಸಂಡೂರಿನ ಪ್ರಭು ಸ್ವಾಮೀಜಿ, ಕೊಟ್ಟೂರಿನ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದಿಪುರದ ಶ್ರೀಮಹೇಶ್ವರ ಸ್ವಾಮೀಜಿ, ಕಮ್ಮರಚೇಡಿನ ಕಲ್ಯಾಣ ಸ್ವಾಮೀಜಿ, ಕೂಡ್ಲಿಗಿಯ  ಪ್ರಶಾಂತ ಶಿವಾಚಾರ್ಯ ಸ್ವಾಮೀಜಿ,   ಶಾಸಕರಾದ ಈ.ತುಕಾ ರಾಮ್, ಗುಡೆಕೋಟೆ ನಾಗರಾಜ್, ಒಂಟೆ ಶಿವಪ್ಪ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರಾದ ಬಿ.ನಾಗನಗೌಡ್ರು ಮಾತನಾಡಿದರು.

ಸಂತಾಪ: ಇತ್ತೀಚೆಗೆ ನಿಧನರಾದ ಕವಿ ಜಿ.ಎಸ್. ಶಿವರುದ್ರಪ್ಪ, ಗ್ರಾಮದ ಶ್ರೀಮಠದ ಭಕ್ತರಾದ ಚಿತ್ರಿಕಿ ಶಿವ ಯೋಗಪ್ಪ ಮತ್ತು ಭೈರಾಪುರದ ಶಿವಣ್ಣ ನವರಿಗೆ ಶ್ರದ್ಧಾಂಜಲಿ ಅರ್ಪಿಸ ಲಾಯಿತು.ಗೀತಾ ಸೋಮೇಶ್, ನರಿ ಬಸವರಾಜ ಹಾಗೂ ಕೆ.ಉಮೇಶ್ ಸಂಗೀತ ಕಾರ್ಯಕ್ರಮ ನೀಡಿದರು. ಚಿತ್ರಿಕಿ ಸತೀಶ್ ಸ್ವಾಗತಿಸಿದರು. ಎನ್. ಎಂ. ತಿಪ್ಪೆರುದ್ರಯ್ಯ  ನಿರೂಪಿಸಿದರು.

ಸಿ.ಜೆ. ಕೆಂಚನಗೌಡ, ಚಿತ್ರಿಕಿ ಮಹಾಬಲೇಶ್ವರ, ಚಿತ್ರಿಕಿ ವಿಶ್ವನಾಥ, ಒಂಟೆ ಬಸವರಾಜ, ಜವಳಿ ನಾಗರಾಜ, ಜವಳಿ ಮಲ್ಲಿ ಕಾರ್ಜುನ, ಎ.ಈರಣ್ಣ, ಮಂಜುನಾಥ ಗೌಡ, ಟಿ.ಬಸವರಾಜ, ಕತ್ತಿ ಭರ್ಮಪ್ಪ, ಸಿಂಗಾರಿ ಸೋಮಪ್ಪ, ಶಿವಮೂರ್ತಿ ಸ್ವಾಮಿ,  ನಾಗಲಿಂಗಪ್ಪ, ಶ್ರೀಮಠದ ಸದ್ಭಕ್ತರು, ಗ್ರಾಮದ ವೀರಶೈವ ತರುಣ ಸಂಘದ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT