ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನಗಳಲ್ಲಿ ಅನಂತ್ ಮತಯಾಚನೆ

Last Updated 13 ಏಪ್ರಿಲ್ 2014, 19:44 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಭಾನುವಾರ ಮುಂಜಾನೆಯೇ ನಗರದ ವಿವಿಧ ಬಡಾವಣೆಗಳ ಉದ್ಯಾನಗಳಿಗೆ ಭೇಟಿ ನೀಡಿ ವಾಯುವಿಹಾರಿಗಳ ಬೆಂಬಲ ಕೋರಿದರು.

ವಿಜಯನಗರ, ಈಜುಕೊಳ ಬಡವಾಣೆ, ಆರ್.ಪಿ.ಸಿ. ಬಡಾವಣೆ, ಸುಬ್ಬಣ್ಣ ಗಾರ್ಡನ್, ಬಾಪೂಜಿ ಬಡವಾಣೆ ಮತ್ತು ಸುತ್ತಮುತ್ತಲಿನ ವಿವಿಧ ಉದ್ಯಾನಗಳಲ್ಲಿ ಸುತ್ತಾಡಿದರು. ಬಿಜೆಪಿ ಮುಖಂಡ ವಿ. ಸೋಮಣ್ಣ, ಪಾಲಿಕೆ ಸದಸ್ಯ ಗಂಗಬೈರಯ್ಯ ಜತೆಗಿದ್ದರು.

ಬೆಳಿಗ್ಗೆ ಯಡಿಯೂರು ಮತ್ತು ಸೌತ್ ಎಂಡ್ ಸರ್ಕಲ್‌ನಿಂದ ತೆರೆದ ವಾಹನದಲ್ಲಿ ಪ್ರಚಾರ ಆರಂಭಿಸಿದರು.  ನಂತರ ಪದ್ಮನಾಭನಗರ ವಾರ್ಡ್ ವ್ಯಾಪ್ತಿಯ ತ್ಯಾಗರಾಜನಗರ, ಹೊಸಕೆರೆಹಳ್ಳಿ, ಕುಮಾರಸ್ವಾಮಿ ಬಡಾವಣೆ, ಚಿಕ್ಕಲಸಂದ್ರ, ಗಣೇಶ ಮಂದಿರ, ಬನಶಂಕರಿ, ತಣಿಸಂದ್ರ ವಾರ್ಡ್‌ಗಳಲ್ಲಿ ಪ್ರಚಾರ ಮುಂದುವರಿಸಿದರು. ನಟ ಗಣೇಶ್ ಮತ್ತು ಪತ್ನಿ ಶಿಲ್ಪಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಗಣೇಶ್ ಮಾತನಾಡಿ, ‘ನಾನು ಪಕ್ಷ ನೋಡಿ ಪ್ರಚಾರಕ್ಕೆ ಬರಲಿಲ್ಲ. ಅನಂತಕುಮಾರ್ ಮತ್ತು ಮೋದಿ ಅವರಿಗಾಗಿ ಬಂದಿದ್ದೇನೆ. ಕೇಂದ್ರದಲ್ಲಿ ದಕ್ಷ ಆಡಳಿತ ಬೇಕಾಗಿದೆ’ ಎಂದು ಹೇಳಿದರು.

ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ, ಪಕ್ಷದ ಇತರೆ ಮುಖಂಡರಾದ ಡಾ. ಎಂ.ಆರ್.ವಿ. ಪ್ರಸಾದ್, ಲಕ್ಷ್ಮೀಕಾಂತ್, ವೆಂಕಟೇಶ ನಾಯ್ಡು, ಗೋವಿಂದರಾಜು, ಎಲ್.ಆರ್. ರಮೇಶ್, ಬಸವ­ರಾಜು, ಸುರೇಶ್ ಮತ್ತಿತರರು ಭಾಗಿಯಾಗಿದ್ದರು.

ಸಂಜೆ ದೀಪಾಂಜಲಿನಗರದಲ್ಲಿ ಗಣೇಶ ದೇವಸ್ಥಾನ ಸಮೀಪದಿಂದ ಎಫ್‌ಸಿಐ ಬಡಾವಣೆ, ಚಂದ್ರಾ ಲೇಔಟ್, ನಾಗರಬಾವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ಪಕ್ಷದ ನಾಯಕರಾದ  ಅಶ್ವತ್ಥನಾರಾಯಣ, ಆನಂದ್, ವಾಗೀಶ್, ಮೋಹನ್‌ಕುಮಾರ್, ಉಮೇಶ್ ಶೆಟ್ಟಿ, ಆಶದ್ ಪಾಷಾ, ಗೋವಿಂದ ಮಾಲಿ, ತೇಜಸ್ವಿ ಸೂರ್ಯ, ಸಪ್ತಗಿರಿ ಗೌಡ, ವಿಶ್ವನಾಥಗೌಡ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT