ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ: ಕೊಲ್ಲಿ ರಾಷ್ಟ್ರಗಳಿಗೆ ತೆರಳುವವರ ಸಂಖ್ಯೆ ಇಳಿಕೆ

Last Updated 1 ಸೆಪ್ಟೆಂಬರ್ 2013, 20:06 IST
ಅಕ್ಷರ ಗಾತ್ರ

ಚೆನ್ನೈ(ಪಿಟಿಐ): ದಕ್ಷಿಣ ಭಾರತದ ರಾಜ್ಯಗಳಿಂದ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗ ಅರಸಿ ಹೋಗುವವರ ಸಂಖ್ಯೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ದೇಶದಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶ ಮತ್ತು ಉತ್ತಮ ವೇತನ ಇದಕ್ಕೆ ಪ್ರಮುಖ ಕಾರಣ ಎಂದು ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯ ಹೇಳಿದೆ.

2008ರಲ್ಲಿ ದಕ್ಷಿಣ ಭಾರತದಿಂದ 10ನೇ ತರಗತಿಗಿಂತಲೂ ಕಡಿಮೆ ವ್ಯಾಸಂಗ ಮಾಡಿದ 88,389 ಜನರು ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗ ಅರಸಿ ಹೋಗಿದ್ದರು. 2009ರಲ್ಲಿ ಈ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿತ್ತು. ಅಂದರೆ, 43,174ಕ್ಕೆ ಇಳಿಕೆ ಕಂಡಿತು. 2010ರಲ್ಲಿ 15,571ಕ್ಕಿಳಿಯಿತು. 2011ರಲ್ಲಿ ಮಾತ್ರ ಮತ್ತೆ 24,585ಕ್ಕೆ ಏರಿಕೆ ಕಂಡಿತು. 2012ರಲ್ಲಿ ಇಳಿಮುಖವಾಗಿ 21,129ಕ್ಕೆ ಬಂದಿತು. ಪ್ರಸಕ್ತ ವರ್ಷ ಈವರೆಗೆ 10,317 ಜನರು ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗ ಅರಸಿ ಹೋಗಿದ್ದಾರೆ ಎಂದು ಸಚಿವಾಲಯದ ಅಂಕಿ-ಅಂಶ ತಿಳಿಸಿವೆ.

ತಗ್ಗಿದ ಆಕರ್ಷಣೆ
`ಭಾರತೀಯರಲ್ಲಿ ಈಗ ಕೊಲ್ಲಿ ರಾಷ್ಟ್ರಗಳ ಉದ್ಯೋಗ ಆಕರ್ಷಣೆ ಕಡಿಮೆಯಾಗಿದೆ. ಗುತ್ತಿಗೆ ಆಧಾರದಲ್ಲಿ ಕೊಲ್ಲಿ ರಾಷ್ಟ್ರಗಳಿಗೆ ಕೆಲಸಕ್ಕೆ ಹೋಗಲು ಜನರು ಮೊದಲಿನಂತೆ ಸಿದ್ಧರಿಲ್ಲ. ಅಲ್ಲಿನ ಪ್ರತಿಕೂಲ ಹವಾಮಾನ ಸಹಿಸುವುದಕ್ಕಿಂತ ಅವರಿಗೆ ಇಲ್ಲಿಯೇ ತಾವು ಬಯಸಿದ ಜೀವನ ಲಭಿಸುತ್ತಿದೆ' ಎನ್ನುತ್ತಾರೆ ವಲಸಿಗರ ಪರವಾಗಿ ಕೆಲಸ ಮಾಡುತ್ತಿರುವ ಡಿ.ಜಯಶಂಕರ್.

ದಕ್ಷಿಣ ಭಾರತದಿಂದ ಕಳೆದ ಐದು ವರ್ಷಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಗೆ 56,220, ಕುವೈತ್‌ಗೆ 52,739 ಮತ್ತು ಮಲೇಷ್ಯಾಕ್ಕೆ 43,564 ಜನರು ಉದ್ಯೋಗ ಅರಸಿ ಹೋಗಿದ್ದಾರೆ. ಒಮಾನ್ 25,460, ಖತಾರ್ 13,188, ಬಹರೇನ್ 6,555 ಮತ್ತು ಸೌದಿ ಅರೇಬಿಯಾ 4,011 ಭಾರತೀಯ ಉದ್ಯೋಗಿಗಳನ್ನು ಸೆಳೆದುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT