ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಾವಕಾಶ... ಅಲ್ಲಲ್ಲಿ

Last Updated 15 ಜುಲೈ 2012, 19:30 IST
ಅಕ್ಷರ ಗಾತ್ರ

ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್ ಲಿಮಿಟೆಡ್
ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ (ಡಿಎಂಆರ್‌ಸಿ) 30 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ ಹೆಸರು: ಜೂನಿಯರ್ ಎಂಜಿನಿಯರಿಂಗ್ (ಸಿವಿಲ್; ಒಪ್ಪಂದದ ಮೇರೆಗೆ)
ವೇತನ ಶ್ರೇಣಿ: ರೂ. 13500-25520.
ವಯೋಮಿತಿ: 28 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷದ ಡಿಪ್ಲೊಮಾ (ಕನಿಷ್ಠ ಶೇ 65 ಅಂಕ).
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ (ವಾಕ್ ಇನ್ ಇಂಟರ್‌ವ್ಯೆ). 24, 25 ಹಾಗೂ 26ರ ಜುಲೈ, 2012.
ವಿಳಾಸ: ಎಕ್ಸಿಕ್ಯೂಟೀವ್ ಡೈರೆಕ್ಟರ್ (ಎಚ್‌ಆರ್), ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್ ಲಿಮಿಟೆಡ್, ಮೆಟ್ರೊ ಭವನ್, ಮೂರನೇ ಮಹಡಿ, ಬಾರಾಕಂಬಾ ರಸ್ತೆ, ನವದೆಹಲಿ
ಮಾಹಿತಿಗೆ www.delhimetrorail.com

ಸಶಸ್ತ್ರ ಸೀಮಾ ಬಲ
ಸಶಸ್ತ್ರ ಸೀಮಾ ಬಲದಲ್ಲಿ (ಎಸ್‌ಎಸ್‌ಬಿ) 1524 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9-8-2012. 
ಹುದ್ದೆ ವಿವರ: ಕುಕ್ (490 ಹುದ್ದೆ), ವಾಷರ್ ಮ್ಯಾನ್ (367), ಬಾರ್ಬರ್ (38), ಸಫಾಯಿವಾಲಾ (262), ವಾಟರ್ ಕ್ಯಾರಿಯರ್ (211) ವೇಟರ್ (42), ಕಾರ್ಪೆಂಟರ್ (27), ಪೇಂಟರ್ (23), ಟೇಲರ್ (19), ಕೋಬ್ಲರ್ (37), ಗಾರ್ಡನರ್ (8 ಹುದ್ದೆ).
ವೇತನ ಶ್ರೇಣಿ: ರೂ. 5200-20200
ವಯೋಮಿತಿ: ಕನಿಷ್ಠ 18, ಗರಿಷ್ಠ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ.50
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ 
ವಿಳಾಸ: ಇನ್‌ಸ್ಪೆಕ್ಟರ್ ಜನರಲ್, ಫ್ರಾಂಟಿಯರ್ ಮುಖ್ಯ ಕಚೇರಿ (ಎಸ್‌ಎಸ್‌ಬಿ), ರುಕನ್‌ಪುರ ಹೌಸ್, ಬೇಲಿ ರಸ್ತೆ, ಪಾಟ್ನಾ (ಬಿಹಾರ)-800014
ಮಾಹಿತಿಗೆ http://www.ssbrectt.gov.in
 
ದಾಮೋದರ್ ವ್ಯಾಲಿ ಕಾರ್ಪೊರೇಷನ್
ದಾಮೋದರ್ ವ್ಯಾಲಿ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ (ಡಿವಿಸಿ) 247 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-7-2012. 
ಹುದ್ದೆ ವಿವರ: ಗ್ರ್ಯಾಜುಯೇಟ್ ಎಂಜಿನಿಯರ್ ಟ್ರೈನೀಸ್ (ಎಲೆಕ್ಟ್ರಿಕಲ್- 76 ಹುದ್ದೆ, ಮೆಕಾನಿಕಲ್ 116, ಸಿ ಅಂಡ್ ಐ 18, ಐಟಿ 6, ಕಮ್ಯೂನಿಕೇಷನ್ 1 ಹುದ್ದೆ). ಮ್ಯಾನೇಜ್‌ಮೆಂಟ್ ಟ್ರೈನಿ (ಎಲೆಕ್ಟ್ರಿಕಲ್ 9 ಹುದ್ದೆ, ಮೆಕಾನಿಕಲ್ 20, ಟೆಕ್ 1 ಹುದ್ದೆ).
ವೇತನ ಶ್ರೇಣಿ: ಎಂಜಿನಿಯರಿಂಗ್ ಟ್ರೈನೀಸ್‌ಗೆ ರೂ. 15600-39100.
ವಯೋಮಿತಿ: 29 ವರ್ಷ ದಾಟಿರಬಾರದು. 
* ಗೇಟ್ (ಜಿಎಟಿಇ)-2012 ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಈ ಅವಕಾಶವಿದೆ.
ಅರ್ಜಿ ಶುಲ್ಕ: ರೂ.50
ಆಯ್ಕೆ ವಿಧಾನ: ಗುಂಪು ಚರ್ಚೆ ಹಾಗೂ ವೈಯಕ್ತಿಕ ಸಂದರ್ಶನ
ಮಾಹಿತಿಗೆ  http://www.dvc.gov.in

ಇಸ್ರೊ
ಇಂಡಿಯನ್ ಸ್ಪೇಸ್ ರಿಸರ್ಚ್ ಆರ‌್ಗನೈಜೇಷನ್‌ನ (ಇಸ್ರೊ) ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್‌ನಲ್ಲಿ 62 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-7-2012. 
ಹುದ್ದೆ ಹೆಸರು: 1) ಟೆಕ್ನಿಷಿಯನ್-ಬಿ: 39 ಹುದ್ದೆ, 2) ಕೆಟರಿಂಗ್ ಅಟೆಂಡೆಂಟ್-ಎ: 23 ಹುದ್ದೆ.
ವೇತನ ಶ್ರೇಣಿ: ರೂ. 5200-20200.
ವಯೋಮಿತಿ: ಹುದ್ದೆ 1ಕ್ಕೆ 35 ವರ್ಷ ದಾಟಿರಬಾರದು. ಹುದ್ದೆ 2ಕ್ಕೆ 25 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಸ್ಪೀಡ್ ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 30-7-2012.
ವಿಳಾಸ: ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್, ರಿಕ್ರೂಟ್‌ಮೆಂಟ್ ಅಂಡ್ ರಿವ್ಯೆ ಸೆಕ್ಷನ್, ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್, ಇಸ್ರೊ (ಪೋಸ್ಟ್), ಎಟಿಎಫ್ ಏರಿಯಾ, ತಿರುವನಂತಪುರ-695022, ಕೇರಳ. 
ಮಾಹಿತಿಗೆ www.vssc.gov.in
 
ಉತ್ತರ ರೈಲ್ವೆ
ಉತ್ತರ ರೈಲ್ವೆಯಲ್ಲಿ 73 ಹುದ್ದೆಗಳನ್ನು (ಅಂಗವಿಕಲರು) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-7-2012. 
ವೇತನ ಶ್ರೇಣಿ: ರೂ.9300-34800 ಹಾಗೂ ರೂ.5200-20200.
ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 43 ವರ್ಷ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ
ವಿಳಾಸ: ಡೆಪ್ಯುಟಿ ಪರ್ಸೊನೆಲ್ ಆಫೀಸರ್, ಪರ್ಸೊನೆಲ್ ಬ್ರಾಂಚ್, ಮೂರನೇ ಮಹಡಿ, ಅನೆಕ್ಸ್-1, ಉತ್ತರ ರೈಲ್ವೆ, ಮುಖ್ಯಕಚೇರಿ, ಬರೋಡಾ ಹೌಸ್, ನವದೆಹಲಿ
ಮಾಹಿತಿಗೆ  www.nr.indianrailways.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT