ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ ದರ್ಜೆ ಅರ್ಹತಾ ಅಥ್ಲೀಟ್‌ಗಳಿಗೆ ಮಾತ್ರ ಒಲಿಂಪಿಕ್ಸ್ ಪ್ರವೇಶ: ಎಎಫ್‌ಐ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಎ~ ದರ್ಜೆಯ ಅರ್ಹತೆ ಗಿಟ್ಟಿಸುವ ಅಥ್ಲೀಟ್‌ಗಳನ್ನು ಮಾತ್ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಕಳುಹಿಸಲು ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್‌ಐ) ಮುಂದಾಗಿದೆ.

ಎಎಫ್‌ಐನ ಎರಡು ದಿನಗಳ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಲ ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಕಳಪೆ ಪ್ರದರ್ಶನ ತೋರಿದ್ದು ಇದಕ್ಕೆ ಕಾರಣ ಎನ್ನಲಾಗಿದೆ. ಈ ಸಂಬಂಧ ರಾಷ್ಟ್ರೀಯ ಕೋಚ್ ಬಹದ್ದೂರ್ ಸಿಂಗ್ ಎಎಫ್‌ಐಗೆ ವರದಿ ನೀಡಿದ್ದರು.

`ಬಿ ದರ್ಜೆಯ ಅರ್ಹತೆ ಗಿಟ್ಟಿಸಿದವರನ್ನು ಇನ್ನುಮುಂದೆ ಒಲಿಂಪಿಕ್ಸ್‌ಗೆ ಕಳುಹಿಸುವುದಿಲ್ಲ. ಅಕಸ್ಮಾತ್ ಕೊಂಚದರಲ್ಲಿ ಎ ದರ್ಜೆಯ ಅರ್ಹತೆ ತಪ್ಪಿಸಿಕೊಂಡ ಅಥ್ಲೀಟ್‌ಗಳ ಬಗ್ಗೆ ಆಯ್ಕೆ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ~ ಎಂದು ಎಎಫ್‌ಐ ಅಧ್ಯಕ್ಷ ಅದಿಲ್ ಸುಮರಿವಾಲಾ ನುಡಿದಿದ್ದಾರೆ.

`ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿ, ಅನುಭವ ಸಿಗಲಿ ಎಂಬ ಕಾರಣಕ್ಕೆ ನಾವು ಅಥ್ಲೀಟ್‌ಗಳನ್ನು ಕಳುಹಿಸುವುದಿಲ್ಲ. ಪ್ರಯೋಗ ಮಾಡಲೂ ಮುಂದಾಗುವುದಿಲ್ಲ~ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT