ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್ ಸಮ್ಮೇಳನಕ್ಕೆ ಚಾಲನೆ

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಂ.ಎಸ್. ರಾಮಯ್ಯ ತಾಂತ್ರಿಕ ಕಾಲೇಜು ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಮೂರು ದಿನಗಳ `ಎಂಜಿನಿಯರಿಂಗ್ ವ್ಯವಸ್ಥೆಯಲ್ಲಿನ ಅತ್ಯಾಧುನಿಕ ನಿಯಂತ್ರಣ ವಿಧಾನ~ ಕುರಿತ ರಾಷ್ಟ್ರೀಯ ಸಮ್ಮೇಳನಕ್ಕೆ ಗುರುವಾರ ಚಾಲನೆ ದೊರೆಯಿತು. 

 ಮುಖ್ಯ ಅತಿಥಿಯಾಗಿದ್ದ ಡಾ.ಎಸ್. ಶ್ರೀನಾಥ್‌ಕುಮಾರ್ ಸಮ್ಮೇಳನವನ್ನು ಉದ್ಘಾಟಿಸುವ ಮೂಲಕ `ವಿಮಾನ ನಿಯಂತ್ರಣ ಎಂಜಿನಿಯರಿಂಗ್‌ನಲ್ಲಿ ಆಧುನಿಕ ವಿಧಾನಗಳು~ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು.

 ಸಂಶೋಧಕರು, ಬೋಧಕರು ಹಾಗೂ ಕಲಿಕಾ ಸಮುದಾಯವನ್ನು ಒಂದೆಡೆ ಸೇರಿಸಿ ನೂತನ ಸಂಶೋಧನೆಯ ಫಲಿತಾಂಶ, ಭವಿಷ್ಯದ ಅಭಿವೃದ್ಧಿ ಹಾಗೂ ಎಂಜಿನಿಯರಿಂಗ್ ವ್ಯವಸ್ಥೆಯಲ್ಲಿನ ಅತ್ಯಾಧುನಿಕ ನಿಯಂತ್ರಣ ವಿಧಾನಗಳ ಸಮಸ್ಯೆಗಳ ಕುರಿತು ಚರ್ಚಿಸುವ ಉದ್ದೇಶದಿಂದ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT