ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರ ಮತದಾರರೇ ಎಚ್ಚರ!

ಅಕ್ಷರ ಗಾತ್ರ

ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೆರುತ್ತಿದೆ. ರಾಜಕೀಯ ನಾಯಕರು ನಿಮ್ಮನ್ನು  ಸೆಳೆದುಕೊಳ್ಳಲು ಹೆಂಡ, ಸೀರೆ, ಪಂಚೆ ಹೀಗೆ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಕೊಡುವುದಷ್ಟೇ ಅಪರಾಧವಲ್ಲ  ಅಭ್ಯರ್ಥಿಗಳಿಂದ ಹಣ ಪಡೆಯುವುದು ಕೂಡ ಅಪರಾಧ ಎಂಬುದು ನಿಮ್ಮ ಗಮನಕ್ಕಿರಲಿ.

ಕ್ಷಣಿಕ ಕಾಲದ ತೃಪ್ತಿಗೆ ಒಳಗಾಗಿ ದುಷ್ಟಶಕ್ತಿಗಳಿಗೆ ವೋಟು ಹಾಕಿದ್ದೆ ಆದಲ್ಲಿ ಐದು ವರ್ಷ ಸಮಸ್ಯೆಯ ಕತ್ತಲಲ್ಲಿ ಬದುಕುಳಿಯಬೇಕಾಗುತ್ತದೆ ಎಚ್ಚರ. ಹಳ್ಳಿಯ ಸಮಸ್ಯೆಗಳನ್ನು ತಿಳಿಯದ, ಇಲ್ಲಿನ ಜನಜೀವನವನ್ನು ಅರಿಯದ, ಕಂಗೆಟ್ಟ ಹಳ್ಳಿಗಳ ಮುಖವನ್ನೇ ನೋಡದ ಎಲ್ಲೋ ಇರುವ ರಾಜಕೀಯ ನಾಯಕರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರಾ?

ಬದುಕನ್ನು ದುಸ್ಥಿತಿಯಿುಂದ ಹೊರಗೆ ತರ‌್ತಾರಾ? ನಂಬಿಸಿ ವಂಚಿಸಿದ ನಾಯಕರಿಗೆ ವೋಟು ಹಾಕ್ತಿರಾ? ಅನ್ಯಾಯ ಆದರು ಸಹಿಸಿಕೊಳ್ಳುತ್ತಿರಾ? ವಿಧಾನಸಭೆಯಲ್ಲಿ ಅಶ್ಲೀಲ ದೃಶಾವಳಿಗಳನ್ನು ವೀಕ್ಷಿಸುವ ನಾಯಕರಿಗೆ ವೋಟು ಹಾಕ್‌ಬೇಕಾ? ಅನೈತಿಕ ಚಟುವಟಿಕೆ ಆರೋಪಗಳನ್ನು ಹೊಂದಿರುವ ನಾಯಕರು ನಮಗೆ ನೈತಿಕ ಪಾಠ ಹೇಳಿಕೊಡಲು ಸಾಧ್ಯವೇ?ಆದ ಕಾರಣ ಮತದಾರರೇ ಇವೆಲ್ಲವನ್ನು ಅರ್ಥೈಸಿಕೊಂಡು ಮೊಸದ ಜಾಲಗಳಿಗೆ ಸಿಲುಕಿಕೊಳ್ಳದೆ ದುಡ್ಡಿಗಾಗಿ ಪವಿತ್ರ ಮತ ಮಾರಿ ಬರ್ಬಾದಾಗಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT