ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಡಿ.ಕೋಟೆ ರಸ್ತೆ ಅಗಲೀಕರಣ ನೆನಗುದಿದೆ

Last Updated 4 ಫೆಬ್ರುವರಿ 2011, 8:25 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ಪಟ್ಟಣದ 1ನೇ ಮುಖ್ಯ ರಸ್ತೆಯ ಅಗಲೀಕರಣದ ಕಾಮಗಾರಿಯು ಅಧಿಕಾರಿಗಳು ಮತ್ತು    ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.ಕಳೆದ ಒಂದೂವರೆ ವರ್ಷಗಳ ಈ ರಸ್ತೆಯ ಅಗಲೀಕರಣಕ್ಕಾಗಿ 60 ಲಕ್ಷ ರೂಪಾಯಿಗಳು ಬಿಡುಗಡೆಯಾಗಿದ್ದು,  ಕಾಮಗಾರಿಯನ್ನು ಕೂಡಲೇ ಕೈಗೊಳ್ಳುವಂತೆ ಅಂದಿನ ಜಿಲ್ಲಾಧಿಕಾರಿ ಪಿ.ಮಣಿವಣ್ಣನ್ ಆದೇಸಿಸಿದ್ದರು. ಅಧಿಕಾರಿಗಳ  ನಿರ್ಲಕ್ಷ್ಯದಿಂದಾಗಿ ಕಾಮಗಾರಿ ನಡೆಯದೇ ಆ ಹಣ ವಾಪಸ್ ಹೋಗಿದೆ.

ಜಿಲ್ಲಾಧಿಕಾರಿ ಹರ್ಷಗುಪ್ತ ತಾಲ್ಲೂಕಿಗೆ ಭೇಟಿ ನೀಡಿದ ನಂತರ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿತ್ತು. 6  ತಿಂಗಳ ಹಿಂದೆ ರಸ್ತೆ ಅಗಲೀಕರಣಕ್ಕಾಗಿ ಶಾಸಕರ ಆಶ್ವಾಸನೆಯ ಮೇರೆಗೆ ಸ್ವಯಂ ಪ್ರೇರಿತರಾಗಿ 1ನೇ ಮುಖ್ಯ   ರಸ್ತೆಯ ನಿವಾಸಿಗಳು 13 ಮೀಟರ್‌ಗಳಿಗೆ ಮನೆಗಳನ್ನು ಹೊಡೆದು ತೆರವು ಮಾಡಿಕೊಟ್ಟಿದ್ದರು. ಆದರೆ ಅವರು ರಸ್ತೆ  ಇನ್ನೂ 2 ಮೀಟರ್ ಅಗಲವಾಗುವ ಭೀತಿಯಲ್ಲಿ ಮನೆಗಳಿಗೆ ಇನ್ನೂ ಬಾಗಿಲುಗಳನ್ನು ಅವಳಡಿಸಿಕೊಂಡಿಲ್ಲ. ಟಾರ್ಪಲ್‌ಗಳನ್ನು ಮುಚ್ಚಿಕೊಂಡು ಕಳ್ಳರ ಹಾಗೂ ನಾಯಿಗಳು ಮನೆಗೆ ನುಗ್ಗುವ ಭೀತಿಯಲ್ಲಿ ದಿನ ಕಳೆಯುತ್ತಿದ್ದಾರೆ.

ರಸ್ತೆ ಅಭಿವೃದ್ಧಿಗೆ 1.4 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನು ಶಾಸಕ ಚಿಕ್ಕಣ್ಣ ಮತ್ತು ಜಿಲ್ಲಾಧಿಕಾರಿ ಹರ್ಷಗುಪ್ತ ಜಂಟಿ ಯಾಗಿ ಗುದ್ದಲಿ ಪೂಜೆ ನೆರವೇರಿಸಿದ್ದರು.ಈ ರಸ್ತೆಯಲ್ಲಿ ಬಸ್ ಡಿಪೋ ಇರುವುದರಿಂದ ಬಸ್ ಸಂಚಾರವನ್ನು ಬಿಟ್ಟರೆ ಬೇರೆ ವಾಹನಗಳು ಸಂಚರಿಸುವುದು  ಕಡಿಮೆ. ಮುಂದಿನ 2 ವರ್ಷ ದಲ್ಲಿ ರಿಂಗ್ ರಸ್ತೆ ನಿರ್ಮಿಸಿ, ಬಸ್ಸಿನ ಸಂಚಾರವನ್ನು ಸದರಿ ರಸ್ತೆಯಲ್ಲಿ ಓಡಾಡುವಂತೆ  ಮಾಡಲಾಗುವುದು. ಆದ್ದರಿಂದ 13 ಮೀಟರ್‌ಗೆ ರಸ್ತೆ ಅಗಲೀಕ ರಣ ಮಾಡುವುದು ಉತ್ತಮ ಎಂದು  ಜಿಲ್ಲಾಧಿ ಕಾರಿಗೆ ಶಾಸಕರು ಮನವಿ ಮನವಿ ಮಾಡಿದ್ದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಹರ್ಷಗುಪ್ತ ಮುಂದಿನ 25 ವರ್ಷಗಳ ಬೆಳ ವಣಿಗೆಯನ್ನು  ಗಮನದಲ್ಲಿಟ್ಟುಕೊಂಡು ರಸ್ತೆ ಯನ್ನು ಅಗಲೀಕರಣ ಮಾಡಲಾಗುವುದು. ಈಗಾಗಲೆ ರಸ್ತೆ ಅಭಿವೃದ್ಧಿ ಬಗ್ಗೆ ನಗರ  ಯೋಜನಾ ಸಮಿತಿಯವರು ಯೋಜನೆಯನ್ನು ತಯಾರಿಸಿದ್ದಾರೆ. ಅದರಂತೆ ರಸ್ತೆ ಅಭಿವೃದ್ಧಿ ಪಡಿಸುತ್ತೇವೆ. ಈ ಬಗ್ಗೆ  ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಶಾಸಕರಿಗೆ ತಿಳಿಸಿದ್ದರು.

ಸ್ಥಳೀಯ ಅಧಿಕಾರಿಗಳು ಹಿರಿಯ ಅಧಿಕಾರಿ ಗಳಿಗೆ ಸರಿಯಾದ ಮಾಹಿತಿ ನೀಡದೇ ಇದ್ದ ಕಾರಣ ಕಾನೂನಿನ  ಪ್ರಕಾರ ಸರಿಯಾದ ಅಳತೆ ನಿಗದಿ ಯಾಗಿರಲಿಲ್ಲ. ಈಗಿನ ಜಿಲ್ಲಾಧಿಕಾರಿ 15 ಮೀಟರ್‌ಗೆ ತೆರವುಗೊಳಿಸಲೇಬೇಕು  ಎಂದು ಮೌಖಿಕ ಆದೇಶ ನೀಡಿರುವುದನ್ನು ಜನ ಪ್ರತಿನಿದಿಗಳಾಗಲೀ, ಮುಖಂಡರಾಗಲೀ ಸ್ಥಳೀಯ ರಸ್ತೆಯ  ನಿವಾಸಿಗಳ ಸಮಸ್ಯೆಗಳನ್ನು ಕೇಳುತ್ತಿಲ್ಲ. ಈಚೆಗೆ ಮುಖ್ಯರಸ್ತೆಯ ಬದಿಯಲ್ಲಿದ್ದ ಸರ್ಕಾರಿ ಕಟ್ಟಡಗಳನ್ನು  ಹೊಡೆದುಹಾಕಿ ಇನ್ನುಳಿದ ಎಲ್ಲರೂ 15 ಮೀಟರ್‌ಗೆ ತೆರವು ಮಾಡಲೇಬೇಕು ಎಂದಿದ್ದರೂ ಇದರಿಂದ 1ನೇ ಮುಖ್ಯ  ರಸ್ತೆಯ ನಿವಾಸಿಗಳು ಗೊಂದಲದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT