ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಐ: ಭಾರತಕ್ಕೆ ಅಮೆರಿಕ ಪ್ರಶಂಸೆ

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಬಹುಬ್ರಾಂಡ್ ಚಿಲ್ಲರೆ ವ್ಯಾಪಾರ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಅವಕಾಶ ಸೇರಿದಂತೆ ಭಾರತ ಕೈಗೊಂಡಿರುವ ಹೊಸ ರೀತಿಯ ಆರ್ಥಿಕ ಸುಧಾರಣಾ ಕ್ರಮಗಳನ್ನು ಅಮೆರಿಕ ಪ್ರಶಂಸಿಸಿದೆ.

ಈ ಕ್ರಮಗಳು ಭಾರತದ ಆರ್ಥಿಕ ಪ್ರಗತಿಯನ್ನು ನಿರಂತರವಾಗಿ ಸುಸ್ಥಿರ ಸ್ಥಿತಿಯಲ್ಲಿ ಇರಿಸುವ ನಿರೀಕ್ಷೆಯನ್ನು ಹೆಚ್ಚಿಸಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ಇತ್ತೀಚಿನ ವರ್ಷಗಳಲ್ಲಿ ಗಣಿನೀಯವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ ಎಂದೂ ಅಮೆರಿಕ ಶ್ಲಾಘಿಸಿದೆ.

`ಎಫ್‌ಡಿಐ'ಗೆ ಅವಕಾಶ ಕಲ್ಪಿಸುವುದರಿಂದ ಒಂದು ಕೋಟಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಭಾರತದ ವಾಣಿಜ್ಯ ಸಚಿವಾಲಯ ಅಂದಾಜಿಸಿದೆ ಎಂದು ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಕೇಂದ್ರ ಏಷ್ಯಾ ವ್ಯವಹಾರಗಳ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿ ಜೆಫ್ರಿ ಪ್ಯಾಟ್ ಹೇಳಿದ್ದಾರೆ.

ಒಮೆನ್‌ನ ಮಸ್ಕತ್‌ನಲ್ಲಿ ಕಳೆದ ವಾರಾಂತ್ಯದಲ್ಲಿ ನಡೆದ `ಐಐಎಸ್‌ಎಸ್- ಎನ್‌ಇಎಸ್‌ಎ' ದಕ್ಷಿಣ ಏಷ್ಯಾ ಕಾರ್ಯದರ್ಶಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, `ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ ಜಾಗತಿಕ ಮಟ್ಟದಲ್ಲಿ ತಮ್ಮ ದೇಶಕ್ಕೆ ಸ್ನೇಹಪರ ವಾತಾವರಣವನ್ನು ಸೃಷ್ಟಿಸಿದ್ದರು. ಈಗ ಅವರೇ ಪ್ರಧಾನಿಯಾಗಿದ್ದು, ಗಣನೀಯವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ' ಎಂದು ಪ್ರಶಂಸಿಸಿದ್ದಾರೆ.

`ಭಾರತವು ದೇಶೀಯ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದೆ. ಖಾಸಗಿ ವಲಯದಲ್ಲೂ ಪ್ರಗತಿ ಕಂಡಿದೆ. 2030ರ ಹೊತ್ತಿಗೆ 17.4 ಕೋಟಿ ಭಾರತೀಯರು ಖಾಸಗಿ ವಲಯದಲ್ಲಿ ಉದ್ಯೋಗಸ್ಥರಾಗಿರುತ್ತಾರೆ' ಎಂದು ಅಮೆರಿಕ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿರುವ ಪ್ಯಾಟ್ ಅವರ ಭಾಷಣದ ಪ್ರತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT