ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಗಣಿ ಪ್ರದೇಶಗಳಿಗೆ ತಜ್ಞರ ತಂಡ - ಪರಿಶೀಲನೆ

Last Updated 17 ಏಪ್ರಿಲ್ 2013, 9:46 IST
ಅಕ್ಷರ ಗಾತ್ರ

ಸಂಡೂರು: ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ ರಿಸರ್ಚ್ ಅಂಡ್ ಎಜುಕೇಷನ್ (ಐ.ಸಿ.ಎಫ್.ಆರ್.ಇ) ಸಂಸ್ಥೆಯ ತಜ್ಞರ ತಂಡ ಮಂಗಳವಾರ ತಾಲೂಕಿನ ಸ್ವಾಮಿಮಲೈ ಬ್ಲಾಕ್ ನಲ್ಲಿರುವ ಕುಮಾರಸ್ವಾಮಿ ಮೈನಿಂಗ್ ಕಂಪನಿ ಹಾಗೂ ಗಡಗಿ ಮೈನಿಂಗ್ ಕಂಪನಿಗೆ ಸೇರಿದ ಗಣಿ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಆರ್ ಅಂಡ್ ಆರ್ (ಪರಿಸರ ಪುನಶ್ಚೇತನ ಮತ್ತು ಪುನರ್ ನಿರ್ಮಾಣ) ಕಾರ್ಯದ ಪ್ರಗತಿಯ ಪರಿಶೀಲನೆ ನಡೆಸಿತು.

ವಿಜ್ಞಾನಿ ಸುಧೀರ್ ಕುಮಾರ್ ನೇತೃತ್ವದ ತಜ್ಞರ ತಂಡ ಕುಮಾರಸ್ವಾಮಿ ಮೈನಿಂಗ್ ಕಂಪನಿಯ ಗಣಿ ಪ್ರದೇಶಕ್ಕೆ ಭೇಟಿ ನೀಡಿದರೆ, ರಾಮರಾವ್ ನೇತೃತ್ವದ ತಜ್ಞರ ತಂಡ ಗಡಗಿ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದವು. ಈ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಉದಯ ಶಂಕರ್, ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT