ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ; ಜಿಲ್ಲೆಯ ಸಾಧನೆ ವಿವರ

Last Updated 19 ಮೇ 2012, 5:35 IST
ಅಕ್ಷರ ಗಾತ್ರ

ದಾವಣಗೆರೆ:ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ 8 ಶೈಕ್ಷಣಿಕ ಕ್ಷೇತ್ರ (ಬ್ಲಾಕ್)ಗಳಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರವು ಶೇ 84.51ಉತ್ತಮ ಸಾಧನೆ ತೋರಿದ್ದರೆ ಉತ್ತರ ಕ್ಷೇತ್ರವು ಶೇ 79.65 ಫಲಿತಾಂಶ ದಾಖಲಿಸಿದೆ. ದಕ್ಷಿಣ ವಲಯದ 18 ಶಾಲೆಗಳಲ್ಲಿ ಶೇ 100 ಫಲಿತಾಂಶ ಸಾಧನೆಯಾಗಿದೆ.

ತಾಲ್ಲೂಕುಗಳ ಶೇಕಡಾವಾರು ಫಲಿತಾಂಶ: ಚನ್ನಗಿರಿ-83.21, ಹರಪನಹಳ್ಳಿ-82.95, ಹೊನ್ನಾಳಿ- 82.31,  ಹರಿಹರ-81.29, ಜಗಳೂರು-80.91

ಶೂನ್ಯ ಸಾಧನೆ: ಹರಿಹರದ ಎನ್‌ಎಂಸಿ ಶಿವಮ್ಮ ಪ್ರೌಢಶಾಲೆ, ಕೇಂಬ್ರಿಡ್ಜ್ ಪ್ರೌಢಶಾಲೆ, ಹಳೇ ದಾವಣಗೆರೆಯ ಅಬ್ದುಲ್ ಕರೀಂ ಪ್ರೌಢಶಾಲೆ ಶೂನ್ಯ ಸಾಧನೆ ಮಾಡಿವೆ.

ಮಾಗನೂರು ಬಸಪ್ಪ ಪ್ರೌಢಶಾಲೆಯ ಬಿ.ಎಂ. ಭಾವನಾ 615  (ಶೇ 98.40) ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ತರಳಬಾಳು ಪ್ರೌಢಶಾಲೆಯ ಎ.ಟಿ. ಪ್ರೇರಣಾ 612 ( ಶೇ 97.92) ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸೇಂಟ್ ಪಾಲ್ಸ್ ಶಾಲೆಯ ಜಿ. ಸೌಮ್ಯಾ, ಅನುಭವ ಮಂಟಪ ಶಾಲೆಯ ಡಿ. ಹರ್ಷಿತಾ, ನೂತನ್ ಪ್ರೌಢಶಾಲೆಯ ಎಚ್.ಎಂ. ಚಂದನ ತಲಾ 610 (ಶೇ 97.6)  ಅಂಕಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ. ತರಳಬಾಳು ಶಾಲೆಯ ಕೆ. ವಿಶಾಲ್ ಶೇ 95.68 ಅಂಕ ಗಳಿಸಿದ್ದಾರೆ.

ಶೇ 100 ಸಾಧನೆ
ನಗರದ ಜ್ಞಾನ ನೈವೇದ್ಯ ಕಾನ್ವೆಂಟ್‌ನಿಂದ ಪರೀಕ್ಷೆ ಬರೆದ ಎಲ್ಲ 35 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಸೇಂಟ್ ಜಾನ್ಸ್ ಹೈಸ್ಕೂಲ್‌ನ ಎಲ್ಲ 190 ವಿದ್ಯಾರ್ಥಿಗಳು  ಉತ್ತೀರ್ಣರಾಗಿದ್ದಾರೆ. 63 ಮಂದಿ ಉನ್ನತಶ್ರೇಣಿ, 99 ಮಂದಿ ಪ್ರಥಮದರ್ಜೆ, 20 ಮಂದಿ ದ್ವಿತೀಯ ಹಾಗೂ 8 ಮಂದಿ ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
 
ಮೂವರು ವಿದ್ಯಾರ್ಥಿಗಳು ಗಣಿತದಲ್ಲಿ 100 ಅಂಕ ಗಳಿಸಿದ್ದಾರೆ. ನಗರದ ನಿಟುವಳ್ಳಿ ಹೊಸ ಬಡಾವಣೆಯ ಮಾರುತಿ  ಪ್ರೌಢಶಾಲೆಯ  ಎಲ್ಲ 22  ವಿದ್ಯಾರ್ಥಿಗಳು  ತೇರ್ಗಡೆ  ಹೊಂದಿದ್ದಾರೆ. 6 ಮಂದಿ ಪ್ರಥಮ, 11 ದ್ವಿತೀಯ ಹಾಗೂ 5 ಮಂದಿ ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ತಾಲ್ಲೂಕಿನ ರಾಮಗೊಂಡನಹಳ್ಳಿ ಗ್ರಾಮದ ರಂಗನಾಥ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯು  ಪರೀಕ್ಷೆಗೆ ಕುಳಿತ ಎಲ್ಲ 17 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 6 ಪ್ರಥಮದರ್ಜೆ, 4 ದ್ವಿತೀಯದರ್ಜೆ, 7 ಸಾಮಾನ್ಯದರ್ಜೆ ಪಡೆದು ತೇರ್ಗಡೆಯಾಗಿದ್ದಾರೆ.

ತಾಲ್ಲೂಕಿನ ಮೆಳ್ಳೆಕಟ್ಟೆ ಸರ್ಕಾರಿ ಪ್ರೌಢಶಾಲೆಯಿಂದ ಪರೀಕ್ಷೆಗೆ ಹಾಜರಾದ ಎಲ್ಲ 66 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಒಬ್ಬ ವಿದ್ಯಾರ್ಥಿ ಡಿಸ್ಟಿಂಕ್ಷನ್, 42 ಮಂದಿ ಪ್ರಥಮ,  22 ಮಂದಿ ದ್ವಿತೀಯ ಶ್ರೇಣಿ ಹಾಗೂ ಒಬ್ಬ ವಿದ್ಯಾರ್ಥಿ ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇತರ ಫಲಿತಾಂಶಗಳು

ಸೇಂಟ್ ಪಾಲ್ಸ್ ಪ್ರೌಢಶಾಲೆಗೆ ಶೇ 96 ಫಲಿತಾಂಶ ಬಂದಿದೆ.  44 ಮಂದಿ ಡಿಸ್ಟಿಂಕ್ಷನ್ ಹಾಗೂ 137 ಮಂದಿ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ತಾಲ್ಲೂಕಿನ ಶ್ಯಾಗಲೆಯ ಮಲ್ಲಿಕಾರ್ಜುನ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆಗೆ  ಶೇ 94 ಫಲಿತಾಂಶ ಬಂದಿದೆ.  22 ಮಂದಿ ಪ್ರಥಮ, 12 ಮಂದಿ ದ್ವಿತೀಯ ದರ್ಜೆ ಮತ್ತು  15 ಮಂದಿ ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ತಾಲ್ಲೂಕಿನ ಕುಕ್ಕವಾಡದ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಶೇ 91.42 ಫಲಿತಾಂಶ ಲಭ್ಯವಾಗಿದೆ. 35 ವಿದ್ಯಾರ್ಥಿಗಳ ಪೈಕಿ 32 ಮಂದಿ ಉತ್ತೀರ್ಣರಾಗಿದ್ದಾರೆ. 12 ಮಂದಿ ಪ್ರಥಮದರ್ಜೆ, 7 ಮಂದಿ ದ್ವಿತೀಯ ಹಾಗೂ 13 ಮಂದಿ ಸಾಮಾನ್ಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ದಾವಣಗೆರೆ ನಿಟುವಳ್ಳಿ ರಸ್ತೆಯ ಸಿದ್ದರಾಮೇಶ್ವರ ಬಡಾವಣೆಯ ಆದರ್ಶ ಪ್ರೌಢಶಾಲೆಗೆ ಶೇ 81.57 ಫಲಿತಾಂಶ ಬಂದಿದೆ. ನಾಲ್ವರು ಪ್ರಥಮ, 7 ಮಂದಿ ದ್ವಿತೀಯ ಹಾಗೂ 20 ಮಂದಿ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಗರದ ಮೋತಿ ವೀರಪ್ಪ ಬಡಾವಣೆಯ ಚೇತನ ಪ್ರೌಢಶಾಲೆಗೆ  ಶೇ 66.7 ಫಲಿತಾಂಶ ಬಂದಿದೆ.

ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶೇ 94.52 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ 73 ವಿದ್ಯಾರ್ಥಿಗಳಲ್ಲಿ ಒಬ್ಬರು ಉನ್ನತಶ್ರೇಣಿ, 24 ಪ್ರಥಮದರ್ಜೆ, 19 ದ್ವಿತೀಯದರ್ಜೆ ಹಾಗೂ 25 ಸಾಮಾನ್ಯದರ್ಜೆ ಗಳಿಸಿದ್ದಾರೆ.

ತಾಲ್ಲೂಕುಗಳ ವಿವರ

ಹರಿಹರ: ತಾಲ್ಲೂಕಿನ 5 ಶಾಲೆಗಳು ಶೇ 100 ಫಲಿತಾಂಶ ಸಾಧಿಸಿವೆ. ಒಟ್ಟು 2,754 ವಿದ್ಯಾರ್ಥಿಗಳ ಪೈಕಿ 2,239 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 2011ನೇ ಸಾಲಿನಲ್ಲಿ ತಾಲ್ಲೂಕು ಶೇ  77ರಷ್ಟು ಫಲಿತಾಂಶ ಪಡೆದುಕೊಂಡಿತ್ತು. ಈ ಬಾರಿಯ ಫಲಿತಾಂಶ ಶೇ 4.3ರಷ್ಟು ಏರಿದೆ.

ನಿಟ್ಟೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ, ದೇವರಬೆಳಕೆರೆ ಗ್ರಾಮದ ಮೊರಾರ್ಜಿ ಪ್ರೌಢಶಾಲೆ, ಕುಂಬಳೂರು ಗ್ರಾಮದ ಶರಣ ಸಂಗಮ ಪ್ರೌಢಶಾಲೆ, ನಗರದ ಸೇಂಟ್ ಮೇರಿಸ್ ಪ್ರೌಢಶಾಲೆ ಮತ್ತು ಬಾಪೂಜಿ ಪ್ರೌಢಶಾಲೆ ಶೇ 100ರಷ್ಟು ಫಲಿತಾಂಶ ಗಳಿಸಿವೆ.

ಪಟ್ಟಣದ ಸೇಂಟ್ ಮೇರಿಸ್ ಪ್ರೌಢಶಾಲೆಯ ಡಿ.ಡಿ. ದೀಪಕ್ 610 (ಶೇ 97.6), ಎಂಕೆಇಟಿ ಪ್ರೌಢಶಾಲೆಯ ಎಚ್. ಪ್ರಿಯಾಂಕಾ 580(ಶೇ 92.8), ದೇವರಬೆಳಕೆರೆ ಗ್ರಾಮದ ಮೊರಾರ್ಜಿ ದೇಸಾಯಿ ಪ್ರೌಢಶಾಲೆಯ ಎನ್.ಎಸ್. ಹರೀಶ್ 590(ಶೇ 94.4), ಮಲೇಬೆನ್ನೂರು ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ಅಶ್ವಿನಿ ಎಂ. ಬಡಿಗೇರ್ 575 (ಶೇ 92) ಅಂಕಗಳಿಸಿದ್ದಾರೆ.

ಸಂತೇಬೆನ್ನೂರು ಹೋಬಳಿ:
ಇಲ್ಲಿನ ವಿಜಯ ಪ್ರೌಢಶಾಲೆ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮಗಳೆರಡರಲ್ಲೂ ಶೇಕಡಾ ನೂರರಷ್ಟು ಫಲಿತಾಂಶ ಗಳಿಸಿದೆ.ಆಂಗ್ಲ ಮಾಧ್ಯಮ ಸತತ ಮೂರನೇ ಬಾರಿ ಶೇ 100 ಫಲಿತಾಂಶ ಬಂದಿದ್ದು, ಪರೀಕ್ಷೆ ಹಾಜರಾದ 57 ವಿದ್ಯಾರ್ಥಿಗಳಲ್ಲಿ  1 ಡಿಸ್ಟಿಂಕ್ಷನ್ , 28 ಪ್ರಥಮ, 15 ದ್ವಿತೀಯ ಹಾಗೂ 13 ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮುಖ್ಯ ಶಿಕ್ಷಕ ಕೆ.ಸಿ. ನಾಗರಾಜ್ ತಿಳಿಸಿದ್ದಾರೆ.

ಎಸ್‌ಎಸ್‌ಜೆವಿಪಿ ಸರ್ಕಾರಿ ಪ್ರೌಢಶಾಲೆಗೆ ಶೇ 97.4ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ 154 ವಿದ್ಯಾರ್ಥಿಗಳಲ್ಲಿ 7 ಡಿಸ್ಟಿಂಕ್ಷನ್,  73 ಪ್ರಥಮದರ್ಜೆ,  38  ದ್ವಿತೀಯ ಶ್ರೇಣಿ , ಸಾಮಾನ್ಯ 32 ಮಂದಿ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.  ಎಸ್‌ಜೆವಿಪಿ ಆಂಗ್ಲ ಮಾಧ್ಯಮ ಶೇ 100 ಫಲಿತಾಂಶ ಗಳಿಸಿದೆ. ಕುವೆಂಪು ಪ್ರೌಢಶಾಲೆ ಶೇ 77, ತಣಿಗೆರೆ ಆಂಜನೇಯ ಪ್ರೌಢಶಾಲೆ ಶೇ 96 ಹಾಗೂ ಮೆದಿಕೆರೆಯ ಗೌಡರ ಹಾಲಪ್ಪ ಪ್ರೌಢಶಾಲೆ ಶೇ 94 ಫಲಿತಾಂಶ ಗಳಿಸಿವೆ.

ಹೊನ್ನಾಳಿ:
ತಾಲ್ಲೂಕಿನಲ್ಲಿ ಸರ್ಕಾರಿ ಪ್ರೌಢಶಾಲೆಗಳು ಶೇ 78.17, ಅನುದಾನಿತ ಶೇ 86.71 ಮತ್ತು ಅನುದಾನರಹಿತ ಶೇ 93.23ರಷ್ಟು ಫಲಿತಾಂಶ ಗಳಿಸಿವೆ. ತಾಲ್ಲೂಕಿನ ಒಟ್ಟು 16 ಅನುದಾನಿತ ಪ್ರೌಢಶಾಲೆಗಳ ಪೈಕಿ ಚೀಲೂರಿನ ಎನ್‌ಇಎಸ್ ಪ್ರೌಢಶಾಲೆ ಮತ್ತು ಹೊನ್ನಾಳಿಯ ಉರ್ದು ಜನತಾ ಪ್ರೌಢಶಾಲೆಗಳು ಶೇ 100ರಷ್ಟು ಫಲಿತಾಂಶ ಗಳಿಸಿವೆ. ಕ್ರಮವಾಗಿ 50 ಮತ್ತು 35 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ಚನ್ನಗಿರಿ: ತಾಲ್ಲೂಕು ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ಒಟ್ಟು ಪರೀಕ್ಷೆ ಕುಳಿತ 3,681 ವಿದ್ಯಾರ್ಥಿಗಳಲ್ಲಿ 3,063 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಇದರಲ್ಲಿ 104 ಉನ್ನತ ಶ್ರೇಣಿ, 1,201 ಪ್ರಥಮದರ್ಜೆ, 727 ದ್ವಿತೀಯದರ್ಜೆ ಹಾಗೂ 945 ವಿದ್ಯಾರ್ಥಿಗಳು ಸಾಮಾನ್ಯದರ್ಜೆಯಲ್ಲಿ ಉತ್ತೀರ್ಣರಾಗ್ದ್ದಿದಾರೆ.

ತಾಲ್ಲೂಕಿನ ಏಳು ಶಾಲೆಗಳು ಶೇ ನೂರು ಫಲಿತಾಂಶ ಪಡೆದಿವೆ. ನವಚೇತನ ಶಾಲೆ-ಚನ್ನಗಿರಿ, ಆರ್‌ವಿಎಸ್ ಶಾಲೆ, ತರಳಬಾಳು ಶಾಲೆ-ಅಜ್ಜಿಹಳ್ಳಿ, ವಿಜಯ ಪ್ರೌಢಶಾಲೆ ಸಂತೇಬೆನ್ನೂರು ಮೊರಾರ್ಜಿ ಶಾಲೆ-ಕಾರಿಗನೂರು, ಸರ್ಕಾರಿ ಪ್ರೌಢಶಾಲೆ-ಕಂಚುಗಾರನಹಳ್ಳಿ ಹಾಗೂ ಸರ್ಕಾರಿ ಪ್ರೌಢಶಾಲೆ ಕಂಚಿಗನಹಾಳ್.

ಹರಪನಹಳ್ಳಿ:
ತಾಲ್ಲೂಕಿನ 49 ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳ ಪೈಕಿ, 3,315ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 2,750 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 104 ಉನ್ನತ ಶ್ರೇಣಿ, 1,201 ಪ್ರಥಮದರ್ಜೆ, 727 ದ್ವಿತೀಯದರ್ಜೆ ಹಾಗೂ 945 ವಿದ್ಯಾರ್ಥಿಗಳು ಉತ್ತೀರ್ಣರಾಗ್ದ್ದಿದಾರೆ. ಕಡಬಗೇರಿ ಸರ್ಕಾರಿ ಪ್ರೌಢಶಾಲೆ, ಚಿಕ್ಕಮೇಗಳಗೇರಿಯ ದುರ್ಗಾಂಬಿಕಾ ಪ್ರೌಢಶಾಲೆ ಶೇ 100ರಷ್ಟು ಫಲಿತಾಂಶ ಪಡೆದುಕೊಂಡಿವೆ.

22ಕ್ಕೆ ಸಭೆ: ಡಿಡಿಪಿಐ

ಕಡಿಮೆ ಹಾಗೂ ಶೂನ್ಯ ಫಲಿತಾಂಶ ದಾಖಲಿಸಿದ ಶಾಲೆಗಳ ಮುಖ್ಯಸ್ಥರ ಸಭೆಯನ್ನು ಮೇ 22ರಂದು ನಗರದ ಡಿಆರ್‌ಆರ್ ಪ್ರೌಢಶಾಲೆಯಲ್ಲಿ ಕರೆಯಲಾಗಿದೆ. ಫಲಿತಾಂಶದ ಬಳಿಕ ವಿಮರ್ಶೆ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಈಗಿಂದಲೇ ಪೂರ್ವಸಿದ್ಧತೆ ಕುರಿತು ಸಭೆ ನಡೆಸಲಾಗುವುದು.
 
ಶೂನ್ಯ ಫಲಿತಾಂಶ  ಸಾಧನೆ ಹಾಗೂ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರುಹಾಜರಾಗಿರುವುದು ಜಿಲ್ಲೆಯ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಕೆಲವು ಶಾಲೆಗಳು ಬೋಗಸ್ ದಾಖಲಾತಿ ನಡೆಸಿರುವ ಬಗ್ಗೆ ಅನುಮಾನವಿದೆ. ಅವುಗಳ ಬಗ್ಗೆ ತನಿಖೆ ನಡೆಸಿ ಮಾನ್ಯತೆ ರದ್ದುಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಎ. ರಾಜಶೇಖರ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT