ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಕೆ ಬ್ಯಾಂಕ್: `ಪುನಶ್ಚೇತನ ಮಂಡಳಿ' ಪಾಲು

Last Updated 15 ಡಿಸೆಂಬರ್ 2012, 6:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಾರಿ ಕುತೂಹಲ ಕೆರಳಿಸಿದ್ದ ನಗರದ ದಾಜಿಬಾನಪೇಟೆಯಲ್ಲಿರುವ ದಿ ಎಸ್.ಎಸ್.ಕೆ. ಕೋ-ಆಪರೇಟಿವ್ ಬ್ಯಾಂಕಿನ ಆಡಳಿತ (2012-2017) `ಪುನಶ್ಚೇತನ ಮಂಡಳಿ' ಪಾಲಾಗಿದೆ.

ಬ್ಯಾಂಕಿನ ಒಟ್ಟು ಒಂಬತ್ತು ನಿರ್ದೇಶಕರ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ `ಪುನಶ್ಚೇತನ ಮಂಡಳಿ' ಪರ ಕಣಕ್ಕಿಳಿದ ಏಳು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದ ಎರಡು ಸ್ಥಾನಗಳು `ರಕ್ಷಣಾ ಸಮಿತಿ' ಪರವಾಗಿ ಕಣಕ್ಕಿಳಿದ ಅಭ್ಯರ್ಥಿಗಳ ಪಾಲಾಗಿವೆ.

ಸಾಮಾನ್ಯ ಸ್ಥಾನಗಳಿಗೆ ಪುನಶ್ಚೇತನ ಮಂಡಳಿಯಿಂದ ಕಣಕ್ಕಿಳಿದ ಲದವಾ ವಿಠಲ ಪರಶುರಾಮಸಾ, ಜರತಾರಘರ ನಾರಾಯಣ ಶಂಕರಸಾ, ಮೆಹರವಾಡೆ ಟಿ.ಎಂ., ಖೋಡೆ ನಾರಾಯಣ ನಾಗೇಂದ್ರಸಾ, ದೀಪಕ ಪಾಂಡುರಂಗಸಾ ಮಗಜಿಕೊಂಡಿ ಜಯಶಾಲಿಯಾಗಿದ್ದಾರೆ. ಅದೇ ಮಂಡಳಿಯಿಂದ ವೃತ್ತಿಪರ ಪರಿಣತ ಮೀಸಲು ಸ್ಥಾನಕ್ಕೆ ಚವ್ಹಾಣ ಪ್ರೇಮನಾಥ ಅರ್ಜುನಸಾ, ಮಹಿಳಾ ಮೀಸಲು ಸ್ಥಾನದಿಂದ ಬದ್ದಿ ರತ್ನಮಾಲಾ ಜಗನ್ನಾಥಸಾ ಆಯ್ಕೆ ಆದರು.
`ರಕ್ಷಣಾ ಸಮಿತಿ'ಯಿಂದ ಕಣಕ್ಕಿಳಿದವರ ಪೈಕಿ ಸಾಮಾನ್ಯ ಸ್ಥಾನದಿಂದ ಬದ್ದಿ ನಾರಾಯಣ ಉಮ್ಮಣಸಾ ಮತ್ತು ವೃತ್ತಿಪರ ಪರಿಣತ ಮೀಸಲು ಸ್ಥಾನದಿಂದ ದಯಾನಂದ ಗುರುನಾಥಸಾ ಪವಾರ ಮಾತ್ರ ಆಯ್ಕೆ ಆಗ್ದ್ದಿದಾರೆ.

ಒಟ್ಟು ಮತದಾನಕ್ಕೆ ಅರ್ಹ ಬ್ಯಾಂಕಿನ 9,133 ಸದಸ್ಯರ ಪೈಕಿ 2,936 ಸದಸ್ಯರು ಮಾತ್ರ ಮತ ಚಲಾಯಿಸಿದ್ದಾರೆ. ದಾಜಿಬಾನಪೇಟೆಯಲ್ಲಿರುವ ಶ್ರೀಮತಿ ಸೀತಾಬಾಯಿ ಕುಬೇರಸಾ ಹಬೀಬ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಆರಂಭಗೊಂಡ ಮತದಾನ ಸಂಜೆ ನಾಲ್ಕರವರೆಗೆ ಮುಂದುವರಿಯಿತು. ಬೆಳಿಗ್ಗೆ ನಿಧಾನಗತಿಯಲ್ಲಿ ಆರಂಭಗೊಂಡ ಮತದಾನ ಹೊತ್ತೇರಿದಂತೆ ಬಿರುಸುಗೊಂಡಿತು. ಪ್ರತಿಷ್ಠಿತ ಗುಂಪುಗಳ ಉಮೇದುವಾರರು ಕಣಕ್ಕಿಳಿದುದರಿಂದ ಬ್ಯಾಂಕಿನ ಚುನಾವಣೆ ಎಲ್ಲರ ಗಮನ ಸೆಳೆದಿತ್ತು. ಅಲ್ಲದೇ ರಾಜಕೀಯ ಬಣ್ಣವನ್ನೂ ಪಡೆದಿತ್ತು.

ಮತದಾನ ಮುಕ್ತಾಯ ಹಂತಕ್ಕೆ ಬರುತ್ತಿದ್ದಂತೆ, ಸಂಜೆ ಸುಮಾರು 3.45ರ ಹೊತ್ತಿಗೆ ಮತದಾನ ಕೇಂದ್ರದಲ್ಲಿ ಕೆಲಹೊತ್ತು ಗುಂಪುಗಳ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಡಿಸಿಪಿ ಪ್ರತಾಪನ್ ಮತ್ತು ಎಸಿಪಿ ಜಿ.ಎಂ.ದೇಸೂರ ಗುಂಪು ಸೇರಿದವರನ್ನು ಚದುರಿಸಿದರು. ಚುನಾವಣೆ ನಡೆದ  ಸ್ಥಳದಲ್ಲಿ ಬೆಳಿಗ್ಗೆಯಿಂದಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.

ಸಂಜೆ ಮತ ಎಣಿಕೆ ಆರಂಭವಾಗುತ್ತಲೇ ಪುನಶ್ಚೇತನ ಮಂಡಳಿ ಮತ್ತು ರಕ್ಷಣಾ ಸಮಿತಿ ಬೆಂಬಲಿತರ ಗುಂಪು ಸೇರಿ ತಮ್ಮ ಅಭ್ಯರ್ಥಿಗಳ ಪರ ಘೋಷಣೆ ಕೂಗುತ್ತಲೇ ಇತ್ತು. ಮಹಿಳಾ ಮೀಸಲು ಮತ್ತು ವೃತ್ತಿಪರ ಪರಿಣತ ಮೀಸಲು ಸ್ಥಾನಕ್ಕೆ ಆಯ್ಕೆಯಾದವರ ಮಾಹಿತಿ ರಾತ್ರಿ ಒಂಬತ್ತು ಗಂಟೆಗೆ ಹೊರಬಂದರೂ, ಸಾಮಾನ್ಯ ಸ್ಥಾನಗಳ ಮತ ಎಣಿಕೆ ಮುಗಿಯುವಷ್ಟರಲ್ಲಿ ರಾತ್ರಿ 11 ಗಂಟೆ ಆಗಿತ್ತು. ಬ್ಯಾಂಕಿನ ಆಡಳಿತ `ಪುನಶ್ಚೇತನ ಮಂಡಳಿ' ಪರವಾಗುತ್ತಿದ್ದಂತೆ ಆ ಗುಂಪಿನ ನೇತೃತ್ವ ವಹಿಸಿದ್ದ ಲದವಾ ವಿಠಲ ಪರಶುರಾಮಸಾ, ಜರತಾರಘರ ನಾರಾಯಣ ಶಂಕರಸಾ ಮತ್ತಿತರರ ಬೆಂಬಲಿಗರ ಗುಂಪು ಭಾರೀ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆಯ್ಕೆಯಾದ ಅಭ್ಯರ್ಥಿಗಳನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿ ವಿಜಯೋತ್ಸವ ಆಚರಿಸಿದರು.

ಸ್ಪರ್ಧಿಸಿದವರ ಹೆಸರು, ಪಡೆದ ಮತಗಳ ವಿವರ
ಸಾಮಾನ್ಯ ಸ್ಥಾನ: ಅನಿಲ ನಾರಾಯಣಸಾ ಬೇವಿನಕಟ್ಟಿ-200, ಎಲ್ಲಣಸಾ ನಾರಾ ಯಣಸಾ ಇರಕಲ್- 262, ಓಂಪ್ರಕಾಶ ಪೀತಾಂಬರಸಾ ಕಾಟವೆ -207, ಕಬಾಡಿ ಪ್ರಭಾಕರ ರಾಮಚಂದ್ರಸಾ- 97, ಖೋಡೆ ನಾರಾಯಣ ನಾಗೇಂದ್ರಸಾ -897, ಜನಗ್ನಾಥ ಅಂಬಾಸಾ ಕಠಾರೆ-134, ಜರತಾರಘರ ನಾರಾಯಣ ಶಂಕರಸಾ-1068, ಜರತಾರಘರ ರಾಜು ವಿಠಲಸಾ -536, ಜಿತೂರಿ ಕಿಶೋರ ರಾಮಕೃಷ್ಣಸಾ-520, ಜಿತೂರಿ ಭಾಸ್ಕರ ನಾರಾಯಣಸಾ-751, ಟಿಕಂದರ ಸುನಿಲ ರಘನಾಥಸಾ-400, ದಲಬಂಜನ ರಮೇಶ ಭೋಜಣಸಾ- 794, ದೀಪಕ ಪಾಂಡುರಂಗಸಾ ಮಗಜಿಕೊಂಡಿ- 851, ದೇವೇಂದ್ರ ತುಳಜಣಸಾ ಭಾಂಡಗೆ- 70, ಪೂಜಾರಿ ರಮೇಶ ದುರ್ಗೋಸಾ-291, ಪ್ರಕಾಶ ಟೀಕಾಸಾ ಕಾಟವೆ- 464, ಬದ್ದಿ ಗೋಪಾಲ ರಾಮಚಂದ್ರಸಾ-338, ಬದ್ದಿ ನಾರಾಯಣ ಉಮ್ಮಣಸಾ- 1006, ಬುರಬುರೆ ಪ್ರಕಾಶ ಮೋತಿಲಾಲಸಾ-610, ಮೆಹರವಾಡೆ ತುಳಜಣಸಾ ಮಾಧುಸಾ-935, ಮೋತಿಲಾಲ ತುಕಾರಾಮಸಾ ಬದ್ದಿ- 366, ರಾಜು ಗುರುನಾಥಸಾ ಪವಾರ-610, ರಾಜೇಶ ನಾಗೋಸಾ ಜಡಿ -157, ಲದವಾ ವಿಠಲ ಪರಶುರಾಮಸಾ 1384, ಶ್ಯಾಮ ಕಾಶೀನಾಥಸಾ ಕಲಬುರ್ಗಿ-150, ಹಬೀಬ ದೇವದಾಸ ಹನಮಂತಸಾ -356.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT