ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕೀಕರಣ ಹೋರಾಟಗಾರರಿಗೆ ಮಾಸಾಶನ: ಬಿದರಿ ಒತ್ತಾಯ

Last Updated 2 ಸೆಪ್ಟೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಹೋರಾಟಗಾರರನ್ನು ಸ್ವಾತಂತ್ರ್ಯ ಹೋರಾಟಗಾರರಂತೆ ಪರಿಗಣಿಸಿ ಸರ್ಕಾರ ಅವರಿಗೂ ಮಾಸಾಶನ ನೀಡಬೇಕು' ಎಂದು ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೇಳಿದರು.

ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯು ಸೋಮವಾರ ಪುರಭವನದಲ್ಲಿ ಏರ್ಪಡಿಸಿದ್ದ `ಅಮರ ಮಧುರ ಗೀತ-ಗಾಯನ ಸಂಭ್ರಮ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಕರ್ನಾಟಕದ ಏಕೀಕರಣಕ್ಕಾಗಿ, ಭಾಷೆಗಾಗಿ ಹೋರಾಡಿದವರೂ ಹೋರಾಟಗಾರರೇ ಆಗಿದ್ದಾರೆ. ಅವರಿಗೆ ನೆಮ್ಮದಿಯ ಜೀವನವನ್ನು ನೀಡಲು ಮಾಸಾಶನವನ್ನು ನೀಡಬೇಕು. ಜತೆಗೆ ಸಂಗೀತ ಕಲಾವಿದರು ಹಾಗೂ ವಾದ್ಯಗೋಷ್ಠಿಗಳ ಹಾಡುಗಾರರಿಗೂ ಗೌರವಯುತ ಜೀವನವನ್ನು ನಡೆಸಲು ಮಾಸಾಶನ ಜತೆಗೆ ನಿವೇಶನ ನೀಡಬೇಕು' ಎಂದು ಒತ್ತಾಯಿಸಿದರು.

`ನಾಡಿಗಾಗಿ ಹೋರಾಡಿದವರ ಹೆಸರೇ ಯಾರಿಗೂ ನೆನಪಿನಲ್ಲಿ ಇಲ್ಲ. ನಮ್ಮ ಅಸ್ತಿತ್ವಕ್ಕಾಗಿ ಹೋರಾಡಿದವರ ಬಗ್ಗೆ ಕಿಂಚಿತ್ತಾದರೂ ಕೃತಜ್ಞತಾ ಭಾವ ಇರಬೇಕು' ಎಂದರು.

ಗಾಯನ ಕಾರ್ಯಕ್ರಮದಲ್ಲಿ ಅನೇಕ ಕಲಾವಿದರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT