ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಇಎ -ಇರಾನ್ ಒಪ್ಪಂದ ವಿಫಲ ವಿಷಾದಕರ ಬೆಳವಣಿಗೆ: ಅಮೆರಿಕ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (ಐಎಇಎ)ಯೊಂದಿಗೆ ಯಾವುದೇ ಒಪ್ಪಂದಕ್ಕೆ ಬರಲು ಇರಾನ್ ವಿಫಲವಾಗಿರುವುದು `ವಿಷಾದಕರ~ ಎಂದಿರುವ ಅಮೆರಿಕ, `ಈ ಬೆಳವಣಿಗೆ ನಿರಾಶದಾಯಕವಾದರೂ, ಅಚ್ಚರಿಯ ವಿಷಯವಲ್ಲ~ ಎಂದು ಪ್ರತಿಕ್ರಿಯಿಸಿದೆ.

`ಐಎಇಎ ತನ್ನ ನವೆಂಬರ್ ವರದಿಯಲ್ಲಿ ಪ್ರಸ್ತಾಪಿಸಿರುವ ಗಂಭೀರ ಆರೋಪಗಳ ಕುರಿತು ಪೂರ್ಣ ತನಿಖೆ ನಡೆಸಲು ತಪಾಸಣಾ ಪರಿಣತರನ್ನು ಕಳುಹಿಸುವ ಒಪ್ಪಂದಕ್ಕೆ ಇರಾನ್ ಒಪ್ಪದಿರುವುದು ದುರದೃಷ್ಟಕರ~ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೇ ಕಾರ್ನಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

`ಇರಾನ್ ರಹಸ್ಯವಾಗಿಟ್ಟಿರುವ ತನ್ನ ಅಣ್ವಸ್ತ್ರ ತಾಣವನ್ನು ತಪಾಸಣೆ ನಡೆಸಲು ಐಎಇಎ ಕಾವಲು ಸಮಿತಿಗೆ ಅನುಮತಿ ನೀಡದೆ ಜಾರಿಕೊಳ್ಳುವ ಮೂಲಕ ಅದರ ಮೇಲಿನ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ. ಇದು ಅಂತರರಾಷ್ಟ್ರೀಯ ನಿಬಂಧನೆಗಳಿಗೆ ಒಳಪಡಲು ಇರಾನ್ ನಿರಾಕರಿಸುತ್ತಿರುವುದನ್ನು ಸ್ಪಷ್ಟಪಡಿಸಲಿದ್ದು, ಆ ದೇಶದ ಮೊಂಡು ನಡವಳಿಕೆಯನ್ನೂ ಪ್ರದರ್ಶಿಸಿದೆ~ ಎಂದು ಅವರು ಟೀಕಿಸಿದರು.

ಇದೇ ರೀತಿ ಪ್ರತಿಕ್ರಿಯಿಸಿರುವ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಮಾರ್ಕ್ ಟೋನರ್, ಇರಾನ್ ನಿಲುವು ಅಚ್ಚರಿಯುಂಟು ಮಾಡಿಲ್ಲ ಮತ್ತು ಐಎಇಎ ಮುಂದಿನ ತನ್ನ ವಿಸ್ತೃತ ವರದಿಯಲ್ಲಿ ಅಂತಿಮವಾಗಿ ಯಾವ ನಿರ್ದಿಷ್ಟ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಶ್ವೇತಭವನ ಎದುರು ನೋಡುತ್ತಿದೆ~ ತಿಳಿಸಿದ್ದಾರೆ.

`ಐಎಇಎ ತಪಾಸಣಾ ತಂಡಕ್ಕೆ ಇರಾನ್ ಸಹಕಾರ ನೀಡಬೇಕು ಮತ್ತು ಅಂತರರಾಷ್ಟ್ರೀಯ ಸಮುದಾಯದ ಆತಂಕವನ್ನು ದೂರ ಮಾಡಲು ಮುಂದಾಗಬೇಕು~ ಎಂದು ಅವರು    ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT