ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್ಎಸ್ಎಫ್ ವಿಶ್ವಕಪ್: ಸ್ವರ್ಣ ಗೆದ್ದ ರಾಹಿ ಸರ್ನೋಬತ್

Last Updated 5 ಏಪ್ರಿಲ್ 2013, 10:15 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್ಎಸ್): ದಕ್ಷಿಣ ಕೊರಿಯಾದ ಚಂಗ್ವಾನ್ ನಲ್ಲಿ ನಡೆದ ಅಂತರರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟದ (ಐಎಸ್ಎಸ್ ಎಫ್) 25 ಎಂ ಅಂತಿಮ ಸ್ಪರ್ಧೆಯಲ್ಲಿ ಶುಕ್ರವಾರ ಜಯಗಳಿಸುವ ಮೂಲಕ ಐಎಸ್ಎಸ್ಎಫ್ ವಿಶ್ವಕಪ್ ಸ್ಪರ್ಧೆಯಲ್ಲಿ ಭಾರತಕ್ಕೆ ಸ್ವರ್ಣ ಪದಕ ತಂದುಕೊಟ್ಟ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ರಾಹಿ ಸರ್ನೋಬತ್ ಪಾತ್ರರಾದರು.

ಇಲ್ಲಿಗೆ ತಲುಪಿರುವ ವರ್ತಮಾನದ ಪ್ರಕಾರ, ರಾಹಿ ಅವರು ಸ್ಥಳೀಯ ಮಹಿಳೆ ಕ್ಯೋಂಗಾಎ ಕಿಮ್ ಅವರನ್ನು ಅಂತಿಮ ಸ್ಪರ್ಧೆಯಲ್ಲಿ 8-6 ಅಂತರದಲ್ಲಿ ಪರಾಭವಗೊಳಿಸಿ ಚಿನ್ನದ ಪದಕವನ್ನು ತಮ್ಮ ಬಗಲಿಗೆ ಏರಿಸಿಕೊಂಡರು.

ಇದರೊಂದಿಗೆ ಪ್ರತಿಷ್ಠಿತ ವಿಶ್ವಕಪ್ ಗೆದ್ದ ಭಾರತದ ಅಂಜಲಿ ಭಾಗ್ವತ್, ಗಗನ್ ನಾರಂಗ್, ಸಂಜೀವ ರಜಪೂತ್, ರಾಜ್ಯವರ್ಧನ ಸಿಂಗ್ ರಾಥೋಡ್, ರೊಂಜನ್ ಸೋಧಿ ಮತ್ತು ಮಾನವಜಿತ್ ಸಿಂಗ್ ಸಂಧು ಅವರ ಸಾಲಿಗೆ ರಾಹಿ ಸರ್ನೋಬತ್ ಸೇರ್ಪಡೆಯಾದರು.

ಸೆಮಿಫೈನಲ್ ಹಂತಕ್ಕೆ ಒಟ್ಟು 585 ಪಾಯಿಂಟ್ ಗಳಿಸಿ ನಾಲ್ಕನೆಯವರಾಗಿ ಅರ್ಹತೆ ಪಡೆದಿದ್ದ ರಾಹಿ, ಸೆಮಿಫೈನಲ್ ನಲ್ಲಿ 15 ಪಾಯಿಂಟ್ ನೊಂದಿಗೆ ಎರಡನೇ ಅತ್ಯುತ್ತಮ ಸೆಮಿ -ಫೈನಲಿಸ್ಟ್ ಎನಿಸಿಕೊಂಡು ಫೈನಲ್ ಗೆ ಪ್ರವೇಶ ಪಡೆದಿದ್ದರು.

ಐದು ಸರಣಿಗಳ ಬಳಿಕ 16 ಅಂಕದೊಂದಿಗೆ ಕಿಮ್ ಮೊದಲ ಸ್ಥಾನದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT