ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣ ಬೇಸಾಯಕ್ಕೆ ಹೊಸ ನೀತಿ

ಕೃಷಿ ಬೆಲೆ ಆಯೋಗಕ್ಕೆ ಹೆಚ್ಚು ಆವರ್ತ ನಿಧಿ: ಮುಖ್ಯಮಂತ್ರಿ
Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕೋಲಾರ: ಒಣ ಬೇಸಾಯ ಮಾಡುವ ರೈತರ ಅನುಕೂಲಕ್ಕಾಗಿ ಹೊಸ ನೀತಿ ರಚಿಸಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ವೇಮಗಲ್ ಕ್ರೀಡಾ ಮೈದಾನದಲ್ಲಿ ಬುಧವಾರ ವಿವಿಧ ಅಭಿ ವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಕೋಲಾರದಂಥ ಮಳೆ ಆಶ್ರಿತ ಜಿಲ್ಲೆಗಳಲ್ಲಿ ಒಣಬೇಸಾಯ ಮಾಡುವ ರೈತರ ಬೆಳೆಗಳಿಗೆ ತಕ್ಕ ಬೆಲೆ ದೊರಕುತ್ತಿಲ್ಲ. ಅಂತರ್ಜಲ ಮಟ್ಟ ಕುಸಿ ದಿದೆ. ಈ ನಿಟ್ಟಿನಲ್ಲಿ ಒಣಬೇಸಾಯ ಮಾಡುವ ರೈತರಿಗೆ ಶಕ್ತಿ ತುಂಬುವ ಪ್ರಯತ್ನ ನಡೆದಿದೆ ಎಂದರು.

ಹೊಸ ನೀತಿ ರಚನೆ ಸಂಬಂಧ ಕೃಷಿ ಸಚಿವ ಕೃಷ್ಣಬೈರೇಗೌಡರು ಈಗಾಗಲೇ ಕೃಷಿ ತಜ್ಞ ಸ್ವಾಮಿನಾಥನ್‍ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಕೃಷಿ ಬೆಲೆ ಆಯೋಗ ರಚನೆಗೂ ಸಿದ್ಧತೆ ನಡೆದಿದೆ. ಆಯೋಗದ ಶಿಫಾರಸಿ ನಂತೆ ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡಲಾಗುವುದು. ಬೆಲೆ ಕುಸಿತವಾದ ಕೂಡಲೇ ಸರ್ಕಾರ ಮಾರುಕಟ್ಟೆಗೆ ಪ್ರವೇ ಶಿಸಿ ಬೆಳೆಗಳನ್ನು ಖರೀದಿಸುತ್ತದೆ. ಅದ ಕ್ಕಾಗಿ ₨1 ಸಾವಿರ ಕೋಟಿ ಆವರ್ತ ನಿಧಿ ಮೀಸಲಿಡಲಾಗಿದೆ. ಅಗತ್ಯಬಿದ್ದರೆ ಈ ವರ್ಷವೇ ನಿಧಿ ಪ್ರಮಾಣ ಹೆಚ್ಚಿಸ ಲಾಗುವುದು ಎಂದು ತಿಳಿಸಿದರು.

ಕೆಪಿಎಸ್‌ಸಿ: ಗೆಜೆಟೆಡ್ ಪ್ರೊಬೆಷನರ್ಸ್ ನೇಮಕ ಪರೀಕ್ಷೆ ಮತ್ತು ಸಂದರ್ಶನವನ್ನು ಹೊಸದಾಗಿ ಮಾಡಬೇಕು ಎಂದು ಸಿಐಡಿ ತನಿಖಾ ವರದಿಯಲ್ಲಿ ನೀಡಿರುವ ಶಿಫಾ ರಸನ್ನು ಸಚಿವ ಸಂಪುಟ ಒಪ್ಪಿಕೊಂಡಿದೆ. ಅದರಂತೆಯೇ ವಿಷಯ ತಜ್ಞರನ್ನು ಹೊರಗಿನಿಂದ ಕರೆಸಿ ಪರೀಕ್ಷೆ, ಸಂದರ್ಶನ ವನ್ನು ನಡೆಸಲಾಗುವುದು ಎಂದರು.

ನೇಮಕಾತಿ ಅಕ್ರಮ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳು ವುದು ತಡವಾಗುತ್ತದೆ. ನ್ಯಾಯಾಲಯ ನೀಡುವ ತೀರ್ಪಿನಂತೆ ಕ್ರಮ ಕೈಗೊಳ್ಳಲಾ ಗುವುದು ಎಂದು ಅವರು ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಲುಬಾಯಿ ಜ್ವರ: ಕೋಲಾರವೂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾಲು ಬಾಯಿ ಜ್ವರದಿಂದ ಜಾನುವಾರುಗಳು ಸಾವಿಗೀಡಾಗಿರುವ ಕುರಿತು ಅಧಿಕಾರಿ ಗಳು ಮಾಹಿತಿ ನೀಡಿದ್ದಾರೆ. ಪಶುವೈದ್ಯ ಇಲಾಖೆ ಅಧಿಕಾರಿಗಳನ್ನು ಅನ್ಯ ಇಲಾಖೆ ಕಾರ್ಯಕ್ಕೆ ನಿಯೋಜಿಸಿರುವುದರಿಂದ ಸಮಸ್ಯೆ ಹೆಚ್ಚಾಗಿದೆ ಎಂಬ ವಿಷಯದ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾ ಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT