ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿನಿಂದ ಜ್ಞಾನಾರ್ಜನೆ: ನಟ ಪುನೀತ್ ರಾಜ್‌ಕುಮಾರ್

Last Updated 6 ಸೆಪ್ಟೆಂಬರ್ 2013, 20:23 IST
ಅಕ್ಷರ ಗಾತ್ರ

ಬೆಂಗಳೂರು: `ಪುಸ್ತಕ ಓದುವುದು ಒಳ್ಳೆಯ ಹವ್ಯಾಸ. ಇದರಿಂದ ಜ್ಞಾನ ಬೆಳೆಯುತ್ತದೆ' ಎಂದು ನಟ ಪುನೀತ್ ರಾಜ್‌ಕುಮಾರ್ ಅಭಿಪ್ರಾಯಟ್ಟರು.

ಜೈ ಕೋ ಬುಕ್ ಹೌಸ್ ಹಾಗೂ ಸಪ್ನ ಬುಕ್ ಹೌಸ್ ಸಹಯೋಗದೊಂದಿಗೆ ನಗರದಲ್ಲಿ ಶುಕ್ರವಾರ ನಡೆದ ಗೌರಿ ಜಯರಾಂ ಅವರ `ವೈಸ್ ಎನಫ್ ಟು ಬಿ ಫೂಲಿಶ್' ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ನನಗೆ ಪುಸ್ತಕ ಓದುವ ಅಂತಹ ಹವ್ಯಾಸವೇನೂ ಇಲ್ಲ. ಆದರೆ, ಚೆನ್ನಾಗಿರುವ ಕೆಲವು ಪುಸ್ತಕಗಳನ್ನು ಓದಿದ್ದೇನೆ. ನನ್ನ ಹೆಂಡತಿಗೆ ಪುಸ್ತಕ ಓದುವ ಹವ್ಯಾಸವಿದೆ' ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

`ಲೇಖಕಿ ಗೌರಿ ಜಯರಾಂ ಅವರು ಬರೆದಿರುವ ಪುಸ್ತಕ ಕನ್ನಡದಲ್ಲಿಯೂ ಅನುವಾದವಾಗಲಿ. ಕನ್ನಡದ ಓದುಗರಿಗೂ ಈ ಪುಸ್ತಕ ತಲುಪುವಂತಾಗಲಿ' ಎಂದು ಆಶಯ ವ್ಯಕ್ತಪಡಿಸಿದರು.

ಲೇಖಕಿ ಗೌರಿ ಜಯರಾಂ ಅವರು ಕೃತಿಯ ಕುರಿತು ಮಾತನಾಡಿ, `ಕೃತಿಯು ಭಾರತೀಯ ಹುಡುಗಿಯ ಜೀವನವನ್ನು ಆಧರಿಸಿದೆ. ಅವಳು ಬದುಕಿನಲ್ಲಿ ಎದುರಿಸುವ ಸವಾಲುಗಳು, ಅನಿರೀಕ್ಷಿತವಾದ ತಿರುವುಗಳನ್ನು ಸಹಜವೆಂಬಂತೆ ಬಿಂಬಿಸಲಾಗಿದೆ' ಎಂದರು.

`ಸ್ವಾತಂತ್ರ್ಯಕ್ಕಾಗಿ ಅವಳ ಹೋರಾಟ, ಸಾಧನೆಯ ನಡುವಿನ ಅವಳ ತೊಳಲಾಟ, ಅವಳ ಜೀವನದ ಗುರಿ ಸಾಧಿಸಲು ಅವಳು ಪಡುವ ಕಷ್ಟದ ಕುರಿತು ಬರೆಯಲಾಗಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT