ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುಗರ ಪತ್ರ

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ಅಳಿದ ಮೇಲೆ ಉಳಿದ ಬೆಳಕು~ (ಡಾ.ರವೀಂದ್ರನಾಥ್, ಸಾಪು, ಅ.16) ಲೇಖನ ನನ್ನನ್ನು ಭಾವುಕನನ್ನಾಗಿಸಿತು. ಪ್ಯಾನ್‌ಕ್ರಿಯಾಟಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಡಾ.ಸ್ಟೇಮನ್ ಅವರು ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದ ತಮ್ಮ ಪ್ರಯೋಗವನ್ನು ತಮ್ಮ ಮೇಲೆಯೇ ಪ್ರಯೋಗಿಸಿಕೊಂಡಿದ್ದು ಸಾಮಾನ್ಯ ಸಂಗತಿಯಲ್ಲ. (ಸ್ಟೇಮನ್ ಅನುಭವಿಸುತ್ತಿದ್ದ ಕಾಯಿಲೆಯಿಂದ ನಾನೂ ನರಳುತ್ತಿದ್ದೇನೆ). ಅವರಿಗೆ ನೊಬೆಲ್ ಪ್ರಶಸ್ತಿ ಸಂದಿರುವುದು ಶ್ಲಾಘನೀಯ. ಆದರೆ ಪ್ರಶಸ್ತಿ ಪ್ರಕಟವಾಗುವ ಮೂರು ದಿನಗಳ ಮೊದಲು ಅವರು ಸಾವಿಗೀಡಾದುದು ನೋವು ತಂದಿತು. ಅವರ ಸಂಶೋಧನೆ ಕ್ಯಾನ್ಸರ್ ರೋಗಿಗಳ ನಾಳೆಗಳಿಗೆ ಬೆಳಕಾಗಿ ಪರಿಣಮಿಸಲಿ ಎಂದು ಆಶಿಸುವೆ.
-ಹೆಚ್.ರಾಮಯ್ಯ, ಬೆಂಗಳೂರು.

ಮಲಯಾಳಂ ಚಲನಚಿತ್ರ ಕ್ಷೇತ್ರದಲ್ಲಿ ಹೊಸತನದ ಚಂಡಮಾರುತ ಎಬ್ಬಿಸಿದ `ಆದಾಮಿಂಡೆ ಮಗನ್ ಅಬು~ ಸಿನಿಮಾವನ್ನು ಬಿ.ಎಂ.ಹನೀಫ್ ವಸ್ತುನಿಷ್ಠವಾಗಿ ನೋಡಿದ್ದಾರೆ. ಸಲಿಂ ಅಹಮ್ಮದ್ ಎಂಬ ನವ ನಿರ್ದೇಶಕ ಮತ್ತು ಸಲೀಂಕುಮಾರ್ ಎಂಬ ಹಳೆಯ ನಟ ಇವರಿಬ್ಬರ ಪ್ರತಿಭೆಯ ಸಮ್ಮಿಲನ ಈ ಚಿತ್ರದ ವಿಶೇಷ. ಸಲೀಂಕುಮಾರ್ ಒಬ್ಬ ಮಿಮಿಕ್ರಿ ಕಲಾವಿದ, ಸಿನಿಮಾಗಳಲ್ಲಿ ಹಾಸ್ಯಪಾತ್ರಗಳಿಗೆ ಅಂಟಿಕೊಂಡಿದ್ದವರು. ಕೇರಳದಲ್ಲಿ ಸಾಕಷ್ಟು ಪಳಗಿದ ನಿರ್ದೇಶಕ ಪ್ರತಿಭೆಗಳಿದ್ದರೂ ಸಲೀಂಕುಮಾರ್ ಪ್ರತಿಭೆಯನ್ನು ಗುರುತಿಸಲು ಒಬ್ಬ ಸಲಿಂ ಅಹಮ್ಮದ್ ಬೇಕಾಯಿತು! ತಮ್ಮ ಅದ್ಭುತ ನಟನೆಯಿಂದ ಸಲೀಂಕುಮಾರ್ ನಟರ ಬಗೆಗಿನ ಸಾಮಾನ್ಯ ಧೋರಣೆಗಳ ಕೋಟೆಯನ್ನೇ ಹೊಡೆದು ಬೀಳಿಸಿದ್ದಾರೆ. ನಟರನ್ನು ಕೆಲವು ವಿಶೇಷ ಪಾತ್ರಗಳಿಗೆ ಬಂಧಿಸಿಡುವ ಹುನ್ನಾರ ಬಯಲಿಗೆಳೆದಿದ್ದಾರೆ.
-ಪಿ.ಪಿ.ಬಾಬುರಾಜ್, ಮೈಸೂರು

ಗ್ರಾಮೀಣ ಕಸುವಿನ ಜೀವಂತ ಕಥೆಗಳನ್ನು ಬರೆದ ಬೆಸಗರಹಳ್ಳಿ ರಾಮಣ್ಣನವರ ಸಮಗ್ರ ಕಥನ ಸಾಹಿತ್ಯ ಕೃತಿ `ಕಣಜ~ ಹೊರಬಂದಿರುವುದು ಸಂತಸದ ವಿಷಯ. ಅನನ್ಯ `ಕಣಜ~ವನ್ನು ವಿಮರ್ಶಕ ಪುರುಷೋತ್ತಮ ಬಿಳಿಮ

ಲೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
-ಬಸವರಾಜ ಹಳ್ಳಿ, ಹಸಮಕಲ್

`ಪ್ರಜಾವಾಣಿ ದೀಪಾವಳಿ ವಿಶೇಷಾಂಕ-2011~ ಅದ್ಭುತವಾಗಿ ಮೂಡಿಬಂದಿದೆ. ಬಹುಮಾನಿತ ಕವಿತೆಗಳು ತುಂಬಾ ಇಷ್ಟವಾದವು.
-ಕಲ್ಲೇಶ್ ಕುಂಬಾರ್, ಹಾರೋಗೇರಿ

ವಸ್ತು ವೈವಿಧ್ಯ ಹಾಗೂ ವಿನ್ಯಾಸದ ದೃಷ್ಟಿಯಿಂದ ದೀಪಾವಳಿ ವಿಶೇಷಾಂಕ ಮನಸೆಳೆಯುವಂತಿದೆ. `ವಿಶೇಷಾಂಕ ಎನ್ನುವ ವಿಶೇಷಣ~ ಸಂಚಿಕೆಯ ಎಲ್ಲ ಪುಟಗಳಲ್ಲಿ ಎದ್ದುಕಾಣುತ್ತದೆ.
-ಶ್ರೀಗೌರಿ, ಮೈಸೂರು

ಕಳೆದ ಎರಡು ದಶಕಗಳಲ್ಲಿ ನಾಡು ನುಡಿಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿನ ಪಲ್ಲಟ- ನೋಟಗಳ ಗುಚ್ಛ `ಕೆ-20~ರ ಪರಿಕಲ್ಪನೆಯೇ ಖುಷಿ ನೀಡುವಂತಿದೆ. ಪಿ.ಶೇಷಾದ್ರಿ ಅವರ `ಮೋಕ್ಷ ಹುಡುಕುತ್ತಾ ಮುಕ್ತಿಭವನದಲ್ಲಿ...~ ಲೇಖನ ನನ್ನನ್ನು ತಲ್ಲಣಗೊಳಿಸಿತು. ಕೆ.ಫಣಿರಾಜ್‌ರ `ಸ್ವಲ್ಪ ಸೌಂಡು ಜಾಸ್ತಿ ಮಾಡು~ ಬರಹ ತನ್ನ ಹೊಸ ನೋಟದಿಂದ ಹಾಗೂ ಗಿರೀಶ ಕಾಸರವಳ್ಳಿಯವರ `ಸಮಯ ಪರೀಕ್ಷೆ~ ಗಾಂಭೀರ್ಯದಿಂದ ಗಮನಸೆಳೆದವು.
-ಎಂ.ಕೆ. ರಾಜೇಶ್, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT