ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔದುಂಬರೇಶ್ವರ ಸನ್ನಿಧಿಯಲ್ಲಿ ಪುಣ್ಯೋತ್ಸವ

Last Updated 10 ಜನವರಿ 2014, 6:51 IST
ಅಕ್ಷರ ಗಾತ್ರ

ಸವಣೂರ : ಜಾಗೃತ ದೈವ ಸನ್ನಿಧಿಯಾಗಿರುವ  ಔದುಂಬರೇಶ್ವರ ದೇವಸ್ಥಾನದ ದ್ವಿಶತ ಮಾನೋತ್ಸವನ್ನು ಸಪ್ತಾಹ ಪರ್ಯಂತ ಆಚರಿಸುವಂತೆ ಅಗಡಿ ಆನಂದವನದ ಗುರುಗಳಾದ ಗುರುದತ್ತ ಚಕ್ರವರ್ತಿಗಳು ಸಲಹೆ ನೀಡಿದರು.

ಸವಣೂರಿನ ಶ್ರೀ ಔದುಂಬರೇಶ್ವರ ಸನ್ನಿಧಿಯಲ್ಲಿ ಮೂರು ದಿನಗಳ ಪರ್ಯಂತ ಈಚೆಗೆ ಜರುಗಿದ 197 ನೇ ಪುಣ್ಯೋತ್ಸವ ಆರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಸಂದೇಶ ನೀಡಿದರು. ಗುರು ಚರಿತ್ರ ಸಪ್ತಾಹ, ಚಿದಂಬರ ಸಪ್ತಾಹಗಳನ್ನು ಕೈಗೊಳ್ಳುವ ಮೂಲಕ ಮುಂಬರುವ ಪುಣ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷತೆ ನೀಡುವಂತೆ ತಿಳಿಸಿದರು.

ಸವಣೂರಿನಲ್ಲಿ ನಿರಂತರವಾಗಿ ಕೈಗೊಳ್ಳ ಲಾಗುತ್ತಿರುವ ಧಾರ್ಮಿಕ ಆಚರಣೆಗಳ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ಗುರುಗಳು, ಧರ್ಮದ ಸಾಂಗತ್ಯ ನಿರಂತರವಾಗಿರಲಿ. ಸಂಘಟಿತ ಮನೋಭಾವ ಹಾಗೂ ಪರಸ್ಪರ ಸಹಕಾರದೊಂದಿಗೆ ಧರ್ಮಾಚರಣೆಗಳು ಸಜ್ಜನರನ್ನು ರಕ್ಷಿಸಲಿ ಎಂದು ಹಾರೈಸಿದರು.

ಸವಣೂರ ತಾಲ್ಲೂಕು ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಜಯತೀರ್ಥ ದೇಶಪಾಂಡೆ ಅವರನ್ನು ಗೌರವಿಸಿ, ಪ್ರೋತ್ಸಾಹ ನೀಡಿದರು.
ಮೂರು ದಿನಗಳ ಪುಣ್ಯೋತ್ಸವ ಕಾರ್ಯಕ್ರಮದ ಅನ್ವಯ ನಿತ್ಯ ಕಾಕಡಾರತಿ, ರುದ್ರಾಭಿಷೇಕ, ನಾಮಸ್ಮರಣೆ, ಭಜನೆ, ಕೀರ್ತನೆ, ಅಷ್ಟಾವದಾನ ಸೇವೆ ಸೇರಿದಂತೆ ಹತ್ತಾರು ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ವಿಶೇಷವಾಗಿ 108 ಕಲಶಗಳ ಕ್ಷೀರಾಭಿಷೇಕವನ್ನು ಲಘುನ್ಯಾಸ ಪೂರ್ವಕವಾಗಿ ಕೈಗೊಳ್ಳಲಾಯಿತು. ಗುರುಪೂಜೆ, ಸಹಸ್ರ ಬಿಲ್ವ–ಪುಷ್ಪಾರ್ಚನೆ, ಅಗಡಿಯ ಸಂತರಾದ ವಿಶ್ವನಾಥ ಅವರಿಂದ ಪ್ರವಚನ, ಭಜನ ಕಾರ್ಯಕ್ರಮ ನೆರವೇರಿದವು.  

ಪುಣ್ಯೋತ್ಸವದ ಪ್ರಯುಕ್ತ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಚಿದಂಬರ ಹೋಮ ಹಾಗೂ ಅರಾಯಿಕಾಣೆ ಹೋಮಗಳನ್ನು ಕೈಗೊಳ್ಳಲಾಯಿತು. ಅಗಡಿ ಆನಂದವನದ ಆಧ್ಯಾಪಕರಾದ ಶಂಕರಭಟ್ ಜೋಶಿ ಸೇರಿದಂತೆ ಹಲವಾರು ಪ್ರಮುಖರು, ಸವಣೂರಿನ ಬ್ರಾಹ್ಮಣ ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

ಪುಣ್ಯೋತ್ಸವದ ಬುತ್ತಿಪೂಜಾ ಕಾರ್ಯಕ್ರಮದ ಅಡಿ ಬುತ್ತಿಯಲ್ಲಿ ರೂಪಿಸಲಾಗಿದ್ದ ವರದಳ್ಳಿ ಶ್ರೀಧರ ಸ್ವಾಮಿಗಳ ಪ್ರತಿರೂಪವನ್ನು ಶೃದ್ಧಾ ಭಕ್ತಿ ಪೂರ್ವಕವಾಗಿ ಅರ್ಚಿಸಲಾಯಿತು. ಸಹಸ್ರಾರು ಜನರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು. ಅರ್ಚಕರಾದ ಸಾರಥರಾಮ್ ಕುಟುಂಬ ವರ್ಗದ ಸದಸ್ಯರು ಪುಣ್ಯೋತ್ಸವವನ್ನು ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT