ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿ ಸ್ಥಳಕ್ಕೆ ಮತ್ತೆ ಬೇಡಿಕೆ

Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಚೇರಿ ಸ್ಥಳಾವಕಾಶಕ್ಕೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚುತ್ತಿದೆಯೇ? `ಕಾರ್ಪೊರೇಟ್ ಕಮರ್ಷಿಯಲ್ ರಿಯಲ್ ಎಸ್ಟೇಟ್ ಸರ್ವಿಸಸ್' (ಸಿಬಿಆರ್‌ಇ) ಪ್ರಕಟಿಸಿದ ಇತ್ತೀಚಿನ ವರದಿ ಪ್ರಕಾರ ಜಾಗತಿಕವಾಗಿ ಕಂಪೆನಿಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗಾಗಿ ನಿರ್ಮಿಸಿದ ಕಚೇರಿ ಕಟ್ಟಡಗಳ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ.

ಕಚೇರಿಗಾಗಿ ವಾಣಿಜ್ಯ ಪ್ರದೇಶ ಮತ್ತು ಕಟ್ಟಡಗಳನ್ನು ಬಳಸುವ ಪ್ರಮಾಣ ಜನವರಿಯಿಂದ ಮಾರ್ಚ್‌ವರೆಗಿನ ತ್ರೈಮಾಸಿಕದಲ್ಲಿ ಶೇ 17ರಷ್ಟು ಹೆಚ್ಚಿದೆ ಎಂದು `ಸಿಬಿಆರ್‌ಇ' ಇತ್ತೀಚಿನ ವರದಿ ತಿಳಿಸಿದೆ.

ಮುಖ್ಯವಾಗಿ ದೇಶದ 7 ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ, ಚೆನ್ನೈ, ಎನ್‌ಸಿಆರ್(ರಾಷ್ಟ್ರೀಯ ರಾಜಧಾನಿ ಪ್ರದೇಶ), ಹೈದರಾಬಾದ್, ಪುಣೆ ಹಾಗೂ ಕೊಲ್ಕತಾದಲ್ಲಿ 66 ಲಕ್ಷ ಚದರಡಿಯಷ್ಟು `ಆಫೀಸ್ ಸ್ಪೇಸ್'(ಕಚೇರಿ ಸ್ಥಳ) ಬೇಡಿಕೆ ಹೆಚ್ಚಿದೆ ಎಂದು ಅದು ತಿಳಿಸಿದೆ.

ಭಾರತದ ಕಚೇರಿ ಸ್ಥಳಾವಕಾಶ ಮಾರುಕಟ್ಟೆ ಬೆಳವಣಿಗೆಯ ದರ 2013ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕ(ಏಪ್ರಿಲ್-ಜೂನ್) ಅವಧಿಯಲ್ಲಿ ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ಎನ್‌ಸಿಆರ್ (ರಾಷ್ಟ್ರೀಯ ರಾಜಧಾನಿ ಪ್ರದೇಶ)ದಲ್ಲಿ ಶೇ 90ರಷ್ಟು ಪ್ರಗತಿ ದಾಖಲಿಸಲಿದೆ ಎಂದು ವರದಿ ಭವಿಷ್ಯ ನುಡಿದಿದೆ.

`ಇದು ದೇಶದ ಅರ್ಥ ವ್ಯವಸ್ಥೆ ದೃಷ್ಟಿಯಿಂದ ಒಂದು ಸಕರಾತ್ಮಕ ಬೆಳವಣಿಗೆ'ಎಂದಿರುವ `ಸಿಬಿಆರ್‌ಇ' ದಕ್ಷಿಣ ಏಷ್ಯಾ ವಲಯ ಅಧ್ಯಕ್ಷ ಅಂಶುಮನ್ ಮ್ಯಾಗಜಿನ್, ಭಾರತದ ಆರ್ಥಿಕತೆ ಇನ್ನ್ಟು ಬಲಿಷ್ಟವಾಗುತ್ತಿರುವುದನ್ನು ಇದು ತೋರಿಸುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

`ಸದ್ಯ ಜಾಗತಿಕ ಆರ್ಥಿಕತೆ ಕೊಂಚ ಚೇತರಿಕೆಯ ಹಾದಿ ಹಿಡಿದಿರುವಾಗ ಅದಕ್ಕೆ ತಕ್ಕಂತೆ ಭಾರತದ ಅರ್ಥಿಕ ಸ್ಥಿತಿಯೂ ಪ್ರಗತಿಯ ದಿಸೆಯಲ್ಲಿದೆ' ಎಂದು ಗಮನ ಸೆಳೆದಿರುವ ವರದಿ, `ಕಡಿಮೆ ವಿಸ್ತೀರ್ಣದ ಕಚೇರಿಗಳಿಗಂತೂ ಬೇಡಿಕೆ ಹೆಚ್ಚುತ್ತಲೇ ಇದೆ ಎಂದು ವಿವರಿಸಿದೆ.

ಸೂಕ್ಷ್ಮ ಸ್ವರೂಪದ ಮಾರುಕಟ್ಟೆ ಪ್ರದೇಶಗಳಲ್ಲಿನ ಕಚೇರಿ ಸ್ಥಳದ ಬಾಡಿಗೆ ಮೌಲ್ಯ ಇಳಿಕೆಯ ಹಾದಿಯಲ್ಲಿದ್ದರೆ, ಬೆಂಗಳೂರಿನ ವರ್ತುಲ ರಸ್ತೆ(ರಿಂಗ್ ರೋಡ್) ಹೊರವಲಯ, ವೈಟ್‌ಫೀಲ್ಡ್, ಗುಡಗಾಂವ್, ನೊಯಿಡಾದಂತಹ ಉಪ ನಗರಗಳಲ್ಲಿ ಬಾಡಿಗೆ ದರ ಸ್ಥಿರತೆ ಕಾಯ್ದುಕೊಂಡಿದೆ ಎಂದು ವರದಿ ಸ್ಪಷ್ಟಪಡಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT