ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ಈದ್‌ಮಿಲಾದ್ ಮೆರವಣಿಗೆ

Last Updated 6 ಫೆಬ್ರುವರಿ 2012, 10:00 IST
ಅಕ್ಷರ ಗಾತ್ರ

ಕಡೂರು: ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತ್ದ್ದಿದರೆ, ಇತ್ತ 31 ಎಕರೆಯಲ್ಲಿರುವ ನೂರಾನಿ ಮಸೀದಿ, ಅಹಲೇ ಸುನ್ನತ್ ಜಮಾತ್ ಮಸೀದಿಗಳ ಆಶ್ರಯದಲ್ಲಿ ಹಜರತ್ ಮಹಮದ್ ಪೈಗಂಬರ್ ಅವರ ಜನ್ಮದಿನವನ್ನು ಭಾನುವಾರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಂತ ರೀತಿಯ ಮೆರವಣಿಗೆ ನಡೆಸುವುದರ ಮೂಲಕ ಆಚರಿಲಾಯಿತು. 
ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ ನಂತರ ಒಟ್ಟಾಗಿ ಸೇರಿಕೊಂಡು ವಿವಿಧ ಸುಗಂಧಗಳನ್ನು ಲೇಪಿಸಿಕೊಂಡು ಜುಲುಸ್ ಮೆರವಣಿಗೆಯಲ್ಲಿ ಪೈಗಂಬರ್‌ಗೆ ಜಯವಾಗಲಿ ಎಂಬ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು.

 `ನಾತ್ ಹಮ್ಮದ್~ ಮೆರವಣಿಗೆಯಲ್ಲಿ ಪೈಗಂಬರ್ ಬಗ್ಗೆ ಗೀತೆಗಳನ್ನು ಹಾಡುತ್ತಿದ್ದರು. ಸುನ್ನತ್ ಜಮಾತ್ ಮಸೀದಿಯ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು ತಮ್ಮ ಧರ್ಮದ ಪದ್ಧತಿಯಂತೆ ಪ್ರೀತಿಯಿಂದ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು.

ಪಟ್ಟಣದ ಸಾರ್ವಜನಿಕರೊಂದಿಗೆ ಈದ್ ಮಿಲಾದ್ ಹಬ್ಬದ ಸಡಗರವನ್ನು ಇತರೆ ಸಮೂಹಗಳ ಜನರೊಂದಿಗೆ ಪ್ರೀತಿ ವಿಶ್ವಾಸಗಳಿಂದ ಹಂಚಿಕೊಂಡರು. ಮಸೀದಿಯ ಅಧ್ಯಕ್ಷ ಪೈರೋಜ್ ಮತ್ತು ವರ್ತಕ ಮಹಮದ್ ಅಲಿ  ಮತ್ತಿತರರು ಇದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT