ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕ: ರೈಟ್ ರೈಟ್...

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ಝೀ ಕನ್ನಡ ವಾಹಿನಿಯಲ್ಲಿ `ಕನಕ~ ಹೆಸರಿನ ಹೊಸ ಧಾರಾವಾಹಿ ಆರಂಭವಾಗಿದೆ. ಇದನ್ನು `ಮಿಲನ~ ಪ್ರಕಾಶ್ ನಿರ್ದೇಶಿಸಿದ್ದಾರೆ.

ಕಂಡಕ್ಟರ್ ಒಬ್ಬಳ ಜೀವನದ ಏಳು ಬೀಳುಗಳ ಕಥಾ ಹಂದರವೇ `ಕನಕ~. ಜೊತೆಗೆ ಇದು ಮಹಿಳಾ ಕಂಡಕ್ಟರ್‌ಗಳ ಜೀವನದ ಮೇಲೆ ಬೆಳಕು ಚೆಲ್ಲುವ ಪ್ರಥಮ ಧಾರಾವಾಹಿ ಎಂದು ತಂಡ ಹೇಳಿಕೊಂಡಿದೆ.

ಪ್ರಕಾಶ್ ಅವರ ಹಿಂದಿನ `ಲಕುಮಿ~ ಧಾರಾವಾಹಿಯಲ್ಲಿ ನಟಿಸಿದ್ದ ಸುಷ್ಮಾ `ಕನಕ~ ಪಾತ್ರ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಸುನೀಲ್ ಪುರಾಣಿಕ್, ಋತು, ಗೌತಮ್, ಬಿ.ಎಂ.ವೆಂಕಟೇಶ್, ಖುಷಿ, ವೀಣಾ ವೆಂಕಟೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಧಾರಾವಾಹಿಯ ಸಂಚಿಕೆ ನಿರ್ದೇಶಕರು ಭಾರತೀಶ್. ಶಂಕರ್ ಬಿಲ್ಲೆಮನೆ ಚಿತ್ರಕತೆ, ಕೇಶವ ಚಂದ್ರ ಸಂಭಾಷಣೆ ಬರೆದಿದ್ದಾರೆ. ಜು.2ರಿಂದ ರಾತ್ರಿ 9 ಗಂಟೆಗೆ `ಕನಕ~ ಪ್ರಸಾರವಾಗುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT