ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ವೇತನಕ್ಕಾಗಿ ಬೀದಿಗಿಳಿದ ಕಾರ್ಮಿಕರು

Last Updated 15 ಫೆಬ್ರುವರಿ 2011, 10:35 IST
ಅಕ್ಷರ ಗಾತ್ರ

ಮಧುಗಿರಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದ್ದು ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸ ಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ತಾಲ್ಲೂಕು ಕಚೇರಿ ಮುಂದೆ ಸಮಾವೇಶಗೊಂಡರು. ಈ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಘಟಕದ ಅಧ್ಯಕ್ಷೆ   ಎಸ್.ಡಿ ಪಾರ್ವತಮ್ಮ, ದಿನಬಳಕೆ ವಸ್ತುಗಳನ್ನು ರಿಯಾ ಯಿತಿ ದರದಲ್ಲಿ ಪಡಿತರ ಅಂಗಡಿಗಳ ಮೂಲಕ ವಿತರಣೆ ಆಗಬೇಕು ಎಂದು ಆಗ್ರಹಿಸಿದರು. 
 
ಕಾರ್ಯದರ್ಶಿ ಮಲ್ಲಮ್ಮ ಮಾತನಾಡಿ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಜೀವವಿಮೆ ಆಧಾರಿತ ಪಿಂಚಣಿ ಜಾರಿ ಮಾಡುವಂತೆ ಒತ್ತಾಯಿಸಿದರು. ಎಲ್.ಎಸ್.ಸುಕನ್ಯಾ, ಜಯಲಕ್ಷ್ಮಿ, ಶಕುಂತಲಾ, ಶೋಭ, ತಾಯಿಮುದ್ದಮ್ಮ, ಜಿ.ಕಮಲಮ್ಮ, ಲಕ್ಷ್ಮಿನರಸಮ್ಮ, ಪುಟ್ಟರಂಗಮ್ಮ, ಸರೋಜಾ, ಗಂಗಮ್ಮ, ನಾಗಲಕ್ಷ್ಮಿ, ಗಂಗಾದೇವಿ, ಬಿ.ಎನ್,ಪಾರ್ವತಮ್ಮ ನೇತೃತ್ವ ವಹಿಸಿದ್ದರು.     
 
ಕೊರಟಗೆರೆ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ಕೂಲಿ, ಹಮಾಲಿ ನೌಕರರ ಸೇವಾಶಾಸನ ಹಾಗೂ ಕಲ್ಯಾಣಕ್ಕಾಗಿ ಸೂಕ್ತ ಯೋಜನೆಗಳನ್ನು ರೂಪಿಸುವಂತೆ  ಕಾರ್ಮಿಕರು ಒತ್ತಾಯಿಸಿದರು. ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಂಘಟನೆಗೊಂಡ ಕಾರ್ಮಿಕರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ, ತಾಲ್ಲೂಕು ಕಚೇರಿ ಎದರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ನೌಷಾದ್ ಶೆವಾಗನ್, ಆದಿಲಕ್ಷ್ಮಿ, ಮಹಮದ್ ಭಾಷಾ, ಲಲಿತಮ್ಮ, ವಿಜಯಲಕ್ಷ್ಮಿ, ತಿಮ್ಮಕ್ಕ, ಷಡಾಕ್ಷರರಾಧ್ಯ, ಪಾಂಡು, ನಾಗಭೂಷಣ್ ಮತ್ತಿತರರು ಭಾಗವಹಿಸಿದ್ದರು

ತುರುವೇಕೆರೆ  ವರದಿ:
ಪಟ್ಟಣದಲ್ಲಿ ಸೋಮ ವಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ನಡೆಸಿದ  ಪ್ರತಿಭಟನೆ ನಡೆಸಿದರು. ಸಂಘಟನೆಯ ಮುಖಂಡರಾದ  ಸತೀಶ್, ಸಿಐಟಿಸಿ ತಾಲ್ಲೂಕು ಸಮಿತಿಯ ಅಧ್ಯಕ್ಷೆ ವಸಂತಮ್ಮ, ಶೋಭಾ, ಕೆಂಪದೇವಮ್ಮ, ರಂಗ ಲಕ್ಷ್ಮೀ, ತುಂಗಭದ್ರಮ್ಮ, ರಂಗನಾಥ್ ಮೊದಲಾದವರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT