ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ ಪ್ರೀಮಿಯರ್ ಲೀಗ್: ಹೈದರಾಬಾದ್ ತಂಡಕ್ಕೆ ಗೆಲುವು

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ವಿಜಯವಾಡ: ಹೈದರಾಬಾದ್ ಹಾರ್ಸಸ್ ತಂಡದವರು ಇಲ್ಲಿ ನಡೆಯುತ್ತಿರುವ ಕಬಡ್ಡಿ ಪ್ರೀಮಿಯರ್‌ಲೀಗ್‌ನ (ಕೆಪಿಎಲ್) ಚೊಚ್ಚಲ ಆವೃತ್ತಿಯ ಪಂದ್ಯದಲ್ಲಿ ಗೆಲುವು ಪಡೆದರು.

ಇಲ್ಲಿನ ಡಿಆರ್‌ಆರ್ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರೋಚಕ ಹಣಾಹಣಿಯ ಪಂದ್ಯದಲ್ಲಿ ಹೈದರಾಬಾದ್ ಹಾರ್ಸಸ್ ತಂಡ 58-53 ಪಾಯಿಂಟ್‌ಗಳಿಂದ ರಾಜಸ್ತಾನ ರೈಡರ್ಸ್ ತಂಡವನ್ನು `ರೈಡ್~ ಮಾಡಿ ಗೆಲುವಿನ ನಗೆ ಬೀರಿತು.

ದಿನದ ಇನ್ನೊಂದು ಪಂದ್ಯದಲ್ಲಿ ಅಂಗೊಲೆ ಬುಲ್ಸ್ ತಂಡ 31-29ಪಾಯಿಂಟ್‌ಗಳಿಂದ ಲ್ಯಾನ್ಸೊ  ಲಯನ್ಸ್ ತಂಡವನ್ನು ಮಣಿಸಿ ಗೆಲುವನ್ನು ತನ್ನದಾಗಿಸಿಕೊಂಡಿತು.

ವಿಜಯಿ ತಂಡ ವಿರಾಮದ ವೇಳೆಗೆ 13-11ಪಾಯಿಂಟ್‌ಗಳ ಮುನ್ನಡೆಯನ್ನು ಹೊಂದಿತ್ತು. ನಂತರ ಉಭಯ ತಂಡಗಳು ಚುರುಕಿನ ಆಟವಾಡಿದವು. ಆದರೆ ಆನಂದ್ ಅಂಗೋಲ್ಸ್ ಕೊನೆಗೂ ಗೆಲುವು ಪಡೆಯುವಲ್ಲಿ ಯಶಸ್ಸು ಕಂಡಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT