ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್ ಪಾರ್ಕ್ ಕೆರೆಗೆ ನೈಸರ್ಗಿಕ ಔಷಧಿ

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಕಬ್ಬನ್ ಉದ್ಯಾನದಲ್ಲಿರುವ ತಾವರೆಕೊಳ ಮತ್ತು ಕರಗನಕುಂಟೆ ಕೆರೆಯ ನೀರನ್ನು ಶುದ್ಧಗೊಳಿಸುವ ಸಲುವಾಗಿ `ಎಫೆಕ್ಟೀವ್ ಮೈಕ್ರೋಬ್ಸ್~ ಔಷಧಿಯನ್ನು ಸೋಮವಾರ ಸಿಂಪಡಿಸಲಾಯಿತು.

ಸುಮಾರು ಒಂದು ಎಕರೆ ಪ್ರದೇಶದಲ್ಲಿರುವ ಕರಗನಕುಂಟೆ ಕೆರೆಯು 23 ಲಕ್ಷ ಲೀಟರ್ ಹಾಗೂ ತಾವರೆಕೊಳವು 15 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ. ಪಾಚಿ ಹಾಗೂ ಮಲಿನಯುಕ್ತ ನೀರನ್ನು ಶುದ್ಧಗೊಳಿಸುವ ಸಲುವಾಗಿ ಗ್ರೀನ್ ಫಾರ್ಮ್ ಇನ್‌ವೋಟೇಸ್ ಅಸೋಸಿಯೇಷನ್ ಸಂಸ್ಥೆಯ ಸಹಕಾರದೊಂದಿಗೆ ತೋಟಗಾರಿಕೆ ಇಲಾಖೆಯು ಸುಮಾರು 200 ಲೀಟರ್ `ಎಫೆಕ್ಟೀವ್ ಮೈಕ್ರೋಬ್ಸ್~ ಔಷಧಿಯನ್ನು ಸಿಂಪಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಇಲಾಖೆಯ ಉಪ ನಿರ್ದೇಶಕ ಡಾ.ಎಂ.ಜಗದೀಶ್, `ಉದ್ಯಾನದಲ್ಲಿರುವ  ಸಸ್ಯ ಸಂಕುಲಕ್ಕೆ ನೀರನ್ನು ಉಣಿಸಲು ಕರಗನಕುಂಟೆ ಕೆರೆ ಹಾಗೂ ತಾವರೆಕೊಳದಂತಹ ಎರಡು ಪ್ರಮುಖ ನೀರಿನ ಸಂಗ್ರಹಗಳಿವೆ. ನೀರಿನ ಸಚ್ಛತೆಗೂ ಆದ್ಯತೆ ನೀಡಿರುವುದರಿಂದ ಈ ಔಷಧಿ ಸಿಂಪಡಣೆಯ ಕಾರ್ಯವನ್ನು ಕೈಗೊಳ್ಳಲಾಗಿದೆ~ ಎಂದು ತಿಳಿಸಿದರು.

ಸಂಸ್ಥೆಯ ಉದ್ಯೋಗಿ ಕಿರಣ್ ಕುಲಕರ್ಣಿ, `ನೀರಿನಲ್ಲಿ ಉತ್ಪತ್ತಿಯಾಗುವ ಪಾಚಿ, ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡುವುದಲ್ಲದೇ, ಶುದ್ಧ ನೀರು ದೊರೆಯುತ್ತದೆ. ಒಂದು ಲಕ್ಷ ಲೀಟರ್ ನೀರಿಗೆ ಸುಮಾರು 5 ರಿಂದ 10 ಲೀಟರ್ ಔಷಧಿಯನ್ನು ಸಿಂಪಡಿಸುವ ಅಗತ್ಯವಿದೆ. ಕರಗನಕುಂಟೆ ಕೆರೆಯಲ್ಲಿ ನೀರು ಕಡಿಮೆ ಪ್ರಮಾಣದಲ್ಲಿರುವುದರಿಂದ ಹೆಚ್ಚು ಔಷಧಿಯನ್ನು ಸಿಂಪಡಿಸಿಲ್ಲ~ ಎಂದು ತಿಳಿಸಿದರು.

`ನೀರು ನಿಧಾನಗತಿಯಲ್ಲಿ ಮಲಿನಗೊಳ್ಳುವುದರಿಂದ ಅದನ್ನು ಶುದ್ಧೀಕರಿಸುವ ಪ್ರಕ್ರಿಯೆಗೂ ಸಮಯ ಹಿಡಿಯುತ್ತದೆ. ಔಷಧಿ ಸಿಂಪಡಿಸಿ 15 ದಿನಗಳ ನಂತರವಷ್ಟೇ ನೀರು ಶುದ್ಧಿಗೊಳ್ಳುತ್ತದೆ. ಔಷಧಿಯು ಸಂಪೂರ್ಣವಾಗಿ ನೈಸರ್ಗಿಕವಾಗಿ ತಯಾರಾಗಿರುವುದರಿಂದ ಸಿಂಪಡಣೆಗೊಂಡ ನೀರನ್ನು ಸೇವಿಸುವುದರಿಂದ ಯಾವುದೇ ಹಾನಿಯಿಲ್ಲ~ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT