ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಬ್ಬಲಿಗ ಸಮಾಜ ಅಭಿವೃದ್ಧಿಗೆ ಶ್ರಮಿಸಿ'

Last Updated 26 ಡಿಸೆಂಬರ್ 2012, 6:37 IST
ಅಕ್ಷರ ಗಾತ್ರ

ಸುರಪುರ: ಕಬ್ಬಲಿಗ ಸಮಾಜ ತಾಲ್ಲೂಕಿನಲ್ಲಿ ಬಹು ಸಂಖ್ಯೆಯಲ್ಲಿದೆ. ಆದರೆ ಸೌಕರ್ಯಗಳನ್ನು ಪಡೆದುಕೊಳ್ಳುವುದರಲ್ಲಿ ಸಾಧ್ಯವಾಗಿಲ್ಲ. ಯುವಕರು ಶ್ರಮವಹಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕಬ್ಬಲಿಗ ಸಮಾಜದ ಸಮಾವೇಶಗಳನ್ನು ನಡೆಸುವುದರಿಂದ ಜಾಗ್ರತೆ ಮೂಡುತ್ತದೆ. ಸಮಾಜದ ಏಳ್ಗೆಗಾಗಿ ತಮ್ಮ ಸಹಕಾರ ಇರುತ್ತದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ್ ಅಭಯ ನೀಡಿದರು.

ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಸೋಮವಾರ ನಿಜಶರಣ ಅಂಬಿಗರ ಚೌಡಯ್ಯ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದರು.

ಕಬ್ಬಲಿಗ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಮಾತನಾಡಿ, ಅಂಬಿಗರ ಚೌಡಯ್ಯ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಣೆ ಮಾಡುತ್ತಿರುವುದು ಸಮಾಜ ಬಾಂಧವರಲ್ಲಿ ಸಂತಸ ತಂದಿದೆ. ಆದರೆ ತೀರಾ ಹಿಂದುಳಿದಿರುವ ನಮ್ಮ ಸಮಾಜವನ್ನು ಪರಿಶಿಷ್ಟ ಪಂಗಡ ಮೀಸಲಾತಿಗೆ ಸೇರಿಸುವಂತೆ ನಮ್ಮ ಹೋರಾಟ ನಡೆಯುತ್ತಿದೆ. ಎಲ್ಲರೂ ಇದಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ತಾಲ್ಲೂಕು ಅಧ್ಯಕ್ಷ ಯಂಕಣ್ಣ ಪರಾಸಿ, ಮುಖಂಡರಾದ ಸೂಲಪ್ಪ ಕಮತಗಿ, ವಿಠಲ ಯಾದವ, ಅಬ್ದುಲ ಗಫಾರ್ ನಗನೂರಿ, ಮಲ್ಲಯ್ಯ ಕಮತಗಿ, ದೊಡ್ಡದೇಸಾಯಿ ದೇವರಗೋನಾಲ, ಮಾನಪ್ಪ ಹೆಗ್ಗನದೊಡ್ಡಿ, ತಿಮ್ಮಣ್ಣ ಪುಜಾರಿ, ರಾಜಾ ಸುಭಾಶ್ಚಂದ್ರ ನಾಯಕ್, ಉಪೇಂದ್ರನಾಯಕ ಸುಬೇದಾರ, ವೆಂಕೋಬ ಗುಡ್ಡಕಾಯಿ, ಮಲ್ಲನಗೌಡ ಮಾಲಿಪಾಟೀಲ, ನಿಂಗಯ್ಯಗೌಡ ಮಾಲಿಪಾಟೀಲ ಇದ್ದರು.

ಸಮಾಜದ ಮುಖಂಡ ಹಣಮಂತ ತಳವಾರ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಅಲಬನೂರ ನಿರೂಪಿಸಿದರು. ಭೈರಣ್ಣ ತಿಂಥಣಿ ವಂದಿಸಿದರು. ಅಂಬಿಗರ ಚೌಡಯ್ಯ ಸಮೂದಾಯ ಭವನಕ್ಕೆ ಸ್ಥಳದಾನ ಮಾಡಿದ ಕಮಲಮ್ಮ ತಿಮ್ಮಣ್ಣ ದೊರೆ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ನಿಂಗಪ್ಪ ಬೇವಿನಗಿಡ, ಚಂದಪ್ಪ ಗುಡ್ಡಕಾಯಿ, ಬಾಬುರಾವ ಸುರಪುರಕರ್, ನಿಂಗಣ್ಣ ಬೋವಿ, ಗಂಗಣ್ಣ ಸಜ್ಜನ್, ಹೊನ್ನಪ್ಪ ಬೇವಿನಗಿಡ, ಮಲ್ಲಪ್ಪ ಗುಡ್ಡಕಾಯಿ, ಹಣಮಂತ ರಸ್ತಾಪುರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT