ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೋಕೆಯ ಪ್ರತಿಭೆ

Last Updated 24 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಕರೋಕೆ ಅಂದರೆ ಮೊದಲೇ ಧ್ವನಿಮುದ್ರಿಸಿದ ಸಂಗೀತಕ್ಕೆ ದನಿ ತುಂಬಿ ಹಾಡುವುದು. ಅದು ಈಗ ಜನಪ್ರಿಯ ಮಾಧ್ಯಮವೂ ಹೌದು. ಅದರಲ್ಲಿ ವಿಶ್ವ ಚಾಂಪಿಯನ್ ಸ್ಪರ್ಧೆಗಳೂ ನಡೆಯುತ್ತಿವೆ.

ಭಾರತದ ಮನರಂಜನಾ ವಾಹಿನಿ `ವಿಎಚ್1~ ಸಹಭಾಗಿತ್ವದಲ್ಲಿ ಮೆಕ್‌ಡೊವೆಲ್ಸ್ ನಂ.1 ಸೋಡಾ ನಡೆಸುತ್ತಿರುವ `ಕರೋಕೆ ವಿಶ್ವ ಚಾಂಪಿಯನ್~ನ ಗ್ರ್ಯಾಂಡ್ ಫಿನಾಲೆ ಮುಂಬೈನಲ್ಲಿ ನಡೆಯಿತು. ಇದರಲ್ಲಿ ಬೆಂಗಳೂರಿನ ಪ್ರತಿಭಾ ಪಾರ್ಥಸಾರಥಿ ಕೂಡ ಭಾಗವಹಿಸಿದ್ದರು.

ಫೈನಲ್ಸ್‌ನ ಮಹಿಳೆಯರ ವಿಭಾಗದಲ್ಲಿ ಹೈದರಾಬಾದ್‌ನ ಮೇಘಾ ಗಿರೀಶ್ ಮತ್ತು ಪುರುಷರ ವಿಭಾಗದಲ್ಲಿ ಕ್ಲಾರೆನ್ಸ್ ಡಿಸೋಜಾ ಗೆಲ್ಲುವ ಮೂಲಕ ಸೆಪ್ಟೆಂಬರ್ 8 ರಿಂದ 10ರವರೆಗೆ ಐರ್ಲೆಂಡ್‌ನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡರು.

ಈ ಕಾರ್ಯಕ್ರಮಕ್ಕೆ ಐರ್ಲೆಂಡ್ ಹಾಗೂ ಭಾರತದ ಪ್ರವಾಸೋದ್ಯಮ ಮಂಡಳಿಗಳು ಸಹಯೋಗ ನೀಡುತ್ತಿವೆ. ಅಲ್ಲಿ ವಿಜೇತರಾದವರು ಭಾರಿ ಮೊತ್ತದ ನಗದು ಹಾಗೂ ಪ್ರಾಯೋಜಿತ ಬಹುಮಾನಗಳನ್ನು ಪಡೆದುಕೊಳ್ಳಲಿದ್ದಾರೆ. 

 ಫೈನಲ್ ಸುತ್ತಿಗೂ ಮುನ್ನ ಬೆಂಗಳೂರಿನಲ್ಲಿ ನಡೆದ ದಕ್ಷಿಣ ವಲಯದ ಅಂತಿಮ ಹಣಾಹಣಿಯಲ್ಲಿಯೂ ಮೇಘಾ  ಮತ್ತು ಕ್ಲಾರೆನ್ಸ್ ಕ್ರಮವಾಗಿ ಮೊದಲ ಎರಡು ಸ್ಥಾನ ಹಾಗೂ ನಮ್ಮ ಬೆಂಗಳೂರಿನ ಪ್ರತಿಭಾ ಪಾರ್ಥಸಾರಥಿ ಮೂರನೇ ಸ್ಥಾನ ಗಳಿಸಿದ್ದರು.
ಮುಂಬೈ, ಪುಣೆ, ದೆಹಲಿ, ಹೈದರಾಬಾದ್, ಗೋವಾ, ಕೋಲ್ಕತ್ತ ಮತ್ತು ಲುಧಿಯಾನದಲ್ಲಿಯೂ ಪ್ರಾದೇಶಿಕ ಹಂತದ ಸ್ಪರ್ಧೆಗಳನ್ನು ನಡೆಸಲಾಗಿತ್ತು.

ವಿಎಚ್1ನ ಮುಖ್ಯಸ್ಥರಾದ ಫರ್ಜಾದ್ ಪಾಲಿಯಾ ಅವರು ಹೇಳುವಂತೆ, ಭಾರತೀಯ ವೀಕ್ಷಕರಿಗೆ ಕರೋಕೆ ಸ್ಪರ್ಧೆ ಉತ್ತಮ ಮನರಂಜನೆ ನೀಡುತ್ತದೆ. ಕರೋಕೆ ಪ್ರವರ್ತಕ ಸಾವಿಯೊ ಡಿಸೋಜಾ ಅವರ ಪ್ರಕಾರ, ಸಂಗೀತ ಪ್ರಿಯರಿಗೆ ಅದರಲ್ಲೂ ವಿಶೇಷವಾಗಿ ಪಾಶ್ಚಾತ್ಯ ಸಂಗೀತಪ್ರಿಯರಿಗೆ ಇದು ರಸದೌತಣ ಬಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT