ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಕಲಾಶ್ರೀ ಪ್ರದಾನ

Last Updated 13 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಶುಕ್ರವಾರ 2010-11ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ ಹಮ್ಮಿಕೊಂಡಿದೆ.
ಪುರಸ್ಕೃತರು: ಗೌರವ ಪ್ರಶಸ್ತಿ- ಡಾ. ಚೂಡಾಮಣಿ ನಂದಗೋಪಾಲ್ (ಭರತನಾಟ್ಯ), ಸೋಹನ್ ಕುಮಾರಿ (ಸುಗಮ ಸಂಗೀತ).

ವಾರ್ಷಿಕ ಪ್ರಶಸ್ತಿ: ಆರ್.ಕೆ. ಪದ್ಮನಾಭ  (ಹಾಡುಗಾರಿಕೆ), ಕೋಲಾರದ ಎನ್. ಬಾಲಾಜಿಸಿಂಗ್ (ಮೃದಂಗ), ಧರ್ಮಸ್ಥಳದ ಅಣ್ಣು ದೇವಾಡಿಗ (ನಾದಸ್ವರ), ಡಿ. ರಾಮು (ಕ್ಲಾರಿಯೋನೆಟ್).

ಹಿಂದುಸ್ತಾನಿ ಗಾಯನ: ದೊಡ್ಡ ಬಸವಾರ್ಯ ಮಲಕಾಪುರ (ಬಳ್ಳಾರಿ), ಮಾಧವರಾವ್ ಇನಾಂದಾರ್ (ಕೊಪ್ಪಳ), ನೀಲಾ ಎಂ. ಕೊಡ್ಲಿ (ಧಾರವಾಡ), ಡಾ. ಹನುಮಣ್ಣ ನಾಯಕ ದೊರೆ (ರಾಯಚೂರು ಜಿಲ್ಲೆ).

ನೃತ್ಯ: ರಾಜೇಂದ್ರ ಮತ್ತು ನಿರುಪಮ, ಬಿ.ಕೆ. ಶ್ಯಾಮಪ್ರಕಾಶ್ ಮತ್ತು ಮಂಜುಳಾ ಪರಮೇಶ್ (ಬೆಂಗಳೂರು).

ಸುಗಮ ಸಂಗೀತ: ಎಂ.ಎಸ್. ಕಾಮತ್ (ಮಂಗಳೂರು), ಜಯವಂತ್ ಎಸ್. ಕೊಪರ್ಡೆ (ಬಾಗಲಕೋಟೆ). ಗಮಕ: ಲಲಿತಾ ನಂಜುಂಡಯ್ಯ (ಮೈಸೂರು).

ಹೊರನಾಡು ಕನ್ನಡ ಕಲಾವಿದರು: ಕಲ್ಮಾಡಿ ಸದಾಶಿವ ಆಚಾರ್ಯ- ಕರ್ನಾಟಕ ಸಂಗೀತ (ಕಾಸರಗೋಡು)
ಕಾರ್ಯಕ್ರಮಕ್ಕೆ ಮುನ್ನ ಡಾ. ನಾಗರಾಜರಾವ್ ಹವಾಲ್ದಾರ್ ಅವರಿಂದ ಹಿಂದುಸ್ತಾನಿ ಸಂಗೀತ. ಸಚಿವ ಗೋವಿಂದ ಎಂ. ಕಾರಜೋಳ ಅವರಿಂದ ಪ್ರಶಸ್ತಿ ಪ್ರದಾನ, ಅತಿಥಿಗಳು: ಕಲಾವಿದೆ ಡಾ. ಬಿ. ಜಯಶ್ರೀ ಮತ್ತು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ, ಅಧ್ಯಕ್ಷತೆ: ಪಂಡಿತ್ ನರಸಿಂಹಲು ವಡವಾಟಿ.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT