ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಎರಡನೇ ಗೆಲುವು

Last Updated 15 ಫೆಬ್ರುವರಿ 2011, 16:50 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ 9ನೇ ಅಖಿಲ ಭಾರತ ಬಿ.ಎಸ್. ಎನ್.ಎಲ್. ಹಾಕಿ ಟೂರ್ನಿ ‘ಬಿ’ ಗುಂಪಿನ ಲೀಗ್‌ನಲ್ಲಿ ಎರಡನೇ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳ ವಾರ ನಡೆದ ಪಂದ್ಯದಲ್ಲಿ ಕರ್ನಾಟಕ 8-0 ಗೋಲುಗಳಿಂದ ಗುಜರಾತ್ ವಿರುದ್ಧ ಭರ್ಜರಿ ಗೆಲುವು ಪಡೆಯಿತು.

ಏಕಪಕ್ಷೀವಾಗಿದ್ದ ಪಂದ್ಯದಲ್ಲಿ ವಿಜಯಿ ತಂಡದ ಪಾರ್ಥಿಬನ್ (3), ಪ್ರಫುಲ್ ಕುಜೂರ್, ಮಹಮದ್ ನಜೀಮ್ ಬೆಪಾರಿ, ಎಚ್.ಸಿ. ಅಶೋಕ್, ಫೆಲಿಕ್ಸ್ ಅಲ್ವಿನ್, ವಿನೋದ್ ಚೆಂಗಪ್ಪ ಗೋಲು ತಂದಿತ್ತರು.

‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ ತಮಿಳುನಾಡು ತಂಡದವರು 2-0 ಗೋಲುಗಳಿಂದ ಪಶ್ಚಿಮಬಂಗಾಳ ವಿರುದ್ಧ ಅರ್ಹ ಜಯ ಸಾಧಿಸಿತು. ಎರಡು ಗೋಲುಗಳಿಸಿದ ಕೆ. ರಮೇಶ್ ಗೆಲುವಿನ ರೂವಾರಿ ಆದರು. ‘ಸಿ’ ಗುಂಪಿನ ಪಂದ್ಯದಲ್ಲಿ ಆಂಧ್ರಪ್ರದೇಶ ತಂಡ 4-1 ಗೋಲುಗಳಿಂದ ಉತ್ತರಪ್ರದೇಶದ ಮೆಲೆ ಜಯ ಪಡೆಯಿತು. ವಿಜಯಿ ತಂಡದ ಎಂ.ಎಂ. ಕ್ವಾದ್ರಿ (2), ಬಿ.ಎಸ್. ಮೋಸಸ್, ಆರ್. ಶ್ರೀನಿವಾಸ್ ಹಾಗೂ ಎದುರಾಳಿ ತಂಡದ ಫಯಾಜ್ ಅಲಿ ಚೆಂಡನ್ನು ಗುರಿಮುಟ್ಟಿಸಿದರು.

‘ಡಿ’ ಗುಂಪಿನಲ್ಲಿ ದೆಹಲಿ ಎನ್‌ಟಿ. ಆರ್. ತಂಡ 2-1 ಗೋಲುಗಳಿಂದ ಪಂಜಾಬ್ ತಂಡವನ್ನು ಮಣಿಸಿತು. ವಿಜಯಿ ತಂಡದ ಪ್ರೇಮ್‌ಜಿತ್ ಕುಜೂರ್, ಪಿ.ಎಸ್. ಬಿಸ್ತ್ ಹಾಗೂ ಎದುರಾಳಿ ತಂಡದ ಕುಲ್ವೀಂದರ್ ಮಂಗತ್ ಗೋಲುಗಳಿಸಿದರು. ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಮಧ್ಯಪ್ರದೇಶ ತಂಡ 3-1 ಗೋಲುಗಳಿಂದ ದೆಹಲಿ ಎಂ.ಟಿ. ಎನ್.ಎಲ್. ಮೇಲೆ ಗೆದ್ದಿತು.

ವಿಜಯಿ ತಂಡದ ಅಬ್ದುಲ್ ಹನೀಫ್, ಎಸ್. ಎಲ್. ಮಹೋಲೆ, ಇಫ್ತೇಕಾರ್ ಅಹಮದ್ ಹಾಗೂ ದೆಹಲಿ ತಂಡದ ಆರ್.ಎಸ್. ರಾವ ತ್ ಚೆಂಡನ್ನು ಯಶಪಡಿಸಿಕೊಂಡರು.

ಸ್ನೂಕರ್: ಚಾವ್ಲಾಗೆ ಜಯ
ಬೆಂಗಳೂರು: ಭಾರತದ ಕಮಲ್ ಚಾವ್ಲಾ ಅವರು ಥಾಯ್ಲೆಂಡ್‌ನ ಚಂತೀಬುರಿಯಲ್ಲಿ ನಡೆಯುತ್ತಿರುವ ಮೊದಲ ಏಷ್ಯನ್ 6 ರೆಡ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆದರು.

ಕಮಲ್ ಚಾವ್ಲಾ 45-00, 35-22, 40-8, 47-36, 47- 1ರಲ್ಲಿ ಆತಿಥೇಯ ಥಾಯ್ಲೆಂಡ್‌ನ ಅಮ್ಮರ್ ತಾಕಿ ಅವರನ್ನು ಮಣಿಸಿ ದರು. ಇನ್ನೊಂದು ಪಂದ್ಯದಲ್ಲಿ ಕಮಲ್ 34-00, 19-33, 36- 08, 20-31, 37-8, 59-1, 43-0ರಲ್ಲಿ ಬಾಂಗ್ಲಾದೇಶದ ರೇಜ್ ಪಲ್ಲೋವಾ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT