ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಂ ಜತೆ ಸಿಎಂ ಚರ್ಚೆ

Last Updated 1 ಜೂನ್ 2011, 20:10 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಬೆಂಗಳೂರು ಪ್ರವಾಸದಲ್ಲಿರುವ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು ರಾಜಭವನದಲ್ಲಿ ಭೇಟಿಮಾಡಿ ಚರ್ಚೆ ನಡೆಸಿದರು. ತಮ್ಮ ಸರ್ಕಾರದ ಮೂರು ವರ್ಷಗಳ ಸಾಧನೆ ಕುರಿತು ಈ ಸಂದರ್ಭದಲ್ಲಿ ಕಲಾಂ ಅವರಿಗೆ ಮಾಹಿತಿ ನೀಡಿದರು.

ಭೇಟಿಯ ಬಳಿಕ ಪ್ರತಿಕ್ರಿಯಿಸಿದ ಯಡಿಯೂರಪ್ಪ, ತಾವು ಮಂಡಿಸಿದ ಕೃಷಿ ಬಜೆಟ್ ಮತ್ತು ಕೃಷಿಕರ ಆದಾಯ ಹೆಚ್ಚಳಕ್ಕಾಗಿ ಪ್ರಕಟಿಸಿರುವ ಯೋಜನೆಗಳ ಬಗ್ಗೆ ಕಲಾಂ ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.

ಗೃಹ ಸಚಿವ ಆರ್.ಅಶೋಕ ಮತ್ತು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಜೊತೆಗಿದ್ದರು. ಯಡಿಯೂರಪ್ಪ ರಾಜ ಭವನಕ್ಕೆ ಹೋಗಿದ್ದರೂ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿ ಮಾಡಲಿಲ್ಲ. ಇದೇ ವೇಳೆ ಜೆಡಿಎಸ್ ವಿಧಾನಮಂಡಲ ಅಧಿ ವೇಶನ ಬಹಿಷ್ಕರಿಸಿರುವ ಬಗ್ಗೆ ಪ್ರಶ್ನಿಸಿ ದಾಗ, `ಆ ಪಕ್ಷದ ನಾಯಕರಿಗೆ ದೇವ ರು ಒಳ್ಳೆಯ ಬುದ್ಧಿ ನೀಡಲಿ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT