ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಸೌಧದಲ್ಲಿ ದೇವರ ಹೆಣ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಸೈಡ್‌ವಿಂಗ್ ತಂಡವು ಶನಿವಾರ ಕುಂ.ವೀರಭದ್ರಪ್ಪ ಅವರ ಕೃತಿ ಆಧಾರಿತ `ದೇವರ ಹೆಣ~ ನಾಟಕವನ್ನು ಪ್ರದರ್ಶಿಸಲಿದೆ. ಕುಂ.ವೀರಭದ್ರಪ್ಪನವರ ಮೂಲ ಕೃತಿಗೆ ಸ್ವಲ್ಪ ಕಲ್ಪನೆ ಬೆರೆಸಿ ಸಂದೀಪ್ ಎಸ್. ಜೋಷಿ ಅವರು ನಾಟಕ ನಿರ್ದೇಶಿಸಿದ್ದಾರೆ.

ಈ ನಾಟಕದಲ್ಲಿ ಸದಾ ಮಲಗಿರುವ ಯುವಕ ನಮ್ಮ ಈಗಿನ ಕೆಲ ಬೇಜವಾಬ್ದಾರಿ ಯುವಕರ ಸಂಕೇತ. ಯಾವುದಾದರೂ ಸನ್ನಿವೇಶ ಕಣ್ಣಮುಂದೆ ನಡೆದರೆ ಅದನ್ನು ಕುತೂಹಲದಿಂದ ವೀಕ್ಷಿಸಿ, ಅದನ್ನು ರಬ್ಬರ್ ಎಳೆಯುವಂತೆ ಪ್ರತಿಕ್ರಿಯೆ ನೀಡುತ್ತಾನೆ. ಸದಾ ಸುಳ್ಳು ಪ್ರತಿಜ್ಞೆ ಮಾಡುತ್ತಾ ಮಲಗಿರುವ ಊರಸ್ವಾಮಿಯನ್ನು ನಮ್ಮ ಕೆಲವು ಅಧ್ಯಾತ್ಮ ಗುರುಗಳ ಸಂಕೇತವಾಗಿಟ್ಟುಕೊಂಡಿದ್ದಾರೆ.

ಇವರಿಬ್ಬರ ಸಮ್ಮುಖದಲ್ಲಿ ನಡೆಯುವ ಸಾಮಾಜಿಕ ಪ್ರಸಂಗಗಳು, ವರ್ಗಗಳ ನಡುವಿನ ಸಂಘರ್ಷ ಹಾಗೂ ಎರಡೂ ಸಮುದಾಯಕ್ಕೆ ಸೇರಿದವರ ಎತ್ತುಗಳು ಸತ್ತಾಗ ವ್ಯಕ್ತವಾಗುವ ಪ್ರತಿಕ್ರಿಯೆಯನ್ನು ನಾಟಕ ರಂಗದ ಮೇಲೆ ತೆರೆದಿಡುತ್ತದೆ. ಹಾಸ್ಯದ ಲೇಪವೂ ನಾಟಕಕ್ಕೆ ಇರುವುದರಿಂದ ಮತ್ತಷ್ಟು ಕಥಾವಸ್ತು ರಂಜನೀಯವಾಗಲಿದೆ.

ಸ್ಥಳ: ಕೆ.ಎಚ್.ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ. ಸಂಜೆ 7.
ಮಾಹಿತಿಗೆ: 97399 33889 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT