ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಲುಷಿತ ನೀರು ಸೇವನೆ ಅಸ್ವಸ್ಥಕ್ಕೆ ಕಾರಣ'

ಮನೆಗೆ ತೆರಳಿದ 43 ರೋಗಿಗಳು
Last Updated 27 ಡಿಸೆಂಬರ್ 2012, 9:33 IST
ಅಕ್ಷರ ಗಾತ್ರ

ಗಜೇಂದ್ರಗಡ: ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ಅನಾರೋಗ್ಯಕ್ಕೆ ಒಳಗಾಗಿರುವ 64 ಜನರ ಆರೋಗ್ಯ ಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.
ಕಳೆದ ಸೋಮವಾರದಿಂದ ಮಂಗಳವಾರ ಸಂಜೆವರೆಗೆ ಒಟ್ಟು 64 ಜನ ಅಸ್ವಸ್ಥರು ಗಜೇಂದ್ರಗಡದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಎಲ್ಲ ರೋಗಿಗಳ ರಕ್ತ, ಮೂತ್ರ ತಪಾಸಣೆ ನಡೆಸಿದ ವೈದ್ಯರು ಅಸ್ವಸ್ಥರು ಯಾವುದೇ ಸಾಂಕ್ರಾಮಿಕ ಕಾಯಿಲೆಗಳಿಂದ ಬಳಲುತ್ತಿಲ್ಲ ಎಂದು ತಿಳಿಸಿದ್ದಾರೆ.

ಕಲುಷಿತ ನೀರು ಹಾಗೂ ಕಲುಷಿತ ಆಹಾರ ಸೇವನೆಯಿಂದಾಗಿಯೇ ಅಸ್ವಸ್ಥಗೊಳ್ಳಲು ಕಾರಣ. ಈಗಾಗಲೇ 43 ಜನ ಅಸ್ವಸ್ಥರು ಪೂರ್ಣ ಪ್ರಮಾಣದಲ್ಲಿ ಗುಣಮುಖ ರಾಗಿ ಗ್ರಾಮಕ್ಕೆ ತೆರಳಿದ್ದಾರೆ ಎಂದು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಎಸ್.ಎಸ್. ನೀಲಗುಂದ ತಿಳಿಸಿದರು.

`ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 21 ಜನರ ಆರೋಗ್ಯ ಸ್ಥಿತಿಯೂ ಸಹ ಸುಧಾರಿ ಸಿದ್ದು, ಬುಧವಾರ ಸಂಜೆ ಒಳಗಾಗಿ ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗಿ ಗ್ರಾಮಕ್ಕೆ ಹಿಂದಿರುಗಲಿದ್ದಾರೆ' ಎಂದು ತಾಲ್ಲೂಕು ವೈದ್ಯಾ ಧಿಕಾರಿ ಡಾ.ಬಿ.ಎಸ್.ಭಜಂತ್ರಿ `ಪ್ರಜಾವಾಣಿ'ಗೆ ತಿಳಿಸಿದರು.

ಮುಂದುವರೆದ ತಾತ್ಕಾಲಿಕ ಚಿಕಿತ್ಸಾಲಯ: ಕೊಡಗಾನೂರ ಗ್ರಾಮಸ್ಥರಲ್ಲಿ ತಲೆದೂರಿದ ಅನಾರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಕೊಡಗಾನೂರ ಗ್ರಾಮದಲ್ಲಿ ಮಂಗಳವಾರದಿಂದ ಆರಂಭಿಸಲಾದ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಶನಿವಾರದವರೆಗೂ ಮುಂದುವರೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಆರೋಗ್ಯ ಸ್ಥಿತಿ ಪೂರ್ಣ ಸುಧಾರಿಸಿದ ಬಳಿಕ ತಾತ್ಕಾಲಿಕ ಚಿಕಿತ್ಸಾ ಲಯವನ್ನು ತೆರವುಗೊಳಿಸಲಾಗುವುದು ಎಂದು ಡಾ. ರೇಖಾ ಹೊಸಮನಿ ತಿಳಿಸಿದರು.

ಹಿರಿಯ ಆರೋಗ್ಯ ಸಹಾಯಕ ಆರ್. ವಿ.ಕುಪ್ಪಸದ ಸೇರಿದಂತೆ ಒಟ್ಟು 15 ಜನ ಸಿಬ್ಬಂದಿ ಕೊಡಗಾನೂರ ಗ್ರಾಮದಲ್ಲಿ ತೆರೆಯಲಾದ ತಾತ್ಕಾಲಿಕ ಚಿಕಿತ್ಸಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮಸ್ಥರಲ್ಲಿ ಮನೆ ಮಾಡಿದ ಅನಾರೋಗ್ಯ ಸಮಸ್ಯೆಯ ಆತಂಕವನ್ನು ದೂರ ಮಾಡಲು ಶ್ರಮಿಸುತ್ತಿದ್ದಾರೆ. 

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಎಫ್.ಎಂ ಸಾಲಗೌಡರ, ಡಾ.ಮಹೇಶ ಚೋಳಿನ, ಡಾ.ಮಲ್ಲಿಕಾರ್ಜುನ ಪೂಲೀಸ್ ಪಾಟೀ ಲ, ಡಾ.ಅಮೃತ ಹರಿದಾಸ, ಹಿರಿಯ ಆರೋಗ್ಯ ಸಹಾಯಕ ವಿ.ಡಿ.ಬೆನ್ನೂರ ಅವರನ್ನೊಳಗೊಂಡ ತಂಡ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT