ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿ ತಳ್ಳು ಬಂಡಿಗೆ ಚಾಲನೆ

Last Updated 14 ಸೆಪ್ಟೆಂಬರ್ 2011, 5:30 IST
ಅಕ್ಷರ ಗಾತ್ರ

ಕಂಪ್ಲಿ: ಘನತ್ಯಾಜ್ಯ ವಸ್ತು ಸಂಗ್ರಹಣೆ ಮತ್ತು ನಿರ್ವಹಣೆ ಯೋಜನೆಯಡಿ ಪಟ್ಟಣದ ಪರಿಸರ ಸ್ವಚ್ಛತೆಗಾಗಿ ತಳ್ಳು ಬಂಡಿಗಳಿಗೆ ಸ್ಥಳೀಯ ಪುರಸಭೆ ಅಧ್ಯಕ್ಷೆ ಹೇಮಾವತಿ ಎಚ್.ಪಿ. ಚಂದ್ರು ಮಂಗಳವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಮಾತನಾಡಿ, ಪಟ್ಟಣದ 10 ಸ್ವ ಸಹಾಯ ಮಹಿಳಾ ಗುಂಪುಗಳಿಗೆ ಕಸ ವಿಲೇವಾರಿ ಜವಾಬ್ದಾರಿ ವಹಿಸಲಾಗಿದೆ. ತಳ್ಳು ಬಂಡಿಯಲ್ಲಿ ತ್ಯಾಜ್ಯ ಸಾಗಿಸಲು ತಿಂಗಳೊಂದಕ್ಕೆ ಹೊಟೆಲ್‌ನವರು ರೂ. 50, ಅಂಗಡಿ ರೂ. 40 ಮತ್ತು ಮನೆ ಯವರು ರೂ. 20 ಪಾವತಿಸಬೇಕು ಎಂದು ವಿನಂತಿಸಿದರು.

ಪುರಸಭೆ ಮುಖ್ಯಾಧಿಕಾರಿ ವಿ. ರಮೇಶ್ ಮಾತನಾಡಿ, ಪಟ್ಟಣವನ್ನು ಸ್ವಚ್ಛವಾಗಿಡಲು ಸಹಕರಿಸಿ. ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಲ್ಲಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ರಾಮಾಂಜಿನೇಯಲು, ಪುರಸಭೆ ಪ್ರಭಾರಿ ವ್ಯವಸ್ಥಾಪಕಿ ವಸಂತಮ್ಮ, ನೈರ್ಮಲ್ಯ ನಿರೀಕ್ಷಕ ಫಕ್ರುದ್ದೀನ್, ಲೆಕ್ಕಿಗ ರಮೇಶ್ ಬೆಳಂಕರ್, ಮಹಿಳಾ ಸ್ವಸಹಾಯ ಸಂಘಗಳ ಪದಾಧಿಕಾರಿ ಗಳು ಹಾಜರಿದ್ದರು.

ಕಸ ವಿಲೇವಾರಿ ಕುರಿತ ಸಮಗ್ರ ಮಾಹಿತಿಯುಳ್ಳ ಕರ ಪತ್ರವನ್ನು ಪಟ್ಟಣದಲ್ಲಿ ಸಾರ್ವಜನಿಕರಿಗೆ ವಿತರಿಸಿ ಜಾಗೃತಿ ಮೂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT