ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಪ್ರಾಣಿಗಳ ಗಣತಿ: ಸಿಬ್ಬಂದಿಗೆ ತರಬೇತಿ

Last Updated 5 ಡಿಸೆಂಬರ್ 2013, 8:39 IST
ಅಕ್ಷರ ಗಾತ್ರ

ರಾಮನಗರ: ಕಾಡು ಪ್ರಾಣಿಗಳ ಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಬುಧವಾರ ನಗರದ ಹೊರವ ಲಯದಲ್ಲಿರುವ ರಾಮದೇವರ ಬೆಟ್ಟದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ತರಬೇತಿ ಹಮ್ಮಿ ಕೊಳ್ಳಲಾಗಿತ್ತು.

ಇದೆ ತಿಂಗಳ 16 ರಿಂದ ಆರಂಭ ವಾಗುವ ಕಾಡು ಪ್ರಾಣಿಗಳ ಗಣತಿ ಕಾರ್ಯಕ್ಕೆ ಹೇಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಯಾವ ರೀತಿ ಸಿದ್ಧತೆ ನಡೆಸಬೇಕು, ಗಣತಿ ವೇಳೆ ಪತ್ತೆಯಾದ ಮಾಹಿತಿಯನ್ನು ದಾಖಲಿ ಸುವ ವಿಧಾನ ಇತ್ಯಾದಿಗಳ ಬಗ್ಗೆ ಗಣತಿ ಸಿಬ್ಬಂದಿಗೆ ತಿಳಿಸಿಕೊಡಲಾಯಿತು.

ದಕ್ಷಿಣ ಭಾರತದ ನಾಲ್ಕೂ ರಾಜ್ಯ ಗಳು ಏಕಕಾಲಕ್ಕೆ ಅಂದರೆ ಡಿಸೆಂಬರ್ 16 ರಿಂದ 23ರವರೆಗೆ ತಮ್ಮ ತಮ್ಮ ವ್ಯಾಪ್ತಿಯ ಅರಣ್ಯಗಳಲ್ಲಿ ಹುಲಿ ಸೇರಿದಂತೆ ವಿವಿಧ ಕಾಡು ಪ್ರಾಣಿಗಳು ವಿಶೇಷ ಪಕ್ಷಿಗಳ ಗಣತಿ ಕಾರ್ಯ ನಡೆ ಯಲಿವೆ ಎಂದು ಜಿಲ್ಲಾ ಅರಣ್ಯ ಸಂರಕ್ಷ ಣಾಧಿಕಾರಿ ತಾಕತ್ ಸಿಂಗ್ ರಾಣಾವತ್ ತಿಳಿಸಿದರು.

ರಾಮನಗರ ಜಿಲ್ಲೆಯಲ್ಲಿ ಹುಲಿಗಳು ವಾಸ ಮಾಡುತ್ತಿಲ್ಲ. ಆದರೆ ಚಿರತೆ, ಆನೆ, ಕರಡಿ, ಜಿಂಕೆ ಮುಂತಾದ ಕಾಡು ಪ್ರಾಣಿಗಳು ವಾಸ ಮಾಡುತ್ತಿವೆ. ಗಣತಿ ಕಾರ್ಯಕ್ಕೆ  ಇದೇ ಮೊದಲ ಬಾರಿಗೆ ಜಿ.ಪಿ.ಎಸ್ ತಂತ್ರಜ್ಞಾನ ಬಳಸಲಾ ಗುತ್ತದೆ. ಮಾಹಿತಿ ಸಂಗ್ರಹಿಸುವ ವೇಳೆ ಆಯಕಟ್ಟಿನ ಸ್ಥಳಗಳನ್ನು ಜಿಪಿಎಸ್ ಮೂಲಕ ಗುರುತಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರಾಣಿಗಳು ತಿಂದು ಬಿಟ್ಟ ಆಹಾರದ ಕುರುಹುಗಳು, ಪ್ರಾಣಿಗಳ ಲದ್ದಿ, ಹೆಜ್ಜೆ ಗುರುತುಗಳನ್ನು ಆಧರಿಸಿ ಆಯಾ ಪ್ರಾಣಿಗಳ ವಾಸ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಕಾಡು ಪ್ರಾಣಿಗಳು ತುಂಬಾ ಸುರಕ್ಷಿತ ಪ್ರದೇಶದಲ್ಲಿರುವಾಗ ಮಾತ್ರ ಮರಿ ಹಾಕುತ್ತವೆ. ಜಿಲ್ಲೆಯ ಕಾಡುಗಳಲ್ಲಿ ಕೆಲವು ಪ್ರಾಣಿ ಗಳು ಮರಿಹಾಕಿವೆ ಎಂದಾದರೆ ಈ ಕಾಡುಗಳು ಸುರ ಕ್ಷಿತ ವಲಯದಲ್ಲಿವೆ ಎಂದು ಅರ್ಥೈಸಿ ಕೊಳ್ಳಬಹುದು ಎಂದರು.

ರಾಮದೇವರ ಬೆಟ್ಟ ಅರಣ್ಯ ಪ್ರದೇಶ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ರಣಹದ್ದುಗಳು ವಾಸ ಮಾಡುತ್ತಿವೆ. ಗಣತಿ ಕಾರ್ಯದ ವೇಳೆ ರಣಹದ್ದುಗಳ ಸಂಖ್ಯೆಯನ್ನು ಗುರುತಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯಾದ್ಯಂತ ಆಗಮಿಸಿದ್ದ ಫಾರೆಸ್ಟ್ ಗಾರ್ಡ್‌ಗಳು, ಅರಣ್ಯ ವೀಕ್ಷಕರು ಮತ್ತು ಇತರ ಸಿಬ್ಬಂದಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಎಸಿಎಫ್ ಲಿಂಗಯ್ಯ, ಆರ್ ಎಫ್ ಓಗಳಾದ ಜಗನ್ನಾಥ್, ಲಿಂಗರಾಜ್ ಇತರರು ತರಬೇತಿಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT