ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಗಿಲ್ ಸ್ಮಾರಕದಲ್ಲಿ ಅರಳಿತು ಬೃಹತ್ ತ್ರಿವರ್ಣ ಧ್ವಜ

Last Updated 25 ಜುಲೈ 2012, 9:50 IST
ಅಕ್ಷರ ಗಾತ್ರ

ಡ್ರಾಸ್ (ಜಮ್ಮು ಮತ್ತು ಕಾಶ್ಮೀರ) (ಪಿಟಿಐ): ಕಾರ್ಗಿಲ್ ವಿಜಯದ 13ನೇ ವಾರ್ಷಿಕೋತ್ಸವ ಅಂಗವಾಗಿ ಇಲ್ಲಿನ ಡ್ರಾಸ್ ಉಪವಲಯದ ಕಾರ್ಗಿಲ್ ಸ್ಮಾರಕದಲ್ಲಿ ಬುಧವಾರ 15 ಕಿ.ಗ್ರಾಂ. ತೂಕದ ಭಾರೀ ತ್ರಿವರ್ಣ ಧ್ವಜವನ್ನು ಅರಳಿಸಲಾಯಿತು.

ಮೂವತ್ತ ಏಳೂವರೆ ಅಡಿ ಉದ್ದ, 25 ಅಗಲದ ಈ ತ್ರಿವರ್ಣ ಧ್ವಜದ ತೂಕ 15 ಕಿ.ಗ್ರಾಂ.ಗಳು ಎಂದು ಭಾರತದ ರಾಷ್ಟ್ರೀಯ ಧ್ವಜ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕಮಾಂಡರ್ (ನಿವೃತ್ತ) ಕೆ.ವಿ. ಸಿಂಗ್  ಪಿಟಿಐಗೆ ತಿಳಿಸಿದರು.

ಶ್ರೀನಗರದಿಂದ 150 ಕಿ.ಮೀ. ದೂರದಲ್ಲಿರುವ ಇಲ್ಲಿನ ಡ್ರಾಸ್ ನ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಈ ಧ್ವಜವನ್ನು ಅರಳಿಸಲಾಯಿತು. ಇದು ನವದೆಹಲಿಯಲ್ಲಿನ ಸಂಸತ್ ಭವನ ಹಾಗೂ ಕೆಂಪುಕೋಟೆಯ ಮೇಲೆ ಅರಳಿಸಲಾಗುವ ರಾಷ್ಟ್ರಧ್ವಜಗಳ ಎರಡು ಪಟ್ಟಿಗಿಂತಲೂ ಹೆಚ್ಚು ವಿಸ್ತಾರದ್ದು ಎಂದು ಸಿಂಗ್ ನುಡಿದರು.

ಈ ಬೃಹತ್ ಧ್ವಜವನ್ನು ಹಾರಿಸಲು 3 ಟನ್ ತೂಕ, 101 ಅಡಿ ಎತ್ತರದ ಧ್ವಜಸ್ಥಂಭವನ್ನು ವಿಶೇಷವಾಗಿ ನಿರ್ಮಿಸಲಾಗಿದೆ. ಧ್ವಜದ ತೂಕ ತಡೆಯುವ ಸಲುವಾಗಿ ಈ ಧ್ವಜಸ್ಥಂಭವನ್ನು ಭೂಮಿಯೊಳಗೆ 15 ಅಡಿಗಳಷ್ಟು ಆಳಕ್ಕೆ ಇಳಿಸಿ ಭದ್ರಗೊಳಿಸಲಾಗಿದೆ.

ನೌಕಾದಳದ ನಿವೃತ್ತ ಕಮಾಂಡರ್ ಆಗಿರುವ ಸಿಂಗ್ ಅವರು ಪ್ರತಿಷ್ಠಾನದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದು ಇಲ್ಲಿನ ಸೇನಾ ಘಟಕಕ್ಕೆ ಈ ಧ್ವಜವನ್ನು ನೀಡಿದ್ದಾರೆ. ಸ್ಮರಣೀಯ ಸ್ಥಳದಲ್ಲಿ ಅರಳಿಸುವ ಮೂಲಕ ರಾಷ್ಠ್ರಧ್ವಜದ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸುವುದು ತಮ್ಮ ಉದ್ಧೇಶ ಎಂದು ಅವರು ನುಡಿದರು.

1999ರ ಕಾರ್ಗಿಲ್ ಸಮರದ ವಿಜಯದ 13ನೇ ವಾರ್ಷಿಕೋತ್ಸವ ಆಚರಣೆ ಅಂಗವಾಗಿ ಸೇನೆಯು ಇಲ್ಲಿ ಎರಡು ದಿನಗಳ ಸಮಾರಂಭ ಹಮ್ಮಿಕೊಂಡಿದ್ದು ಬುಧವಾರ ಉದ್ಘಾಟನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT