ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಟೂನ್ ನೆಟ್‌ವರ್ಕ್‌ನ ಹೊಸ ರಂಜನೆ

Last Updated 22 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಮಕ್ಕಳ ಅಚ್ಚುಮೆಚ್ಚಿನ ಕಾರ್ಟೂನ್ ಚಾನೆಲ್ `ಕಾರ್ಟೂನ್ ನೆಟ್‌ವರ್ಕ್' ಮಕ್ಕಳನ್ನು ಮತ್ತಷ್ಟು ರಂಜಿಸಲು ಈಗ ಹೊಸ ಕಾರ್ಯಕ್ರಮದೊಂದಿಗೆ ಸಜ್ಜಾಗಿದೆ. ಮೈನವಿರೇಳಿಸುವ ಸಾಹಸ, ಮಿತಿಯಿಲ್ಲದ ಹಾಸ್ಯ, ಅದ್ಬುತ ಫ್ಯಾಂಟಸಿ ಈ ಕಾರ್ಯಕ್ರಮದ ವಿಶೇಷತೆ.

`ಡ್ರೀಂ ವರ್ಕ್ಸ್ ಡ್ರಾಗನ್ಸ್: ರೈಡರ್ಸ್‌ ಆಫ್ ಬರ್ಕ್' ಕಾರ್ಯಕ್ರಮವು ಜಾಗತಿಕವಾಗಿ ಜನಪ್ರಿಯತೆ ಗಳಿಸಿದ `ಹೌ ಟು ಟ್ರೈನ್ ಯುವರ್ ಡ್ರ್ಯಾಗನ್' ಕಾರ್ಯಕ್ರಮದಿಂದ ಸ್ಫೂರ್ತಿ ಪಡೆದಿದ್ದು. `ಡ್ರೀಂ ವರ್ಕ್ಸ್ ಡ್ರಾಗನ್ಸ್: ರೈಡರ್ಸ್ ಆಫ್ ಬರ್ಕ್' ಸರಣಿಯಲ್ಲಿ ಮೂಡಿಬರುವ ಅನಿಮೇಟೆಡ್ ಪಾತ್ರಧಾರಿಗಳು ಆಕಾಶದಲ್ಲಿ ಮೈನವಿರೇಳಿಸುವ ಸಾಹಸ ಮಾಡಲಿದ್ದಾರಂತೆ. ಅಂದಹಾಗೆ, ಈ ಕಾರ್ಯಕ್ರಮವನ್ನು ಡ್ರೀಂ ವರ್ಕ್ಸ್ ಅನಿಮೇಷನ್ ಎಸ್‌ಕೆಜಿ ನಿರ್ಮಿಸಿದೆ. ವಾರಕ್ಕೊಮ್ಮೆ ಪ್ರಸಾರಗೊಳ್ಳುವ ಈ ಕಾರ್ಯಕ್ರಮ ಇದೇ 24ರಂದು ಭಾನುವಾರ ಸಂಜೆ 4ಕ್ಕೆ ಪ್ರಸಾರಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT