ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪ್ ಬ್ಯಾಂಕ್: ಬಡ್ಡಿ ದರ ಹೆಚ್ಚಳ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಮಂಗಳೂರು: ರೂಪಾಯಿ ಅಪಮೌಲ್ಯ ಹಿನ್ನೆಲೆಯಲ್ಲಿ ವಿದೇಶಿ ಕರೆನ್ಸಿ ಆಕರ್ಷಿಸುವ ಸಲುವಾಗಿ ಕಾರ್ಪೊರೇಷನ್ ಬ್ಯಾಂಕ್ ಅನಿವಾಸಿ ಭಾರತೀಯರ ಬಾಹ್ಯ (ಎನ್‌ಆರ್‌ಇ) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ  9.50ಕ್ಕೆ ಹೆಚ್ಚಿಸಿದೆ.

ಈ ಮೊದಲು 1ರಿಂದ 2 ವರ್ಷದೊಳಗಿನ ಎನ್‌ಆರ್‌ಇ ಅವಧಿ ಠೇವಣಿಗೆ ಶೇ 3.82ರಷ್ಟು ಬಡ್ಡಿದರ ಇತ್ತು. ಅದು ಈಗ ಶೇ 9.50ರಷ್ಟಾಗಿದೆ. 2ರಿಂದ 5 ವರ್ಷದೊಳಗಿನ ಠೇವಣಿಗೆ ಇದ್ದ ಶೇ 3.51ರ ಬಡ್ಡಿದರ ಶೇ 9.25ಕ್ಕೆ ಹೆಚ್ಚಳವಾಗಿದೆ. ಈ ಮೊದಲಿದ್ದ 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿ ಪೂರ್ಣಗೊಳ್ಳುವ ಠೇವಣಿ ಕ್ರಮವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT