ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿದಾದರೂ ಹಿರಿಮೆಯ ಚುಟುಕು

Last Updated 17 ಜನವರಿ 2011, 9:15 IST
ಅಕ್ಷರ ಗಾತ್ರ

ಕೋಲಾರ: ಚುಟುಕು ಸಾಹಿತ್ಯ ಗಾತ್ರದಲ್ಲಿ ಕಿರಿದಾದರೂ ಅರ್ಥ ವ್ಯಾಪ್ತಿಯಲ್ಲಿ ಹಿರಿದಾದದ್ದು ಎಂದು ಡಾ.ವರದಾ ಶ್ರೀನಿವಾಸ್ ಅಭಿಪ್ರಾಯಪಟ್ಟರು.ನಗರದ ಹೊರವಲಯದ ಕಾರಿಯಪ್ಪ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 4ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾತನಾಡಿದರು.

1992ರಲ್ಲಿ ಪ್ರಕಟವಾದ ‘ಮುಂಜಾವದ ಕನಸುಗಳು’ ಎಂಬ ನನ್ನ ಮೊದಲ ಕವನ ಸಂಕಲನದಲ್ಲಿ 16 ಹನಿಗವನಗಳನ್ನು ಬರೆದಿದ್ದೆ. ಅದನ್ನು ಗಮನಿಸಿ ನನಗೆ ಸಮ್ಮೇಳನದ ಅಧ್ಯಕ್ಷ ಸ್ಥಾನ ನೀಡಿರುವುದು ಖುಷಿ ತಂದಿದೆ ಎಂದರು. ಸ್ವಾಮಿ ಶ್ರೀಧರಾನಂದ ಚಿತ್ರಬಿಡಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು. ಅದಕ್ಕೂ ಮುನ್ನ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ನಡೆಯಿತು. ಡಾ.ಕೆ.ಎಂ.ಜೆ.ಮೌನಿ ಬಾವುಟ ಹಾರಿಸಿದರು. ಅರವಿಂದ ಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪಿ.ನಾರಾಯಣಪ್ಪ ನಿರೂಪಿಸಿದರು. ಎಂ,.ವಿ.ತ್ಯಾಗರಾಜ್, ಡಾ.ಎಂ.ಚಂದ್ರಶೇಖರ್ ವೇದಿಕೆಯಲ್ಲಿದ್ದರು.

ಕೃತಿ ಬಿಡುಗಡೆ: ಇದೇ ಸಂದರ್ಭದಲ್ಲಿ ಸ್ವಾಮಿಶ್ರೀಧರಾನಂದರ ರಾವಣ ಸಂಹಿತೆ, ಜ್ಯೋತಿಷ್ಯ ರಹಸ್ಯ, ದಾಂಪತ್ಯ ರಸ-ವಿರಸ, ಬಿ.ಕೆ.ನರ್ಮದಾ ಅವರ ‘ರಾಣಿ ದುರ್ಗಾವರಿ ಸುಂದರ ಸ್ವಪ್ನಗಳು’ ಕಾದಂಬರಿ, ಅನುರಾಧ ಕಟ್ಟಿ ಮತ್ತು ಕಿಷನ್ ಜಾಗಿರ್‌ದಾರರ ಅಮರ ಗಾಯಕಿ-ನಾಯಕಿ ಅಮೀರಬಾಯಿ ಕರ್ನಾಟಕಿ’ ಕೃತಿ, ಕೃಷ್ಣ ನಾಗರಹಳ್ಳಿಯವರ ‘ಮನೋಮಂಥನದ ಮಾತು’, ಜಿ.ಎಸ್.ದಿವಾನರ ಭಾವಾಮೃತ ಸಿ.ಡಿ.ಯನ್ನು ಬಿಡುಗಡೆ ಮಾಡಲಾಯಿತು. ನಂತರ ಚುಟುಕು ಕವಿಗೋಷ್ಠಿ ನಡೆಯಿತು.

ಸನ್ಮಾನ: ನಿ.ರಾ.ರಂಗನಾಥ್, ಡಿ.ಎನ್.ಲಕ್ಷ್ಮಿಪತಿ, ವೆಂಕೋಬರಾವ್, ಸೀಕಲು ನರಸಿಂಹಪ್ಪ, ಗುಲ್ಜಾರ್ ಮತ್ತು ಎನ್.ಸೋಮಶಂಕರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎ.ಸರಳಾವತಿ, ತನುಜಾ, ಅರ್ಚನಾ, ಮಮತಾ, ಡಾ.ವಿ.ಎನ್.ಪ್ರಕಾಶ್, ಡಾ.ಎಂ.ಗೋವಿಂದರಾಜ್, ತ.ದೇವಮೂರ್ತಿ, ವಿ.ಎಸ್. ಎಸ್.ಶಾಸ್ತ್ರಿ ಗುಲ್ಜಾರ್ ಅವರು ರಚಿಸಿರುವ ಕಲಾಕೃತಿಗಳನ್ನು ಪ್ರದರ್ಶನಕ್ಕೂ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT