ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿತ ಒಲ್ಲದ ರಾಶಿ

Last Updated 23 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಅಕ್ಕಿನೇನಿ ಅಕುಲ್‌ ನಟನೆಯ ಚಿತ್ರದಲ್ಲಿ ರಾಶಿ ಖನ್ನಾ ಐಟಂ ಸಾಂಗ್‌ ಒಂದಕ್ಕೆ ಕುಣಿಯಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಈ ವಿಷಯ ರಾಶಿ ಕಿವಿಗೂ ಬಿದ್ದಿದೆ. ಅದಕ್ಕೆ ರಾಶಿ, ‘ನಾನು ಯಾವ ಚಿತ್ರದ ಐಟಂ ಸಾಂಗ್‌ಗೂ ಡಾನ್ಸ್‌ ಮಾಡುತ್ತಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ನಾನು ಯಾವ ಐಟಂ ಸಾಂಗ್‌ ಅನ್ನೂ ಮಾಡುತ್ತಿಲ್ಲ. ನಾನೀಗ ತೆರೆಕಾಣಲು ಸಿದ್ಧವಿರುವ ‘ಜಿಲ್‌’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದೇನೆ. ನಾನು ಒಪ್ಪಿಕೊಂಡಿರುವ ‘ಬೆಂಗಾಲ್‌ ಟೈಗರ್‌’ ಚಿತ್ರದ ಚಿತ್ರೀಕರಣ ಸದ್ಯದಲ್ಲೇ  ಪ್ರಾರಂಭವಾಗಲಿದೆ. ಈಗ ಅದಕ್ಕೆ ಸಿದ್ಧಳಾಗುತ್ತಿದ್ದೇನೆ’ ಎಂದಿದ್ದಾರೆ ರಾಶಿ.

ರಾಧಾ ಕೃಷ್ಣ ಅವರು ನಿರ್ದೇಶಿಸುತ್ತಿರುವ ‘ಜಿಲ್‌’ ಚಿತ್ರದಲ್ಲಿ ನಟ ಗೋಪಿಚಂದ್‌ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಗೋಪಿಚಂದ್‌ ಅವರಿಗೆ ವಿಶೇಷ ಮೇಕ್‌ಓವರ್‌ ಮಾಡಲಾಗಿದ್ದು, ಹೊಸ ಲುಕ್‌ ನೀಡಲಾಗಿದೆ.

ಚಿತ್ರದ ಚಿತ್ರೀಕರಣವನ್ನು ಹೈದರಾಬಾದ್‌, ಮುಂಬೈನಲ್ಲಿ ಹಾಗೂ ಸ್ಪೇನ್‌ನಲ್ಲಿ ಚಿತ್ರೀಕರಿಸಲಾಗಿದೆ. ಜತೆಗೆ ಮುಂಬೈ ಹುಡುಗ ‘ಕಬೀರ್‌’ನನ್ನು ಖಳನಾಯಕನಾಗಿ ಪರಿಚಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT