ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲದ ಸಂಕೋಲೆ ಕಳಚಿ: ಟ್ಯಾಗೋರ್‌

Last Updated 13 ಡಿಸೆಂಬರ್ 2013, 5:36 IST
ಅಕ್ಷರ ಗಾತ್ರ

ವಿಜಾಪುರ: ‘ಕುಲ ಕುಲ ಎನ್ನದಿರಿ.. ಎಂದು ಕನಕದಾಸರು ಹೇಳಿದ್ದರೆ ನಾವು ಕುಲದ ನೆಲೆಯಲ್ಲಿಯೇ ಎಲ್ಲವನ್ನೂ ಪಡೆಯಲು ಯತ್ನಿಸುತ್ತಿದ್ದೇವೆ. ಇದು ಸಂಕುಚಿತ ಮನೋಭಾವ. ಮಾನವೀ ಯತೆ ಕಂಡುಕೊಳ್ಳಲು ಮೊದಲು ನಾವು ಜಾತಿಯ ಸಂಕೋಲೆಯಿಂದ ಹೊರಗೆ ಬರಬೇಕು’ ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಕೆ.ವಿ.ಆರ್‌. ಟ್ಯಾಗೋರ್‌ ಹೇಳಿದರು.

ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಹಾಗೂ ಫೆಡಿನಾ ಸಂಸ್ಥೆಯಿಂದ ಗುರುವಾರ ಇಲ್ಲಿ ಹಮ್ಮಿಕೊಂಡಿದ್ದ ಸಂತ ಕನಕದಾಸರ ಚಿಂತನೆಗಳು ಕುರಿತ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ‘ನದಿಯಲ್ಲಿ ಪ್ರವಾಹದ ವಿರುದ್ಧ ಈಜಬಹುದು. ಆದರೆ, ವ್ಯಕ್ತಿಗಳ ಪ್ರಭಾವದ ವಿರುದ್ಧ ಈಜುವುದು ಕಷ್ಟ ಎಂಬಂತಾಗಿದೆ.  ನಾನು–ನನ್ನ ಕುಟುಂಬ –ನನ್ನ ಧರ್ಮ ಎಂಬುದು ಸಂಕುಚಿತ ಮನೋಭಾವ. ದುಡ್ಡುಕೊಟ್ಟು ಖರೀದಿ ಸಲು ಸಾಧ್ಯವಿಲ್ಲದ ವಿದ್ಯೆ, ಆರೋಗ್ಯ, ಮಾನವೀಯತೆಯನ್ನು ಸಂಪಾದಿಸಿ ಕೊಂಡು ಮೊದಲು ನಾವು ಮಾನವ ರಾಗಬೇಕು’ ಎಂದರು.

‘ನಮ್ಮ ಹುಟ್ಟು ಆಕಸ್ಮಿಕವಾಗಿದ್ದರೂ, ಬೆಳೆಯುತ್ತಿದ್ದಂತೆ ಜಾತಿ–ಸ್ವಾರ್ಥದ ಬಲೆಯಲ್ಲಿ ಬಂಧಿಗಳಾಗುತ್ತೇವೆ. ನಾವು ಬದುಕಲು ಇನ್ನೊಬ್ಬರ ಹಕ್ಕು ಕಿತ್ತು ಕೊಳ್ಳುವುದು, ನಮ್ಮ ಪ್ರಗತಿಗೆ ದಮನ ಕಾರಿ ನೀತಿ ಅನುಸರಿಸುವುದು ಸಲ್ಲ. ಮಾನವ ಹಕ್ಕುಗಳ ಪ್ರತಿಪಾದಕ ರಾಗಿದ್ದ ಕನಕದಾಸರ ಬದುಕು ನಮಗೆಲ್ಲ ದಾರಿ ದೀಪವಾಗಬೇಕು’ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಬೆಂಗಳೂರು ನಿಡುಮಾಮಿಡಿ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ‘ದೀಕ್ಷೆಯಿಂದಲೇ ಮುಕ್ತಿ ಮತ್ತು ಮೋಕ್ಷ ಸಿಗುವುದಾದರೆ ಜಗತ್ತಿನಲ್ಲಿ ಎಲ್ಲರೂ ಮುಕ್ತ ರಾಗುತ್ತಿದ್ದರು’ ಎಂದರು. ‘ವ್ಯಾಸರು ಯಾವಾಗಲೂ ಕನಕರ ಜೊತೆಗೆ ಇದ್ದವರು. ಆದರೆ, ಕನಕರಿಗೆ ಎಂದೂ ಮಹತ್ವ ನೀಡಲಿಲ್ಲ.

ಪೇಜಾವರ ಶ್ರೀಗಳು ಸಾಕಷ್ಟು ಪ್ರಗತಿಪರ ಚಿಂತನೆ ಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿ ದ್ದಾರೆ. ಆದರೆ, ಆ ಕೆಲಸ ಮಾಡುವಾಗ ಅನೇಕ ಸಂಪ್ರದಾಯವಾದಿಗಳು ತೊಂದರೆ ನೀಡುತ್ತಿದ್ದಾರೆ. ಶ್ರೇಷ್ಠ ಭಕ್ತಿಯ ಮಾರ್ಗದಿಂದ ಶ್ರೀಕೃಷ್ಣ ಮಠ ದಲ್ಲಿ ಐತಿಹಾಸಿಕ ಕನಕನ ಕಿಂಡಿ ನಾಶ ಪಡಿಸಿದ್ದು ತುಂಬಾ ನೋವಿನ ಸಂಗತಿ. ಪವಾಡ ಮತ್ತು ಮೂಢ ನಂಬಿಕೆಗಳು ಸಮುದಾಯದ ಹಿನ್ನಡೆಗೆ ಕಾರಣ ವಾಗಿವೆ. ಮಡಿಸ್ನಾನ ಸಮುದಾಯದ ಅತ್ಯಂತ ಹೀನ ಕ್ರಿಯೆ. ಇವುಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ’ ಎಂದು ಹೇಳಿದರು.

ಕನಕದಾಸರು ಈ ನಾಡಿನ ಆಧ್ಯಾತ್ಮಿಕ ಚಿಂತನೆಯಲ್ಲಿ ಪ್ರಥಮರು. ಅವರ ಜೀವನ ಚರಿತ್ರೆಯ ಅಧ್ಯಯನದಿಂದ ನಮಗೆಲ್ಲರಿಗೂ ನೈಜತೆಯ ಕಲ್ಪನೆ ಮೂಡುತ್ತದೆ ಎಂದರು. ಶಿಕ್ಷಕ, ಸಾಹಿತಿ ತಾಳಿಕೋಟೆಯ ಅಶೋಕ ಹಂಚಲಿ, ಕನಕದಾಸರು ಕೀರ್ತನೆಗಳ ಮೂಲಕ ಶಾಂತಿಯ ಸಂದೇಶ ಸಾರಿದರು ಎಂದರು.

ದಾವಣಗೆರೆಯ ಮೌಲಾನಾ ಇಬ್ರಾಹಿಂ ಸಕಾಫಿ, ‘ವಿಶ್ವದಲ್ಲಿ ಭಾರತ ಅತ್ಯಂತ ಭಾವೈಕತೆಯ ದೇಶ. ದಾಸರು, ಶರಣರು, ಸೂಫಿಗಳು ಈ ದೇಶವನ್ನು ಕಟ್ಟಿದ್ದಾರೆ; ಮನಸ್ಸುಗಳನ್ನು ಒಂದು ಮಾಡಿದ್ದಾರೆ’ ಎಂದು ಹೇಳಿದರು. ಕನಕ ಪ್ರಶಸ್ತಿ ಪುರಸ್ಕೃತ ಡಾ.ಕೃಷ್ಣ ಕೊಲ್ಹಾರಕುಲಕರ್ಣಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಶೇಖರ ದಳವಾಯಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜೆ.ಎನ್. ದಿನ್ನಿ ಅಧ್ಯಕ್ಷತೆ ವಹಿಸಿದ್ದರು. ಹಾಸಿಂಪೀರ್ ವಾಲೀಕಾರ, ಪ್ರಭುಗೌಡ ಪಾಟೀಲ, ಜಾವೀದ್‌ ಜಮಾದಾರ, ಕೆಂಚಪ್ಪ ಬಿರಾ ದಾರ, ವಿ.ಜಿ. ಹಗರಗೊಂಡ, ಚಂದ್ರ ಕಾಂತ ಬಿಜ್ಜರಗಿ ವೇದಿಕೆಯಲ್ಲಿದ್ದರು.

ಸಿದ್ದು ಗೌಡನ್ನವರ, ಶರಣಗೌಡ ಪಾಟೀಲ, ಸುಮಂಗಲಾ ಕೋಳೂರ, ಸುಭಾಷ ಭಿಸೆ, ಮಲ್ಲಣ್ಣ ಶಿರಶ್ಯಾಡ, ಭೀರಪ್ಪ ಜುಮನಾಳ, ಅರ್ಜುನ ಶಿರೂರ, ದಾನಮ್ಮ ಕೋರಿ, ಜಹಾಂಗೀರ ಮಿರ್ಜಿ, ರವೂಫ್‌ ಶೇಖ, ಶಂಶುದ್ದೀನ್್‌ ನಾಲಬಂದ, ಕಾ.ಹು. ಬಿಜಾಪುರ, ದಾದಾಪೀರ ಚಿತ್ರದುರ್ಗ ಭಾಗವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ: ಮಧ್ಯಾಹ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಂಭುಲಿಂಗ ಸ್ವಾಮೀಜಿ ಉದ್ಘಾಟಿಸಿದರು. ವಿಜಯ ಕುಮಾರ ಘಾಟಗೆ, ಮಲ್ಲಿಕಾರ್ಜುನ ಅವಟಿ, ಗುರುಸಿಂಗ್‌ ತೊನಶ್ಯಾಳ, ಅಶೋಕ ಚಲವಾದಿ, ಹಾಫಿಜಾ ಇನಾಮದಾರ, ಸುಭಾಷ ಕೊಣ್ಣೂರ ಮುಖ್ಯ ಅತಿಥಿಯಾಗಿದ್ದರು. ಡಿ.ಸಿ.ಸಿ. ಬ್ಯಾಂಕ್‌ ನಿರ್ದೇಶಕ ಬೀರಪ್ಪ ಜುಮ ನಾಳ, ಜಿಲ್ಲಾ ಕುರಬ ಸಂಘದ ಅಧ್ಯಕ್ಷ ಮಲ್ಲಣ್ಣ ಶಿರಶ್ಯಾಡ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT