ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಗೋ ಕೋಳಿಗೆ ಖಾರ ಮಸಾಲೆ...

ನಮ್ಮೂರ ಊಟ
Last Updated 16 ಜನವರಿ 2017, 16:13 IST
ಅಕ್ಷರ ಗಾತ್ರ
ADVERTISEMENT

ಕೋಳಿ ಸಾರು
ಸಾಮಗ್ರಿ:
ಚಿಕನ್ 1 ಕೆ.ಜಿ (ನಾಟಿ/ಗಿರಿರಾಜ/ಫಾರ್ಮ್), ಶುಂಠಿ 2 ಇಂಚು ಉದ್ದದ್ದು, ಬೆಳ್ಳುಳ್ಳಿ 2 ಉಂಡೆ, ಕೊತ್ತಂಬರಿ ಸ್ವಲ್ಪ, ಪುದೀನ ಸೊಪ್ಪು ಸ್ವಲ್ಪ, ಧನಿಯಾ ಪುಡಿ 2 ಚಮಚ, ಖಾರದಪುಡಿ 2ಚಮಚ, ಅರಿಶಿನ ಪುಡಿ ಸ್ವಲ್ಪ,  ಪೆಪ್ಪರ್ (ಕಾಳುಮೆಣಸು) 5, ಲವಂಗ 3, ಚಕ್ಕೆ 1 ಇಂಚು ಉದ್ದದ್ದು, ಈರುಳ್ಳಿ 2, ಟೊಮೆಟೊ 1, ಕಾಯಿ ಅರ್ಧ ಹೋಳು, ಸಾಸಿವೆ, ಎಣ್ಣೆ, ತುಪ್ಪ (ಡಾಲ್ಡಾ),  ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಈರುಳ್ಳಿ ಖಾರಕ್ಕೆ: ಈರುಳ್ಳಿ, ಕೊತ್ತಂಬರಿ, ಪುದೀನ, ಅರಿಶಿನ ಪುಡಿ, ಶುಂಠಿ, ಬೆಳ್ಳುಳ್ಳಿ ನೀರು ಹಾಕಿ ರುಬ್ಬಿಟ್ಟುಕೊಳ್ಳಿ. ಕಾಯಿ ಮಸಾಲೆಗೆ: ಕಾಯಿ, ಟೊಮೆಟೊ, ಪೆಪ್ಪರ್, ಲವಂಗ, ಚಕ್ಕೆ, ಧನಿಯಾಪುಡಿ, ಖಾರದಪುಡಿಗೆ ನೀರು ಹಾಕಿ ರುಬ್ಬಿಟ್ಟುಕೊಳ್ಳಿ. ಕುಕ್ಕರ್‌ಗೆ ಎಣ್ಣೆ ಮತ್ತು ತುಪ್ಪ (ಡಾಲ್ಡಾ) ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಸಿ ನಂತರ ತೊಳೆದ ಚಿಕನ್ ಹಾಕಿ ಉಪ್ಪನ್ನು ಬೆರೆಸಿ ನಂತರ ಸ್ವಲ್ಪ ಫ್ರೈ ಮಾಡಿ. ನಂತರ ಈರುಳ್ಳಿ ಖಾರ ಮಿಶ್ರಣವನ್ನು ಹಾಕಿ, ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಮೂರು ವಿಷಲ್ ಹಾಕಿಸಿ, ಮುಚ್ಚಳ ತೆಗೆದು ಕಾಯಿ ಮಸಾಲೆ ಹಾಕಿ ಚೆನ್ನಾಗಿ ಬೇಯಿಸಿ, ಬೆಂದ ನಂತರ ಬೇಕೆಂದರೆ ಕೊತ್ತಂಬರಿ ಉದುರಿಸಿ.

***
ಚಿಕನ್ ಚಾಪ್ಸ್
ಸಾಮಗ್ರಿ: ಗಿರಿರಾಜಕೋಳಿ 1 ಕೆ.ಜಿ, ಶುಂಠಿ 2 ಇಂಚು, ಬೆಳ್ಳುಳ್ಳಿ 3 ಉಂಡೆ, ಕೊತ್ತಂಬರಿ 1 ಕಟ್ಟು, ಪುದೀನ ಸೊಪ್ಪು 1ಕಟ್ಟು, ಧನಿಯಾ ಪುಡಿ 3 ಚಮಚ, ಹಸಿರು ಮೆಣಸಿನಕಾಯಿ 10, ಅರಿಶಿನ ಪುಡಿ ಸ್ವಲ್ಪ,  ಪೆಪ್ಪರ್ ಪುಡಿ 1 ಚಮಚ, ಗರಂ ಮಸಾಲೆ 1 ಚಮಚ, ಖಾರದಪುಡಿ ಸ್ವಲ್ಪ, ಈರುಳ್ಳಿ 3, ಟೊಮೆಟೊ 1, ಕಾಯಿ ಅರ್ಧ ಹೋಳು, ಸಾಸಿವೆ, ಎಣ್ಣೆ, ತುಪ್ಪ(ಡಾಲ್ಡಾ), ಉಪ್ಪು.

ವಿಧಾನ:  2 ಈರುಳ್ಳಿ, ಕೊತ್ತಂಬರಿ, ಪುದೀನ, ಅರಿಶಿನ ಪುಡಿ, ಶುಂಠಿ, ಬೆಳ್ಳುಳ್ಳಿ, ಪೆಪ್ಪರ್‌ಪುಡಿ, ಕಾಯಿ, ಗರಂ ಮಸಾಲೆ, ಹಸಿಮೆಣಸಿನಕಾಯಿ, ಟೊಮೆಟೊ, ಧನಿಯಾಪುಡಿಗೆ ಕಡಿಮೆ ನೀರು ಹಾಕಿ ದಪ್ಪದಪ್ಪವಾಗಿ ರುಬ್ಬಿಟ್ಟುಕೊಳ್ಳಿ. 1 ಈರುಳ್ಳಿ. ಕೊತ್ತಂಬರಿ ಸ್ವಲ್ಪ, ಪುದೀನ ಸ್ವಲ್ಪ ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ಕುಕ್ಕರ್‌ಗೆ ಎಣ್ಣೆ ಮತ್ತು ತುಪ್ಪ (ಡಾಲ್ಡಾ) ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಸಿ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಮತ್ತು ಪುದೀನ ಹಾಕಿ ಫ್ರೈ ಮಾಡಿದ ಮೇಲೆ ಚೆನ್ನಾಗಿ ತೊಳೆದ ಚಿಕನ್‌ಅನ್ನು ಮತ್ತು ಉಪ್ಪನ್ನು ಹಾಕಿ ಸ್ವಲ್ಪ ಬೆಂದ ನಂತರ ರುಬ್ಬಿದ ಮಿಶ್ರಣವನ್ನು ಹಾಕಿ, ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಕುಕ್ಕರ್ ಮುಚ್ಚಳ ಚೆನ್ನಾಗಿ ಬೇಯಿಸಿ  ಬೆಂದ ನಂತರ ಖಾರ ಕಡಿಮೆ ಇದ್ದರೆ ಖಾರದಪುಡಿ ಉದುರಿಸಿ ಕೊಂಚ ಬೇಯಿಸಿ.

***
ಹಸಿರು ಚಿಕನ್ ಗಿಝರ್ಡ್ ಫ್ರೈ
ಸಾಮಗ್ರಿ:
ಚಿಕನ್ ಗಿಝರ್ಡ್(ಜಠರ) ಅರ್ಧ ಕೆ.ಜಿ, ಶುಂಠಿ - ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಬೆಳ್ಳುಳ್ಳಿ ಎಸಳು 10, ಕೊತ್ತಂಬರಿ ಸ್ವಲ್ಪ, ಪುದೀನ ಸೊಪ್ಪು ಸ್ವಲ್ಪ, ಖಾರದಪುಡಿ 1 ಚಮಚ, ಗರಂ ಮಸಾಲೆ  1 ಚಮಚ, ಈರುಳ್ಳಿ 3, ಟೊಮೆಟೊ 3, ಹಸಿ ಮೆಣಸಿನಕಾಯಿ 6, ನಿಂಬೆ ಹಣ್ಣು 1, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: 2 ಈರುಳ್ಳಿ, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ, ಪುದೀನ ದಪ್ಪದಪ್ಪವಾಗಿ ರುಬ್ಬಿಟ್ಟುಕೊಳ್ಳಿ. 1 ಈರುಳ್ಳಿ, ಟೊಮೆಟೊ, ಕೊತ್ತಂಬರಿ, ಹಸಿ ಮೆಣಸಿನಕಾಯಿಯನ್ನು ಕತ್ತರಿಸಿಟ್ಟುಕೊಳ್ಳಿ. ಕುಕ್ಕರ್‌ಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಸಿ ಮೆಣಸಿನಕಾಯಿ, ಈರುಳ್ಳಿ, ಜಜ್ಜಿದ ಬೆಳ್ಳುಳ್ಳಿ, ಗರಂ ಮಸಾಲೆ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಟೊಮೆಟೊ, ಕೊತ್ತಂಬರಿ ಹಾಕಿದ ನಂತರ ಸಣ್ಣಗೆ ಕತ್ತರಿಸಿದ ತೊಳೆದ ಚಿಕನ್ ಗಿಝರ್ಡ್ ಹಾಕಿ ಮತ್ತು ಉಪ್ಪು, ಖಾರದಪುಡಿ ಸೇರಿಸಿದ ನಂತರ ರುಬ್ಬಿದ ಮಿಶ್ರಣವನ್ನು ಬೆರಸಿ ಕುಕ್ಕರ್ ಮುಚ್ಚಳ ಮುಚ್ಚಿ. ಬೆಂದ ನಂತರ ಬೇಕೆಂದರೆ ನಿಂಬೆರಸವನ್ನು ಬೆರೆಯಿಸಿಕೊಳ್ಳಿ.

***
ಬಿರಿಯಾನಿ ಚಿಕನ್ ಗ್ರೇವಿ
ಸಾಮಗ್ರಿ: ಚಿಕನ್ 1 ಕೆ.ಜಿ, ಶುಂಠಿ ಪೇಸ್ಟ್ 1 ಚಮಚ, ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕೊತ್ತಂಬರಿ 1 ಕಟ್ಟು, ಪುದೀನ ಸೊಪ್ಪು ಅರ್ಧ ಕಟ್ಟು, ಕರಿಬೇವು 1 ಕಡ್ಡಿ, ಖಾರದಪುಡಿ ಅರ್ಧ ಚಮಚ, ಕಾರ್ನ್‌ಫ್ಲೌರ್ 2 ಚಮಚ, ವಿನಿಗರ್ 1 ಚಮಚ, ಮೊಸರು 2 ಚಮಚ, ಅರಿಶಿನ ಪುಡಿ ಅರ್ಧ ಚಮಚ, ಕಾಳುಮೆಣಸು 8, ಲವಂಗ 3, ಚಕ್ಕೆ 1ಇಂಚು ಉದ್ದದ್ದು, ಈರುಳ್ಳಿ 3, ಕಾಯಿ ಅರ್ಧ ಹೋಳು, ಸಾಸಿವೆ, ಮೊಸರು, ಎಣ್ಣೆ, ನಂದಿನಿ ತುಪ್ಪ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಚೆನ್ನಾಗಿ ತೊಳೆದ ಚಿಕನ್‌ಗೆ ಖಾರದಪುಡಿ, ಮೊಸರು, ಸ್ವಲ್ಪ ಉಪ್ಪು, ಅರಿಶಿನಪುಡಿ ಹಾಕಿ ಕಲಸಿ ಒಂದು ಗಂಟೆ ರೆಫ್ರಿಜರೇಟರ್‌ನಲ್ಲಿಡಿ.

ಈರುಳ್ಳಿ ಖಾರಕ್ಕೆ: ಈರುಳ್ಳಿ, ಕೊತ್ತಂಬರಿ, ಪುದೀನ ಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ಗೆ ನೀರು ಹಾಕಿ ರುಬ್ಬಿಟ್ಟುಕೊಳ್ಳಿ. ಕಾಯಿ ಮಸಾಲೆಗೆ: ಹಸಿಮೆಣಸಿನಕಾಯಿ, ಎಣ್ಣೆಯಲ್ಲಿ ಫ್ರೈ ಮಾಡಿದ ಕಾಯಿ, ಚಕ್ಕೆ, ಲವಂಗಗಳಿಗೆ ನೀರು ಹಾಕಿ ರುಬ್ಬಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಮತ್ತು ತುಪ್ಪವನ್ನು ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಸಿ, ಕರಿಬೇವು ಮತ್ತು  ಕಲಸಿಟ್ಟಿರುವ ಚಿಕನ್ ಹಾಕಿ ಉಪ್ಪನ್ನು ಬೆರೆಸಿ ನಂತರ ಈರುಳ್ಳಿ ಖಾರ ಮಿಶ್ರಣ, ನೀರು ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ ನಂತರ ಕಾಯಿ ಮಸಾಲೆ ಹಾಕಿ ಚೆನ್ನಾಗಿ ಬೇಯಿಸಿ, ಬೆಂದ ನಂತರ ಕಾರ್ನ್‌ಫ್ಲೌರ್‌ಅನ್ನು ನೀರಲ್ಲಿ ಕಲಸಿ ಹಾಕಿ ನಂತರ ವಿನಿಗರ್ ಹಾಕಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಉದುರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT