ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡುಂಕುಳಂ ಸ್ಥಾವರಕ್ಕೆ ವಿರೋಧ ಬೇಡ: ರಷ್ಯ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಾಸ್ಕೊ (ಪಿಟಿಐ): ತಮಿಳುನಾಡಿನ ಕೂಡುಂಕುಳಂ ಪರಮಾಣು ಸ್ಥಾವರ ನಿರ್ಮಾಣಕ್ಕೆ ವಿರೋಧ ಮಾಡುತ್ತಿರುವುದರಿಂದ ಪರಮಾಣು ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಭಾರತದ ಮಹತ್ವಾಕಾಂಕ್ಷೆ ಯೋಜನೆಗೆ ಧಕ್ಕೆಯಾಗುವುದರ ಜತೆಗೆ ಚೀನಾಕ್ಕಿಂತ ಮುಂಚೂಣಿ ರಾಷ್ಟ್ರವಾಗಬೇಕು ಎಂಬ ಗುರಿ ತಲುಪಲು ಸಾಧ್ಯವಾಗದೆ ಇರಬಹುದು ಎಂದು ರಷ್ಯ ಎಚ್ಚರಿಕೆ ನೀಡಿದೆ.

ಜಪಾನಿನ ಫುಕುಶಿಮಾ ಪರಮಾಣು ದುರಂತದ ಭಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳ ಕುಮ್ಮಕ್ಕಿನಿಂದ ಜನರು ಪರಮಾಣು ಸ್ಥಾವರವನ್ನು ವಿರೋಧಿಸುತ್ತಿದ್ದು, ಇದರಿಂದ ಆರ್ಥಿಕವಾಗಿ ಬಲಾಡ್ಯ ರಾಷ್ಟ್ರವಾಗಿ ಬೆಳೆಯಲು ಚೀನಾಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ಪರಮಾಣು ತಜ್ಞ ಕೊನ್‌ಸ್ಟಾಂಟಿನ್ ಬೊಗ್ದಾನೊವ್ ಅಭಿಪ್ರಾಯಪಟ್ಟಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT